ಈ ರಾಶಿಯವರಿಗೆ ಇಂದು ಸ್ತ್ರೀಯರ ಸಹಾಯದಿಂದ ಉತ್ತಮ ಸಂಪತ್ತು ಪ್ರಾಪ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅತಿಯಾದ ಧಾರಾಳತನ, ದಾನದಿಂದ ಆರ್ಥಿಕ ತೊಂದರೆ ಸಂಭವ. ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ. ಮಿತ್ರರ ಸಮಾಗಮ. ಶುಭಸಂಖ್ಯೆ: 9

ವೃಷಭ: ಸ್ತ್ರೀಯರ ಸಹಾಯದಿಂದ ಉತ್ತಮ ಸಂಪತ್ತು ಪ್ರಾಪ್ತಿ. ದಾಂಪತ್ಯ ಸುಖ. ಮಕ್ಕಳ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ. ಶುಭಸಂಖ್ಯೆ: 6

ಮಿಥುನ: ಜಲೋತ್ಪನ್ನ ವಸ್ತುಗಳ ವ್ಯವಹಾರದಿಂದ ಲಾಭ. ಹಿರಿಯರಲ್ಲಿ, ಸಹೋದ್ಯೋಗಿಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ ಗುರಿ ತಲುಪಿ. ಶುಭಸಂಖ್ಯೆ: 1

ಕಟಕ: ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮಿಂದ ಸಹಾಯ ಪಡೆದುಕೊಳ್ಳುವವನಿಂದ ಮೋಸ ಹೋಗದಿರಿ. ನಿರೀಕ್ಷಿತ ಧನಾಗಮ. ಶುಭಸಂಖ್ಯೆ: 4

ಸಿಂಹ: ದೀರ್ಘ ಪ್ರಯಾಣ. ದೈಹಿಕ ಶ್ರಮವಿದ್ದರೂ ಬುದ್ಧಿಶಕ್ತಿ, ಧೈರ್ಯ, ಉದಾರಾದಿ ಗುಣಗಳಿಂದ ಕಾರ್ಯಕ್ಷೇತ್ರದಲ್ಲಿ ಜನಮನ್ನಣೆ. ಶುಭಸಂಖ್ಯೆ: 3

ಕನ್ಯಾ: ಮಿತ್ರರಲ್ಲಿ, ಪಾಲುದಾರರಲ್ಲಿ ಆತ್ಮೀಯರಲ್ಲಿ ಸಂಶಯಕ್ಕೆ ಅವಕಾಶ ನೀಡದೇ ನೇರವಾಗಿ ವ್ಯವಹರಿಸಿ. ನಿರೀಕ್ಷಿತ ಲಾಭ ಪಡೆಯಿರಿ. ಶುಭಸಂಖ್ಯೆ: 7

ತುಲಾ: ನಿರೀಕ್ಷಿತ ಸ್ಥಾನ, ಗೌರವಾದಿ ಸುಖ. ಮಿತ್ರರ ಸಮಾಗಮ. ಧರ್ಮಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಗುರುಗಳಿಂದ ಪೋ›ತ್ಸಾಹ. ಶುಭಸಂಖ್ಯೆ: 4

ವೃಶ್ಚಿಕ: ಅಧಿಕ ಶ್ರಮವಹಿಸಿ. ಮಿತ್ರರ ಸಹಯೋಗದಿಂದ ಕಾರ್ಯ ಸಾಧಿಸಿದ ತೃಪ್ತಿ. ರಫ್ತು ಆಮದು ವ್ಯವಹಾರಗಳಲ್ಲಿ ಉತ್ತಮ ಅವಕಾಶ. ಶುಭಸಂಖ್ಯೆ: 1

ಧನುಸ್ಸು: ಗುರುಹಿರಿಯರಲ್ಲಿ, ಮೇಲಧಿಕಾರಿಗಳಲ್ಲಿ ಉದಾರತನದಿಂದ ವ್ಯವಹರಿಸಿ. ಕಾರ್ಯ ಸಾಧಿಸಿ. ಧನಾರ್ಜನೆಗೆ ಕೊರತೆ ಇರದು. ಶುಭಸಂಖ್ಯೆ:8

ಮಕರ: ವಿದ್ಯಾರ್ಥಿಗಳಿಗೆ ಶ್ರಮದಿಂದ ಲಾಭ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರರ ಜತೆ ಅನ್ಯೋನ್ಯತೆಯಿಂದ ವ್ಯವಹರಿಸಿ. ಶುಭಸಂಖ್ಯೆ: 9

ಕುಂಭ: ನಿರೀಕ್ಷಿತ ಶುಭಫಲ ಅನುಭವಿಸಿ. ದೂರ ಪ್ರಯಾಣದಿಂದ ಉತ್ತಮ ಧನಾರ್ಜನೆ. ರಾಜಕೀಯ ಕ್ಷೇತ್ರದವರಿಗೆ ಲಾಭ. ಶುಭಸಂಖ್ಯೆ: 2

ಮೀನ: ಸಹನೆಯಿಂದ ವ್ಯವಹರಿಸಿ. ಕಾರ್ವಿುಕ ವರ್ಗದವರಿಗೆ ಪ್ರೋತ್ಸಾಹಿಸಿ. ನಿರೀಕ್ಷಿತ ಲಾಭ ಪಡೆಯಿರಿ. ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net