ಒಂಟಿ ಹೋರಾಟ ನಡೆಸುತ್ತಿರುವ ಈ ರಾಶಿಯವರಿಗೆ ಹಿರಿಯರೊಬ್ಬರ ನೆರವಿನ ಹಸ್ತ ಸಿಗುವುದಂತೆ...

Nithya Bhavishya
Published on

ಮೇಷ: ಮನೆ ಕಟ್ಟುವ ಯೋಚನೆಗೆ ಸಾಕಾರತೆ

ಒದಗುವ ಅವಕಾಶವಿದೆ. ಸಾಲ ಮಾಡದೆ

ಮನೆ ಕಟ್ಟಿಸಲು ನಿರ್ಧರಿಸಿ. ಶುಭಸಂಖ್ಯೆ: 2

ವೃಷಭ: ಮಿತ್ರರನ್ನೆಲ್ಲ ಕುರುಡಾಗಿ ನಂಬಿದರೆ

ಮೋಸವಾದೀತು. ಮುಖ ಗಂಟಿಕ್ಕದಿರಿ.

ಲಾಭಕ್ಕೂ, ಸಿದ್ಧಿಗೂ ಅವಕಾಶವಿದೆ. ಶುಭಸಂಖ್ಯೆ: 4

ಮಿಥುನ: ನಿಮ್ಮ ಕಲ್ಪನಾಶೀಲತೆ ಉಜ್ವಲವಾಗಿದೆ.

ದೇವರ ಕೃಪೆಯೂ ಇದೆ. ಸಾಹಿತ್ಯ

ಕೃಷಿಯಿಂದ ಮೆಚ್ಚುಗೆ ಗಳಿಸುವಿರಿ. ಶುಭಸಂಖ್ಯೆ: 2

ಕಟಕ: ನಿಮ್ಮ ಸಮಸ್ಯೆಯು ಬಾಳಸಂಗಾತಿಯ

ಜಾಣ್ಮೆಯಿಂದ ಪರಿಹಾರವಾಗಲಿದೆ.

ಕುಲದೇವರನ್ನು ಪ್ರಾರ್ಥಿಸಿಕೊಳ್ಳಿ. ಶುಭಸಂಖ್ಯೆ: 7

ಸಿಂಹ: ಸ್ವಜನರೇ ನಿಂದನೆ ಮಾಡಬಹುದು.

ಹೆದರದಿರಿ. ನಿಮ್ಮ ಪ್ರತಿಭೆ ಮನ್ನಣೆ ಒದಗುವ

ಕಾಲ ಕೂಡಿ ಬರುತ್ತಲಿದೆ. ಶುಭಸಂಖ್ಯೆ: 6

ಕನ್ಯಾ: ಸುತ್ತಾಟ ನಡೆಸುವ ಸಂದರ್ಭ ಬಂದರೂ

ಕೆಲಸ ಪೂರ್ಣವಾಗದು. ನಿರಾಶೆ ಬೇಡ.

ಪರಶಿವನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4

ತುಲಾ: ಒಂಟಿ ಹೋರಾಟವನ್ನು ಮುಂದುವರಿಸದಿರಿ.

ಹಿರಿಯರೊಬ್ಬರು ನಿಮ್ಮನ್ನು ಕಷ್ಟಗಳಿಂದ

ಹೊರಕ್ಕೆ ತರಬಲ್ಲರು. ಶುಭಸಂಖ್ಯೆ: 8

ವೃಶ್ಚಿಕ: ತೀರ್ಥಕ್ಷೇತ್ರಕ್ಕೆ ಭೇಟಿ ನೀಡಲು ನಿರ್ಧಾರ

ಮಾಡುವಿರಿ. ಸಾಮಾಜಿಕವಾಗಿಯೂ

ಜನಮನ್ನಣೆ ಪಡೆಯುವಿರಿ. ಶುಭಸಂಖ್ಯೆ: 9

ಧನಸ್ಸು: ಖರ್ಚಿನ ಹೊರೆ ಎದುರಾದರೂ ತಳಮಳ

ಬೇಡ. ಈಗ ಕೂಡಿಡುವ ಕಾಲವಲ್ಲ.

ಗಣೇಶನ ಸ್ತುತಿಯಿಂದ ಸಿದ್ಧಿ. ಶುಭಸಂಖ್ಯೆ: 3

ಮಕರ: ಅಪರೂಪದ ಬಂಧುಗಳ ಭೇಟಿ

ಮಾಡುವ ಸಂದರ್ಭ ಒದಗಿಬರಲಿದೆ.

ಮಕ್ಕಳಿಗೆ ಹೊಸ ಅವಕಾಶ ತೆರೆಯಲಿದೆ. ಶುಭಸಂಖ್ಯೆ: 5

ಕುಂಭ: ಮಿತ್ರರ ಜತೆ ಭೋಜನ ಮಾಡುವ

ಅವಕಾಶವಿದೆ. ಶುಭವಾರ್ತೆಯಿಂದ ಕುಟುಂಬದಲ್ಲಿ

ಹರ್ಷದ ವಾತಾವರಣ. ಶುಭಸಂಖ್ಯೆ: 6

ಮೀನ: ಕೈ ಇಟ್ಟ ಕಡೆಗಳಲ್ಲೆಲ್ಲ ಸುಲಭದ

ಜಯವಿದೆ. ಆದರೂ ಸಂಬಂಧಿಗಳ ವಿಚಾರದಲ್ಲಿ

ಸಲುಗೆ ಕೊಡುವುದು ಬೇಡ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net