ಈ ರಾಶಿಯವರಿಂದ ಇಂದು ಗೆಳೆಯರಿಗಾಗಿ ಖರ್ಚು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಾಮಾನ್ಯ ಜೀವನಕ್ಕೆ ಧಕ್ಕೆ, ಚಿನ್ನ - ಬೆಳ್ಳಿ ವ್ಯವಹಾರದಲ್ಲಿ ಎಚ್ಚರದಿಂದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 8

ವೃಷಭ: ಅಕಾಲ ಭೋಜನದಿಂದ ಅನಾರೋಗ್ಯ. ವಾದ-ವಿವಾದಗಳಲ್ಲಿ ಎಚ್ಚರ. ಸ್ವಂತ ಉದ್ಯೋಗ ಮಾಡುವ ಮಹಿಳೆಯರಿಗೆ ಧನ ನಷ್ಟ. ಶುಭಸಂಖ್ಯೆ: 2

ಮಿಥುನ: ಸ್ತ್ರೀಯರಿಗೆ ಶುಭ. ಕೃಷಿ ಕಾರ್ಯಗಳಲ್ಲಿ ಭಾಗಿ. ಕಾರ್ಯಸಾಧನೆಗಾಗಿ ತಿರುಗಾಟ. ವ್ಯಸನದಿಂದ ತೊಂದರೆ ಉಂಟಾದೀತು. ಶುಭಸಂಖ್ಯೆ:3

ಕಟಕ: ಮಾತಾಪಿತರ ಸಲಹೆಯಿಂದ ಅನಿರೀಕ್ಷಿತ ಲಾಭವಾಗಲಿದೆ. ನಂಬಿದ ಜನರಿಂದ ಮೋಸವಾಗುವ ಸಾಧ್ಯತೆ. ಅಧಿಕ ಖರ್ಚು. ಶುಭಸಂಖ್ಯೆ:6

ಸಿಂಹ: ಅವಿವಾಹಿತರಿಗೆ ವಿವಾಹಯೋಗ. ಸ್ನೇಹಿತರ ಭೇಟಿ. ಸಾಲದ ಸಮಸ್ಯೆ ನಿವಾರಣೆ. ಸ್ವಂತ ಉದ್ಯೋಗ ದವರಿಗೆ ಸಾಧಾರಣ ಪ್ರಗತಿ. ಶುಭಸಂಖ್ಯೆ: 4

ಕನ್ಯಾ: ಕಾರ್ಯಸಿದ್ಧಿಯ ಹಾದಿಯಲ್ಲಿ ನಾನಾ ವಿಘ್ನಗಳು. ಪರಸ್ಥಳ ವಾಸ. ಆರೋಗ್ಯದ ಕಡೆ ಗಮನ ಹರಿಸಿ. ಕೃಷಿಕರಿಗೆ ನಷ್ಟ. ಶುಭಸಂಖ್ಯೆ: 6

ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನೋವ್ಯಥೆ ಕಾಡಲಿದೆ. ಶ್ರಮಕ್ಕೆ ತಕ್ಕ ಫಲ. ಕುಲದೇವತಾ ಕೃಪೆಗಾಗಿ ಪ್ರಾರ್ಥಿಸಿ. ಶುಭಸಂಖ್ಯೆ: 4

ವೃಶ್ಚಿಕ: ಶತ್ರುಬಾಧೆ. ಸಹೋದ್ಯೋಗಿಗಳಿಂದ ಸಲ್ಲದ ಅಪವಾದ. ವಾಹನ ಅಪಘಾತ ಸಾಧ್ಯತೆ. ಅಲ್ಪ ಲಾಭ. ಆಪ್ತರೊಡನೆ ಕಲಹ. ಶುಭಸಂಖ್ಯೆ: 1

ಧನುಸ್ಸು: ಸಗಟು ವ್ಯಾಪಾರದಲ್ಲಿ ಧನಲಾಭ. ಮನೆಯಲ್ಲಿ ಶುಭಕಾರ್ಯ. ವ್ಯಾಪಾರದಲ್ಲಿ ಲಾಭ. ದುಷ್ಟರಿಂದ ದೂರವಿರಿ. ಇಷ್ಟಾರ್ಥಸಿದ್ಧಿ. ಶುಭಸಂಖ್ಯೆ: 6

ಮಕರ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ. ಚಂಚಲ ಮನಸ್ಸು. ಶರೀರದಲ್ಲಿ ಆತಂಕ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 3

ಕುಂಭ: ಆರೋಗ್ಯದ ಕಡೆ ಗಮನ. ಗೆಳೆಯರಿಗಾಗಿ ಖರ್ಚು. ಸಂಗಾತಿಯೊಂದಿಗೆ ವೈಮನಸ್ಸು. ದ್ರವ್ಯಲಾಭ. ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ: 9

ಮೀನ: ನ್ಯಾಯಾಲಯದ ಆದೇಶದ ಅನುಸಾರ ಆಸ್ತಿಯಿಂದ ಲಾಭ. ಸಾಲದಿಂದ ಮುಕ್ತಿ. ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net