ಈ ರಾಶಿಯವರ ಕುಟುಂಬ ಜೀವನದಲ್ಲಿ ಇಂದು ಮಹತ್ವದ ತಿರುವು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಿ ಮೆಚ್ಚುಗೆ ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ಒಪ್ಪಂದಕ್ಕಾಗಿ ಓಡಾಟ. ಆರ್ಥಿಕ ಪ್ರಗತಿ. ಶುಭಸಂಖ್ಯೆ: 5

ವೃಷಭ: ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಮಾತನಾಡುವಾಗ ಎಚ್ಚರಿಕೆಯಿಂದಿರಿ. ಅನಾರೋಗ್ಯ ಕಾಡೀತು. ಶುಭಸಂಖ್ಯೆ: 8

ಮಿಥುನ: ಕುಟುಂಬ ಜೀವನದಲ್ಲಿ ಸಂತೋಷ, ಶಾಂತಿ. ತಂದೆಯಿಂದ ಸಲಹೆ ಪಡೆಯಿರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶುಭಸಂಖ್ಯೆ: 6

ಕಟಕ: ಕಚೇರಿಯಲ್ಲಿ ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಿ. ನಿಮ್ಮ ನಿಧಾನಗತಿಯಿಂದ ತೊಂದರೆ. ಕುಟುಂಬದಲ್ಲಿ ಮನಸ್ತಾಪ. ಶುಭಸಂಖ್ಯೆ: 1

ಸಿಂಹ: ಯಾರನ್ನೂ ನಂಬಬೇಡಿ. ಕೃಷಿ ಸಂಬಂಧಿ ವ್ಯಾಪಾರದಲ್ಲಿ ಲಾಭ. ಆರ್ಥಿಕ ಸ್ಥಿತಿ ಉತ್ತಮ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 7

ಕನ್ಯಾ: ಸಂಗಾತಿಯೊಂದಿಗೆ ಸಂಬಂಧ ಹದಗೆಡುತ್ತದೆ. ಪೋಷಕರ ಬೆಂಬಲ ಪಡೆಯುವಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಯಶ. ಶುಭಸಂಖ್ಯೆ: 2

ತುಲಾ: ಭವಿಷ್ಯದ ಕಾರ್ಯ ಯೋಜನೆ ಸಫಲ. ಸ್ನಾಯು ಸಂಬಂಧಿ ರೋಗಗಳು ಉಲ್ಭಣ. ಸಾರ್ವಜನಿಕ ರಂಗದಲ್ಲಿ ಮಾನಸನ್ಮಾನ. ಶುಭಸಂಖ್ಯೆ: 8

ವೃಶ್ಚಿಕ: ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭ. ಆರ್ಥಿಕ ಪರಿಸ್ಥಿತಿ ಸುಧಾರಣೆ. ವೈಯಕ್ತಿಕ ಜೀವನದಲ್ಲಿ ನಿರಾಶೆ. ಕಲಾವಿದರಿಗೆ ಶುಭ. ಶುಭಸಂಖ್ಯೆ: 6

ಧನುಸ್ಸು: ಆರ್ಥಿಕ ದೃಷ್ಟಿಯಿಂದ ಇದು ದುಬಾರಿ ದಿನ. ಕುಟುಂಬ ಜೀವನವು ಸುಖಕರ. ಅನಾರೋಗ್ಯ ಕಾಡುವ ಸಾಧ್ಯತೆ. ಹುಷಾರಾಗಿ ಇರಿ. ಶುಭಸಂಖ್ಯೆ: 3

ಮಕರ: ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ. ಸಂಗಾತಿಯ ಜೊತೆ ವಿರಸ. ಕ್ಷುಲ್ಲಕ ವಿಷಯಕ್ಕೆ ತಲೆಕೆಡಿಸಿಕೊಳ್ಳಬೇಡಿ. ಶುಭಸಂಖ್ಯೆ: 7

ಕುಂಭ: ಲೋಹದ ವ್ಯಾಪಾರಿಗಳಿಗೆ ಅದೃಷ್ಟದ ದಿನ. ಹಠಾತ್ ಹಣಗಳಿಕೆಯ ಪ್ರಯತ್ನ ವಿಫಲ. ಗುರು ಹಿರಿಯರ ಆಶೀರ್ವಾದ ಪ್ರಾಪ್ತಿ. ಶುಭಸಂಖ್ಯೆ: 5

ಮೀನ: ಕುಟುಂಬ ಜೀವನದಲ್ಲಿ ಮಹತ್ವದ ತಿರುವು. ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ. ಆಸ್ತಿ ವಿವಾದಕ್ಕೆ ತಾರ್ಕಿಕ ಅಂತ್ಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net