

ಮೇಷ: ಬೇರೆಯವರನ್ನು ಆಶ್ರಯಿಸಲು ಹೋಗದಿರಿ. ನಿಮ್ಮ ಪ್ರತಿಭೆಗೆ ಅಗಾಧ ಶಕ್ತಿ ಇದ್ದು, ಮನ್ನಣೆಗೂ ಅವಕಾಶಗಳಿವೆ. ಶುಭಸಂಖ್ಯೆ: 1
ವೃಷಭ: ಬ್ಯಾಂಕ್ ಸಂಬಂಧಿತ ಕಾಗದಪತ್ರಗಳ ಬಗ್ಗೆ ಜಾಗೃತರಾಗಿರಿ. ಸ್ವಲ್ಪ ಅಜಾಗ್ರತೆಯೂ ದುಬಾರಿಯಾದೀತು. ಶುಭಸಂಖ್ಯೆ: 4
ಮಿಥುನ: ಸದ್ಯದ ಸಂದರ್ಭದ ಅನೇಕ ವಿಚಾರಗಳು ನಿಮಗೆ ಅನುಕೂಲವಾದ ವಾತಾವರಣ ನಿರ್ವಿುಸಿ ನೆಮ್ಮದಿ ತರುತ್ತವೆ. ಶುಭಸಂಖ್ಯೆ: 3
ಕಟಕ: ಮಕ್ಕಳಿಂದ ಬೇಸರ ಉಂಟಾದರೂ ತೋರಿಸಿಕೊಳ್ಳದಿರಿ. ಅವರಿಂದಲೇ ಬೇಸರ ನಿವಾರಣೆ ಸಾಧ್ಯವಾಗಲಿದೆ. ಶುಭಸಂಖ್ಯೆ: 2
ಸಿಂಹ: ಆಪ್ತೇಷ್ಟರಿಂದ ಅಧಿಕವಾದ ತೊಂದರೆಗಳು ಎದುರಾಗಬಹುದು. ಆದರೂ ನಗುನಗುತ್ತ ಎಲ್ಲವನ್ನೂ ನಿಭಾಯಿಸಿ. ಶುಭಸಂಖ್ಯೆ: 5
ಕನ್ಯಾ: ಯಾರ ಜತೆಗೂ ಅನಗತ್ಯವಾದ ರೇಗಾಟ ಬೇಡ. ಸಿಟ್ಟು ಮಾಡಿಕೊಳ್ಳದೆಯೇ ಕಾರ್ಯವನ್ನು ನಿಭಾಯಿಸಿ. ಗೆಲುವಿದೆ. ಶುಭಸಂಖ್ಯೆ: 7
ತುಲಾ: ಸಂಕಟಗಳನ್ನು ಪರಿಹರಿಸುವ ವಿಚಾರವಾಗಿ ವಿಘ್ನನಿವಾರಕನನ್ನು ದೂರ್ವೆಗಳಿಂದ ಆರಾಧನೆ ಮಾಡಿ. ಶುಭವಿದೆ. ಶುಭಸಂಖ್ಯೆ: 6
ವೃಶ್ಚಿಕ: ಬಹಳ ರೀತಿಯ ಕಷ್ಟಗಳನ್ನೆಲ್ಲ ಸಹಿಸಿಕೊಂಡು ಮುಂದೆ ಸಾಗುತ್ತಲಿದ್ದೀರಿ. ಕಾರ್ಯಸಿದ್ಧಿಗೆ ಉತ್ತಮವಾದ ಅವಕಾಶಗಳಿವೆ. ಶುಭಸಂಖ್ಯೆ: 9
ಧನಸ್ಸು: ಕಠಿಣ ಕೆಲಸಗಳನ್ನು ನಿರ್ವಹಿಸುವಾಗ ಹಿರಿಯರ ಸಲಹೆಗಳನ್ನೂ ಪಡೆದುಕೊಳ್ಳಿ. ಇದರಿಂದ ಲಾಭವಿದೆ. ಶುಭಸಂಖ್ಯೆ: 8
ಮಕರ: ಕಚೇರಿಯನ್ನು ಬಿಟ್ಟು ಓಡಿಹೋಗೋಣ ಎಂದು ಅವಸರಪಡುವುದೇನೂ ಬೇಡ. ನಿಧಾನವಾಗಿಯೇ ಪ್ರಯತ್ನಿಸಿ. ಶುಭಸಂಖ್ಯೆ: 1
ಕುಂಭ: ಸೋದರ ಸಂಬಂಧಿಗಳ ಮಧ್ಯೆ ಮನಸ್ತಾಪ ಉಂಟಾಗುವ ಸಾಧ್ಯತೆಗಳನ್ನು ತಡೆಯಲು ಯತ್ನಿಸಿ. ಒಳಿತಾಗಲಿದೆ. ಶುಭಸಂಖ್ಯೆ: 4
ಮೀನ: ಆತುರದ ತೀರ್ಮಾನಗಳಿಂದ ಕಠಿಣ ಸಂದರ್ಭವನ್ನು ಎದುರಿಸಬೇಕಾಗಬಹುದು. ನಿಧಾನವೇ ಪ್ರಧಾನವಾಗಲಿ. ಶುಭಸಂಖ್ಯೆ: 3