

ಮೇಷ: ಸುಲಭವಾಗಿ ಬಗೆಹರಿಯುವ ವಿಷಯಗಳಿಗೆ ಗೋಜಲು ಮಾಡಿಕೊಳ್ಳಬೇಡಿ. ಸಂಧಾನದಿಂದ ಸಮಸ್ಯೆಗಳಿಗೆ ಮುಕ್ತಿ. ಶುಭಸಂಖ್ಯೆ: 3
ವೃಷಭ: ಆತ್ಮೀಯರೊಂದಿಗೆ ಸಮಾಲೋಚನೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಬೈಗುಳ ಕೇಳಬೇಕಾದೀತು. ಶುಭಸಂಖ್ಯೆ: 9
ಮಿಥುನ: ತಾಳ್ಮೆಯಿರಲಿ. ಕುಟುಂಬದಲ್ಲಿ ಸಮಾಲೋಚಿಸಿ ನಿರ್ಧರಿಸಿ. ಪತ್ನಿಯೊಂದಿಗೆ ವಿಹಾರ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8
ಕಟಕ: ನಿಮ್ಮ ಆಲಸ್ಯತನದಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಅನ್ನೋ ಪರಿಸ್ಥಿತಿ. ಗೃಹನಿರ್ವಣ ಕೆಲಸಕ್ಕೆ ಚಿಂತನೆ. ಶುಭಸಂಖ್ಯೆ: 1
ಸಿಂಹ: ಹಿತಶತ್ರುಗಳಿಂದ ಅಸಮಾಧಾನ. ತಂದೆ-ತಾಯಿಯ ಸಲಹೆಯನ್ನು ಸ್ವೀಕರಿಸಿ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 3
ಕನ್ಯಾ: ಹಿಂದಿನ ವಿವಾದ ಇತ್ಯರ್ಥವಾಗಲಿದೆ. ಕುಟುಂಬದವರ ಭೆೇಟಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಶುಭಸಂಖ್ಯೆ: 6
ತುಲಾ: ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಹುಷಾರು. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6
ವೃಶ್ಚಿಕ: ಬಂಧುಗಳ ಆಗಮನ. ಕುಟುಂಬದೊಂದಿಗೆ ಸಂತಸದ ಕ್ಷಣಗಳು. ಪತ್ನಿಯೊಂದಿಗೆ ಘರ್ಷಣೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5
ಧನಸ್ಸು: ಇಂದು ಸಿಕ್ಕಿದ ಜಯದಲ್ಲಿ ಮರೆಯಬೇಡಿ. ಶತ್ರುಗಳನ್ನು ಹಗುರವಾಗಿ ಭಾವಿಸಬೇಡಿ. ಕುಟುಂಬ ವಿವಾದ ಸುಖಾಂತ್ಯ. ಶುಭಸಂಖ್ಯೆ: 4
ಮಕರ: ನೂತನ ಯೋಜನೆಗಳಿಗೆ ಕುಟುಂಬದ ಬೆಂಬಲ ಪಡೆಯಿರಿ. ಸಂತಸದಿಂದ ಇರಿ. ಆರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 3
ಕುಂಭ: ಕಾರ್ಯಸಿದ್ದಿಯಲ್ಲಿ ಪ್ರತಿರೋಧ ಬರಬಹುದು. ಗಣಪತಿಯನ್ನು ಪೂಜಿಸಿ. ಆರೋಗ್ಯದ ಕಡೆ ನಿಗಾ ಇರಲಿ. ಧನವ್ಯಯ. ಶುಭಸಂಖ್ಯೆ:7
ಮೀನ : ಕನಸು ನನಸಾಗುವ ಸುದಿನ. ವಿವಾಹದ ವಿಷಯದಲ್ಲಿ ನಿಮ್ಮದೇ ಅಂತಿಮ ತೀರ್ವನ. ದಿನಾಂತ್ಯಕ್ಕೆ ಶುಭವಾರ್ತೆ. ಶುಭಸಂಖ್ಯೆ: 8