ಈ ರಾಶಿಯವರಿಗಿಂದು ಸಮಾಜದಲ್ಲಿ ಗೌರವ, ಮನೆಯಲ್ಲಿ ಶಾಂತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಕಸ್ಮಿಕ ಧನಲಾಭ. ದಾಂಪತ್ಯದಲ್ಲಿ ಪ್ರೀತಿ. ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ. ಆದಾಯದ ಮೂಲ ಸ್ವಲ್ಪ ಹೆಚ್ಚಾಗುವುದು. ಶುಭಸಂಖ್ಯೆ: 9

ವೃಷಭ: ಹಳೆಯ ಒಪ್ಪಂದ ಇತ್ಯರ್ಥವಾಗುವುದು. ಗುರಿ ಸಾಧನೆಗೆ ಒಳ್ಳೆಯ ಕಾಲ ಬಂದಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವುದು. ಶುಭಸಂಖ್ಯೆ:1

ಮಿಥುನ: ಷೇರು ವ್ಯವಹಾರಗಳಿಂದ ಲಾಭವಾಗುವುದು. ಹೆಚ್ಚು ಶ್ರಮ, ಅಲ್ಪ ಗಳಿಕೆ. ದೂರ ಪ್ರಯಾಣ ಸಾಧ್ಯತೆ. ರೈತರಿಗೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 5

ಕಟಕ: ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಸ್ನೇಹಿತರ ಭೇಟಿ. ಮನೆಗೆ ಹಿರಿಯರ ಆಗಮನ. ಭೂಲಾಭ. ಮೃಷ್ಟಾನ್ನ ಭೋಜನ. ಶುಭಸಂಖ್ಯೆ:3

ಸಿಂಹ: ಸ್ವಾಭಿಮಾನದಿಂದ ವಿರಸ ತಲೆದೋರುವುದು. ಮನೆಯಲ್ಲಿ ಅಶಾಂತಿ. ಸಣ್ಣಪುಟ್ಟ ಆಶ್ಚರ್ಯಕರ ಬದಲಾವಣೆ ಕಂಡುಬರುವುದು. ಶುಭಸಂಖ್ಯೆ: 8

ಕನ್ಯಾ: ಮಾನಸಿಕ ಅಸ್ಥಿರತೆಯ ಅನುಭವವಾಗುವುದು. ಸ್ವಂತ ಉದ್ಯಮಿಗಳಿಗೆ ಗಣನೀಯ ಪ್ರಗತಿಯಿದೆ. ಸ್ತ್ರೀಯರಿಂದ ಮನಸ್ಸಿಗೆ ಬೇಸರ. ಶುಭಸಂಖ್ಯೆ: 3

ತುಲಾ: ಕಾರ್ಯದಲ್ಲಿ ಅಡೆತಡೆ. ಸ್ಥಳ ಬದಲಾವಣೆ ಮಾಡಬೇಕಾದೀತು. ದಾಯಾದಿ ಕಲಹ. ವಿಪರೀತ ಖರ್ಚು. ಸೇವಕರಿಂದ ಸಹಾಯ. ಶುಭಸಂಖ್ಯೆ: 6

ವೃಶ್ಚಿಕ: ಅಧಿಕಾರಿಗಳಿಂದ ಪ್ರಶಂಸೆ . ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಪುಣ್ಯಕ್ಷೇತ್ರ ದರ್ಶನ. ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ:3

ಧನುಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಮಾಜದಲ್ಲಿ ಗೌರವ, ಮನೆಯಲ್ಲಿ ಶಾಂತಿ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುವುದು. ಶುಭಸಂಖ್ಯೆ: 6

ಮಕರ: ಶತ್ರುನಾಶ. ಸ್ವಲ್ಪ ಪ್ರಮಾಣದ ಹಣ ಬಂದರೂ ಉಳಿಯದು. ಉತ್ತಮ ಬುದ್ಧಿಶಕ್ತಿ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಪರರ ಧನಪ್ರಾಪ್ತಿ. ಶುಭಸಂಖ್ಯೆ:7

ಕುಂಭ: ಸಾಲಬಾಧೆ ಕಾಡೀತು. ಅನವಶ್ಯಕ ಮಾತುಗಳಿಂದ ದೂರವಿರುವುದು ಜಾಣತನ. ಧನವ್ಯಯ. ಭಾಗ್ಯ ವೃದ್ಧಿ. ವಿವಾಹ ಯೋಗ. ಶುಭಸಂಖ್ಯೆ: 9

ಮೀನ: ಎಲ್ಲಿ ಹೋದರೂ ಅಶಾಂತಿ. ಮನಸ್ಸಿನಲ್ಲಿ ಭಯಭೀತಿ. ಶತ್ರುಬಾಧೆ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ. ರಾಜ ಸನ್ಮಾನ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net