ಇಂದು ಈ ರಾಶಿಯ ಮಹಿಳೆಯರ ಕನಸುಗಳು ಈಡೇರಲಿವೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಧಿಕಾರಿ ವರ್ಗದವರಿಗೆ ಬಡ್ತಿ ಸಿಗಬಹುದು. ಅವಿವಾಹಿತರಿಗೆ ವಿವಾಹ ನಿಶ್ಚಯ. ಮನೆಯಲ್ಲಿ ಸಂತಸ ತುಂಬಿದ ವಾತಾವರಣ. ಶುಭಸಂಖ್ಯೆ: 9

ವೃಷಭ: ಮನೆಯಲ್ಲಿ ಮಂಗಳಕಾರ್ಯ. ಕೃಷಿಕರಿಗೆ ಯಂತ್ರೋಪಕರಣಗಳ ಖರೀದಿ. ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯಲಿದೆ. ಶುಭಸಂಖ್ಯೆ: 3

ಮಿಥುನ: ಕುಟುಂಬದ ಮನಸ್ತಾಪ ತಪ್ಪಿಸಲು ತಾಳ್ಮೆಯಿಂದ ವರ್ತಿಸಿ. ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ. ಶಿಕ್ಷಕರಿಗೆ ವಿಶೇಷ ದಿನ. ಶುಭಸಂಖ್ಯೆ: 8

ಕಟಕ: ಬಂಧು ಮಿತ್ರರೊಂದಿಗೆ ಕಾಲ ಕಳೆಯುವಿರಿ. ದೇವಾಲಯಗಳಿಗೆ ಭೇಟಿ ಕೊಡುವಿರಿ. ದಿನಾಂತ್ಯದಲ್ಲಿ ಆಯಾಸ ಕಾಣಿಸಬಹುದು. ಶುಭಸಂಖ್ಯೆ: 1

ಸಿಂಹ: ನೂತನ ವಾಹನ ಖರೀದಿಯ ತೀರ್ಮಾನ ಕೈಗೊಳ್ಳುವಿರಿ.ಕುಟುಂಬದ ಜತೆ ಸಂತಸದ ಕ್ಷಣಗಳು. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 4

ಕನ್ಯಾ: ಹೊಸ ಉದ್ಯಮದ ವಿಚಾರದಲ್ಲಿ ದುಡುಕಬೇಡಿ. ಪ್ರಯಾಣಕ್ಕೆ ನಿರ್ಧಾರ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದ. ಶುಭಸಂಖ್ಯೆ: 2

ತುಲಾ: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ. ಕಲಾವಿದರಿಗೆ ಸಾರ್ವಜನಿಕ ಮನ್ನಣೆ. ಅಧಿಕಾರಿ ವರ್ಗದವರಿಗೆ ವಿಶೇಷ ದಿನ. ಶುಭಸಂಖ್ಯೆ: 5

ವೃಶ್ಚಿಕ: ಕುಟುಂಬದೊಂದಿಗೆ ಪ್ರವಾಸ ಸಾಧ್ಯತೆ. ಕಾರ್ಖಾನೆ ಮಾಲೀಕರಿಗೆ ಒತ್ತಡ. ಮನೆಗೆ ಆಕಸ್ಮಿಕ ಅತಿಥಿ ಆಗಮನದಿಂದ ಸಂತಸ. ಶುಭಸಂಖ್ಯೆ: 7

ಧನುಸ್ಸು: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ವ್ಯಾಪಾರಸ್ಥರಿಗೆ ಶತ್ರುಗಳಿಂದ ತೊಂದರೆ. ಹಣಕಾಸಿನ ವಿಚಾರದಲ್ಲಿ ನಷ್ಟವಾದೀತು. ಶುಭಸಂಖ್ಯೆ: 4

ಮಕರ: ಹಿರಿಯರ ಮಾರ್ಗದರ್ಶನದಿಂದ ವಿಪತ್ತಿನಿಂದ ಪಾರು. ಷೇರು ವ್ಯವಹಾರಸ್ಥರಿಗೆ ಲಾಭ. ರಕ್ತಸಂಬಂಧಿಗಳಿಂದ ವಿರೋಧ. ಶುಭಸಂಖ್ಯೆ: 6

ಕುಂಭ: ಮಹಿಳೆಯರ ಕನಸುಗಳು ಈಡೇರಲಿವೆ. ಸಾಮಾಜಿಕ ಕಾರ್ಯಕರ್ತರಿಗೆ ವಿಶೇಷ ಗೌರವಾದರ. ದೊಡ್ಡ ಉದ್ದಿಮೆದಾರರಿಗೆ ಲಾಭ. ಶುಭಸಂಖ್ಯೆ:1

ಮೀನ: ಕುಟುಂಬದ ವಿಚಾರವಾಗಿ ಕೋರ್ಟ್ ತೀರ್ಪು ನಿಮ್ಮ ಪರ . ಖಾಸಗಿ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net