ಈ ರಾಶಿಯವರಿಗೆ ಕೈಕೊಂಡ ಕಾರ್ಯ ಯೋಜನೆಯಿಂದ ನಿರೀಕ್ಷೆಗೂ ಮೀರಿದ ವರಮಾನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಾಳ್ಮೆಯಿಂದ ಕುಟುಂಬದ ಸಮಸ್ಯೆ ನಿವಾರಿಸಿ. ಕೃಷಿವ್ಯವಹಾರಗಳಿಂದ ವರಮಾನ. ಸಂಗಾತಿಯ ಸಲಹೆಯಿಂದ ಯಶಸ್ಸು. ಶುಭಸಂಖ್ಯೆ: 1

ವೃಷಭ: ಉದ್ಯೋಗದಲ್ಲಿ ಯಶ. ರಾಜಕೀಯದಲ್ಲಿರುವವರಿಗೆ ಪದವಿ ಪ್ರಾಪ್ತಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಪ್ರಯಾಣ ಸಂಭವ. ಶುಭಸಂಖ್ಯೆ: 8

ಮಿಥುನ: ಸಾರ್ವಜನಿಕವಾಗಿ ತಾಳ್ಮೆಯಿರಲಿ. ಆರೋಗ್ಯ ಹುಷಾರು. ವಿಚಾರ ಮಾಡದೆ ಕೈಗೊಂಡ ನಿರ್ಧಾರದಿಂದ ಸಮಸ್ಯೆ. ಧನಾಗಮ. ಶುಭಸಂಖ್ಯೆ: 7

ಕಟಕ: ಪದವಿಗಾಗಿ ಪ್ರಯತ್ನ, ಕಾರ್ಯಸಿದ್ದಿ. ಅಧ್ಯಯನದಲ್ಲಿ ತತ್ಪರತೆ. ಸಹನೆಯಿಂದ ವರ್ತಿಸಿ. ಉದಾರ ಮನೋಭಾವ ಬೆಳೆಸಿಕೊಳ್ಳಿ. ಶುಭಸಂಖ್ಯೆ: 3

ಸಿಂಹ: ವಾಹನ ಖರೀದಿ ಸಾಧ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆತುರದ ನಿರ್ಣಯದಿಂದ ನಷ್ಟ ಸಂಭವ. ಶುಭಸಂಖ್ಯೆ: 6

ಕನ್ಯಾ: ಕೈಕೊಂಡ ಕಾರ್ಯ ಯೋಜನೆಯಿಂದ ನಿರೀಕ್ಷೆಗೂ ಮೀರಿದ ವರಮಾನ. ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಗೌರವ. ಶುಭಸಂಖ್ಯೆ: 2

ತುಲಾ: ಹಠಮಾರಿತನದಿಂದ ದ್ವೇಷಕಟ್ಟಿಕೊಳ್ಳಬೇಡಿ. ಸಹನೆಯಿರಲಿ. ನಿರೀಕ್ಷಿತ ಗುರಿ ಸಾಧಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಶುಭಸಂಖ್ಯೆ: 6

ವೃಶ್ಚಿಕ: ಸಮಾಜದಲ್ಲಿ ಸ್ಥಾನ ಮಾನ. ಬಂಧುಮಿತ್ರರ ಸಹಕಾರ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಕೈತುಂಬಾ ವೇತನ ಸಾಧ್ಯತೆ. ಶುಭಸಂಖ್ಯೆ: 9

ಧನಸ್ಸು: ಉದ್ಯೋಗ ಬದಲಾವಣೆ ಸಂಭವ. ಪ್ರಯಾಣ. ಮಿತ್ರರ ಸಮಾಗಮ. ಆಸ್ತಿ ವಿಚಾರದಲ್ಲಿ ಮುನ್ನಡೆ. ಸಾಂಸಾರಿಕ ಸಮಾಧಾನ. ಶುಭಸಂಖ್ಯೆ: 1

ಮಕರ: ಮಕ್ಕಳಿಂದ ಸಂತೋಷ. ಹಳೆಯ ಮಿತ್ರನ ಭೇಟಿ. ಉದ್ಯೋಗ ವ್ಯವಹಾರಗಳಲ್ಲಿ ವಿಪುಲ ಅವಕಾಶ. ಸಾಲಗಾರರಿಂದ ಕಿರಿಕಿರಿ. ಶುಭಸಂಖ್ಯೆ: 1

ಕುಂಭ: ಆಸ್ತಿ ವಿಚಾರದಲ್ಲಿ ಸಮಸ್ಯೆ ಹೆಚ್ಚಲಿದೆ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಹಿನ್ನೆಡೆ. ಧನಾರ್ಜನೆ ಉತ್ತಮ. ಶುಭಸಂಖ್ಯೆ: 4

ಮೀನ: ಗೃಹೋಪಯೋಗಿ ವಸ್ತು ಸಂಗ್ರಹದಲ್ಲಿ ಮೋಸ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net