ಈ ರಾಶಿಯವರಿಗೆ ಇಂದು ಸಂಜೆ ಶುಭವಾರ್ತೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಟ್ಟಡ ಸಾಮಗ್ರಿಗಳ ವ್ಯಾಪಾರಿಗಳಿಗೆ ನಷ್ಟ. ನಿಮ್ಮ ಸಂಕಲ್ಪಿತ ಕಾರ್ಯಗಳಲ್ಲಿ ಹಿನ್ನಡೆ. ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 8

ವೃಷಭ: ಕುಟುಂಬದ ಹಿರಿಯರಿಗೆ ಅನಾರೋಗ್ಯ. ವಿದ್ಯಾರ್ಥಿಗಳಿಗೆ ವಿಶೇಷ ಪ್ರಗತಿ. ಅವಿವಾಹಿತರಿಗೆ ವಿವಾಹ ಪ್ರಯತ್ನ ವಿಫಲ. ಶುಭಸಂಖ್ಯೆ: 8

ಮಿಥುನ: ಸಹೋದ್ಯೋಗಿಗಳೊಂದಿಗೆ ವಿರೋಧ. ಆಸ್ತಿ ವಿವಾದದ ರ್ತಾಕ ಅಂತ್ಯ. ಸಹೋದರರೊಂದಿಗೆ ಮನಸ್ತಾಪ. ಸಂಜೆ ಸಿಹಿಸುದ್ದಿ. ಶುಭಸಂಖ್ಯೆ: 6

ಕಟಕ: ಶುಭಕಾರ್ಯ ಯತ್ನ ಸಫಲವಾಗಲಿದೆ. ಸಿನಿಮಾ ರಂಗದಲ್ಲಿ ಇರುವವರಿಗೆ ವಿಶೇಷ ದಿನ. ಕುಟುಂಬದೊಂದಿಗೆ ವಿಹಾರ. ಶುಭಸಂಖ್ಯೆ: 3

ಸಿಂಹ: ಪ್ರತಿಭಾನ್ವಿತರಿಗೆ ವಿಶೇಷ ಪೋ›ತ್ಸಾಹ. ಖಾಸಗಿ ಉದ್ಯೋಗಿಗಳಿಗೆ ವಿಶೇಷ ಪ್ರಗತಿ.ಸಾರ್ವಜನಿಕ ರಂಗದಲ್ಲಿ ಮನ್ನಣೆ. ಶುಭಸಂಖ್ಯೆ: 7

ಕನ್ಯಾ: ಸಂಗಾತಿಯೊಂದಿಗೆ ಧಾರ್ವಿುಕ ಆಚರಣೆಯಲ್ಲಿ ಭಾಗಿ. ಅವಿವಾಹಿತರಿಗೆ ವಿವಾಹ ಯತ್ನದಲ್ಲಿ ಸಿದ್ದಿ. ಆಸ್ತಿ ವಿಚಾರದಲ್ಲಿ ವಾಗ್ವಾದ. ಶುಭಸಂಖ್ಯೆ: 9

ತುಲಾ: ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಆತ್ಮೀಯ ಸ್ನೇಹಿತನ ಭೇಟಿ. ಅನವಶ್ಯಕ ತಿರುಗಾಟ. ಆತ್ಮಸ್ಥೈರ್ಯವಿದ್ದರೆ ಯಶ. ಶುಭಸಂಖ್ಯೆ: 4

ವೃಶ್ಚಿಕ: ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಯಶಸ್ಸು ನಿಮ್ಮದೇ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಹಿತಶತ್ರುಗಳಿಂದ ಅಪಪ್ರಚಾರ. ಶುಭಸಂಖ್ಯೆ:1

ಧನುಸ್ಸು: ಕುಟುಂಬ ಸಮಸ್ಯೆಗಳಿಗೆ ಪರಿಹಾರ. ಹಿತವಾಗಿ ಮಿತವಾಗಿ ಮಾತನಾಡಿ, ಒಳ್ಳೆಯದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶ. ಶುಭಸಂಖ್ಯೆ: 5

ಮಕರ: ನಕಾರಾತ್ಮಕ ಚಿಂತನೆಯನ್ನು ಬಿಟ್ಟುಬಿಡಿ. ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ರಾಜಕೀಯದಲ್ಲಿ ಇರುವವರಿಗೆ ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ: 4

ಕುಂಭ: ಉದ್ಯೋಗ ಪ್ರಾಪ್ತಿಯಲ್ಲಿ ಅಡೆತಡೆ. ಕುಟುಂಬದಲ್ಲಿ ಅನವಶ್ಯಕ ಖರ್ಚು. ವಿದೇಶ ಪ್ರಯಾಣ ಸಾಧ್ಯತೆ. ಸಂಜೆ ಶುಭವಾರ್ತೆ. ಶುಭಸಂಖ್ಯೆ: 1

ಮೀನ: ರಾಜಕೀಯದಲ್ಲಿ ಇರುವವರು ಅಧಿಕಾರ ಕಳೆದುಕೊಳ್ಳುವ ಭೀತಿ. ಕುಟುಂಬದಲ್ಲಿ ಮನಸ್ತಾಪ. ವ್ಯಾಪಾರಿಗಳಿಗೆ ತೊಂದರೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net