

ಮೇಷ: ಧನ ನಷ್ಟವಾಗುವ ಸಾಧ್ಯತೆ. ಅಮೂಲ್ಯ ವಸ್ತುಗಳು ಪ್ರಾಪ್ತಿಯಾಗಿ ಸಂತಸ. ಮಾತಿನಲ್ಲಿ ಹಿಡಿತವಿರಲಿ. ಚೋರ ಭೀತಿಯಿದೆ, ಎಚ್ಚರ. ಶುಭಸಂಖ್ಯೆ: 9
ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ. ದೇವಾಲಯಕ್ಕೆ ಭೇಟಿ ನೀಡುವಿರಿ. ಆರೋಗ್ಯದಲ್ಲಿ ಚೇತರಿಕೆ. ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 5
ಮಿಥುನ: ಧನಲಾಭವಾಗಿ ಮನಸ್ಸಿಗೆ ಸಂತಸ. ವಾಹನ ಖರೀದಿ ಯೋಚನೆ ಮಾಡುವಿರಿ. ಹಿರಿಯರ ಉಪದೇಶವನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 3
ಕಟಕ: ಗಣಕ ಯಂತ್ರದಿಂದ ಲಾಭ. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು. ಪೀಠೋಪಕರಣ ವ್ಯಾಪಾರಿಗಳಿಗೆ ಲಾಭವಾಗುವುದು. ಶುಭಸಂಖ್ಯೆ: 1
ಸಿಂಹ: ಮೇಲಧಿಕಾರಿಗಳಿಂದ ತೊಂದರೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಎಚ್ಚರದಿಂದಿರಿ. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ: 8
ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜತೆಯಲ್ಲಿ ಕಲಹವಾಗುವ ಅಪಾಯವಿದೆ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 9
ತುಲಾ: ಸಹೋದ್ಯೋಗಿಗಳಿಂದ ಸಹಾಯ ಸಿಗಲಿದೆ. ಸರ್ಕಾರಿ ಕೆಲಸದಲ್ಲಿ ಸಫಲತೆ ಸಿಗಲಿದೆ. ಮನೆಯಲ್ಲಿ ಅಶಾಂತಿಯ ವಾತಾವರಣ. ಶುಭಸಂಖ್ಯೆ: 3
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಾತಿನ ಚಕಮಕಿ. ಧನ ನಷ್ಟವಾಗುವುದು. ಆರಕ್ಷಕ ವೃತ್ತಿಯವರಿಗೆ ಅಡಚಣೆ. ಶುಭಸಂಖ್ಯೆ: 9
ಧನುಸ್ಸು: ಹೊಸ ಯೋಜನೆಗಳು ಪ್ರಾರಂಭಗೊಳ್ಳುವವು. ವ್ಯವಸಾಯದಲ್ಲಿ ಲಾಭವಾಗಲಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ ಕೈಸೇರಲಿದೆ. ಶುಭಸಂಖ್ಯೆ: 4
ಮಕರ: ಗುರುಹಿರಿಯರ ದರ್ಶನ ಮಾಡುವಿರಿ. ಬಂಧುಗಳಿಂದ ಮಾನ್ಯತೆ ಸಿಗುವುದು. ಟ್ರಾವೆಲ್ಸ್ನವರಿಗೆ ನಿರೀಕ್ಷೆಗಿಂತ ಅಧಿಕ ಲಾಭ. ಶುಭಸಂಖ್ಯೆ: 9
ಕುಂಭ: ಚಾಲಕ ವೃತ್ತಿಯವರಿಗೆ ಲಾಭ. ಅನಗತ್ಯ ಅಲೆದಾಟ ಮಾಡುವ ಸ್ಥಿತಿ. ಸಕಾಲಕ್ಕೆ ಊಟ ಮಾಡಲಾಗದು. ಆರ್ಥಿಕವಾಗಿ ಲುಕ್ಸಾನು. ಶುಭಸಂಖ್ಯೆ: 5
ಮೀನ: ಶರೀರದಲ್ಲಿ ತಳಮಳ ಉಂಟಾಗುವುದು, ವೈದ್ಯರ ಭೇಟಿ ಅಗತ್ಯ. ಅತಿಯಾದ ನೋವು ಕಾಡಬಹುದು. ಶತ್ರುವಿನಿಂದ ತೊಂದರೆ. ಶುಭಸಂಖ್ಯೆ: 7