ಈ ರಾಶಿಯವರಿಗಿಂದು ಉತ್ತಮ ಧನಾಗಮನ ಸಾಧ್ಯತೆ ಇದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಾನಸಿಕ ನೋವು ಕಾಡೀತು. ವಾಹನ ಚಾಲನೆಯಲ್ಲಿ ಎಚ್ಚರದಿಂದಿರಿ. ಆಸ್ತಿ ಹಕ್ಕು ಸಾಧಿಸಲು ನ್ಯಾಯಾಲಯಕ್ಕೆ ಅಲೆದಾಟ. ಶುಭಸಂಖ್ಯೆ: 1

ವೃಷಭ: ದಾಂಪತ್ಯದಲ್ಲಿ ಆಲಸ್ಯ ಕಾಣಿಸಬಹುದು. ಉದ್ಯೋಗದ ಭರವಸೆ ದೊರೆತು ಮಾನಸಿಕ ಸಮಾ ಧಾನ. ಸಂಗಾತಿಯಿಂದ ಅದೃಷ್ಟ. ಶುಭಸಂಖ್ಯೆ: 9

ಮಿಥುನ: ಸಾಲ ಮಾಡುವ ಸಂಭವವಿದೆ. ಕುಟುಂಬ ಸಮೇತ ದೂರ ಪ್ರಯಾಣ. ಮಾತಿನಿಂದ ಶತ್ರುಗಳು ಜಾಸ್ತಿಯಾದಾರು, ಎಚ್ಚರದಿಂದಿರಿ. ಶುಭಸಂಖ್ಯೆ: 8

ಕಟಕ: ಪ್ರೀತಿ ಪ್ರೇಮದ ವಿಚಾರದಲ್ಲಿ ಅಡೆತಡೆ. ಆರೋಗ್ಯ ಸಮಸ್ಯೆ ನಿವಾರಣೆಗೆ ವೈದ್ಯರ ಸಲಹೆ ಪಡೆಯಿರಿ. ಕುಲದೇವರ ದರ್ಶನ ಮಾಡಿ. ಶುಭಸಂಖ್ಯೆ: 3

ಸಿಂಹ: ನೆರೆಹೊರೆಯವರೊಡನೆ ಕಿರಿಕಿರಿಯಾದೀತು. ಸಹೋದರರೊಂದಿಗೆ ವೈರತ್ವ. ಮಕ್ಕಳಿಗೆ ಉನ್ನತ ಹುದ್ದೆ ಪ್ರಾಪ್ತಿಯಾಗಿ ಸಂತೋಷ. ಶುಭಸಂಖ್ಯೆ: 6

ಕನ್ಯಾ: ಕುಟುಂಬದ ಸಮಸ್ಯೆಗಳಿಂದ ಮುಕ್ತಿ ದೊರೆಯುವುದು. ಉತ್ತಮ ಧನಾಗಮನ ಸಾಧ್ಯತೆ ಇದೆ. ಮಾನಸಿಕ ನೆಮ್ಮದಿ ಪ್ರಾಪ್ತಿ. ಶುಭಸಂಖ್ಯೆ:3

ತುಲಾ: ವಾಹನದಿಂದ ಪೆಟ್ಟು. ಅವಕಾಶ ವಂಚಿತರಾಗುವಿರಿ. ಮಾನಸಿಕವಾಗಿ ದೈಹಿಕವಾಗಿ ಆಯಾಸ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 6

ವೃಶ್ಚಿಕ: ಅಧಿಕ ನಿದ್ರೆ ಒಳ್ಳೆಯದಲ್ಲ. ಆತ್ಮೀಯರು ದೂರವಾಗಿ ಮಾನಸಿಕ ನೋವು. ಕುಟುಂಬಕ್ಕೆ ನಷ್ಟ. ರಾಜಕೀಯ ರಂಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 6

ಧನುಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಮಕ್ಕಳಿಂದ ಅನುಕೂಲವಾಗುವುದು. ಅಧಿಕ ಖರ್ಚು ತಲೆದೋರುವ ಸಾಧ್ಯತೆ ಇದೆ. ಶುಭಸಂಖ್ಯೆ: 7

ಮಕರ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ. ಉದ್ಯೋಗದಲ್ಲಿ ತೊಂದರೆಯಾಗುವ ಸಾಧ್ಯತೆ. ವೈರಿಗಳಿಂದ ದೂರವಿರುವುದು ಕ್ಷೇಮ. ಶುಭಸಂಖ್ಯೆ: 2

ಕುಂಭ: ಪತ್ರ ವ್ಯವಹಾರಗಳಿಂದ ಸಂಕಷ್ಟ. ಪ್ರಯಾಣದಲ್ಲಿ ತೊಂದರೆಯಾದೀತು. ದೇವತಾಕಾರ್ಯಗಳಿಗೆ ಅಡೆತಡೆ ಆಗಬಹುದು. ಶುಭಸಂಖ್ಯೆ: 9

ಮೀನ: ಆರ್ಥಿಕವಾಗಿ ಕಷ್ಟದ ಸಮಯ. ಅನಗತ್ಯ ಮಾತಿನಿಂದ ಸಮಸ್ಯೆಯಾಗಬಹುದು. ಪತ್ರ ವ್ಯವಹಾರಗಳಲ್ಲಿ ಹಿನ್ನಡೆಯಾಗಿ ಬೇಸರ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net