ಕತ್ತೆಗಳನ್ನೇ ಕುದುರೆಗಳೆಂದು ಬಿಂಬಿಸುವ ವಿಪರ್ಯಾಸ ನೋಡಿ ಬೇಸರಿಸದಿರಿ

Nithya Bhavishya
Published on

ಮೇಷ: ಸರಳವಾಗಿಯೇ ಮಾಡಿ ಮುಗಿಸಬಹುದಾದ

ಕೆಲಸಗಳಿಗೆ ಸುದೀರ್ಘ ಅಡೆತಡೆಗಳು

ಬಂದಾವು. ಎಚ್ಚರ ಇರಲಿ. ಶುಭಸಂಖ್ಯೆ: 9

ವೃಷಭ: ದೂರಪ್ರವಾಸದ ಬಗೆಗೆ ಚಿಂತೆ ಮಾಡಬೇಡಿ.

ವರ್ತಮಾನದ ಕಾರ್ಯವಿಧಾನಕ್ಕೆ ನಿಮ್ಮ

ಕ್ರಿಯಾಶೀಲತೆಯಿಂದ ಜಯ. ಶುಭಸಂಖ್ಯೆ: 7

ಮಿಥುನ: ಮಹಾಮೃತ್ಯುಂಜಯನನ್ನು ಸತತವಾಗಿ

ಸ್ತುತಿಸಿ. ಬಿಕ್ಕಟ್ಟುಗಳಿಂದ ದೂರವಾಗಿ ಸಂತಸದ

ಅನುಭವ ಪಡೆಯುವಿರಿ. ಶುಭಸಂಖ್ಯೆ: 3

ಕಟಕ: ಆತ್ಮೀಯರೇ ನಿಮಗೆ ನೋವಾಗುವಂತೆ

ನಡೆದುಕೊಂಡರೂ ಸಿಟ್ಟಾಗದೆ ಅವರ ಜತೆಗೆ

ಶಾಂತವಾಗಿ ನಡೆದುಕೊಳ್ಳಿ. ಶುಭಸಂಖ್ಯೆ: 1

ಸಿಂಹಾ: ಶ್ರೀದೇವಿ ಜ್ವಾಲಾಮಾಲಿನಿಯನ್ನು ಸ್ತುತಿಸಿ.

ಸಂಕಲ್ಪಿಸಿದ ಕಾರ್ಯಗಳಲ್ಲಿ ಯಶಸ್ವಿಯಾಗಲು

ಅನುಕೂಲವಾಗಲಿದೆ. ಶುಭಸಂಖ್ಯೆ: 4

ಕನ್ಯಾ: ಸಿಹಿತಿನಿಸಿನ ಉದ್ಯಮ ಆರಂಭಿಸುವುದರ

ಕುರಿತ ಯೋಜನೆಗಳು ಬೇಡ. ಇದು

ತೊಂದರೆಗೆ ದಾರಿ ಮಾಡೀತು. ಶುಭಸಂಖ್ಯೆ: 8

ತುಲಾ: ಸ್ನೇಹಿತರೊಡನೆ ನಗುನಗುತ್ತಲೇ ಮಾತನಾಡಿ.

ಆದರೆ ದುಷ್ಟರು ನಿಮ್ಮ ಸ್ನೇಹಿತರಾಗದಂತೆ

ದೂರವೇ ಇದ್ದುಬಿಡಿ. ಶುಭಸಂಖ್ಯೆ: 6

ವೃಶ್ಚಿಕ: ನೀವು ಸುಮ್ಮನೆ ಕುಳಿತಿರುವ ಪ್ರವೃತ್ತಿಯವರಲ್ಲ.

ಆದರೆ ಆರೋಗ್ಯದ ಕುರಿತಾಗಿ ಮಾತ್ರ

ಖಂಡಿತ ಅಲಕ್ಷ್ಯ ಮಾಡದಿರಿ. ಶುಭಸಂಖ್ಯೆ: 2

ಧನಸ್ಸು: ಜನರು ನಾನಾ ರೀತಿಯ ಟೀಕೆಗಳನ್ನು

ಮಾಡಬಹುದು. ನೀವು ಎಲ್ಲರನ್ನೂ ಸಮಾಧಾನ

ಮಾಡಲು ಹೋಗದಿರಿ. ಶುಭಸಂಖ್ಯೆ: 5

ಮಕರ: ಕತ್ತೆಗಳೇ ಕುದುರೆಗಳೆಂದು ಬಿಂಬಿಸಲ್ಪಡುವ

ವಿಪರ್ಯಾಸ ನೋಡಿ ಬೇಸರಿಸದಿರಿ. ಬಾಳನ್ನು

ಎದುರಿಸಿ. ಗೆಲುವಿದೆ. ಶುಭಸಂಖ್ಯೆ: 9

ಕುಂಭ: ಕೆಲಸಗಳಲ್ಲಿ ವಿಜಯಶಾಲಿಯಾಗಬೇಕು

ಎಂಬ ನಿಮ್ಮ ಆಕಾಂಕ್ಷೆಗೆ ಸೋಲಿಲ್ಲ.

ಪರಿಶ್ರಮದ ದಾರಿ ಇದ್ದೇ ಇದೆ. ಶುಭಸಂಖ್ಯೆ: 7

ಮೀನ: ಅಂದುಕೊಂಡ ಕಾರ್ಯಗಳು ಬೇಗ ನೆರವೇರುತ್ತಿಲ್ಲ

ಎಂಬ ಚಿಂತೆಯನ್ನು ಬಿಟ್ಟುಬಿಡಿ. ಅದರಿಂದ

ನಿಮ್ಮ ಕೆಲಸ ಹಗುರವಾಗಲಿದೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net