

ಮೇಷ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಅಜೀರ್ಣ ಸಮಸ್ಯೆ. ಆರೋಗ್ಯದಲ್ಲಿ ವ್ಯತ್ಯಾಸ. ಆಹಾರದ ವಿಷಯದಲ್ಲಿ ಎಚ್ಚರದಿಂದಿರಿ. ಶುಭಸಂಖ್ಯೆ: 9
ವೃಷಭ: ಉದ್ವೇಗಕ್ಕೆ ಒಳಗಾಗದಿರಿ. ಹಣ ಹೂಡಿಕೆಯಲ್ಲಿ ಸಾರಾಸಾರ ವಿಚಾರ ಮಾಡಿ ಮುಂದುವರಿಯಿರಿ. ಪಶುಸಂಗೋಪನೆಯಲ್ಲಿ ಲಾಭ. ಶುಭಸಂಖ್ಯೆ: 2
ಮಿಥುನ: ಬಂಧುಗಳೊಂದಿಗೆ ಕಲಹ. ಹಿರಿಯರ ಆರೋಗ್ಯದಲ್ಲಿ ಚೇತರಿಕೆಯಾಗುವುದು. ಸಿವಿಲ್ ಇಂಜಿನಿಯರ್ಗಳಿಗೆ ಶುಭದಿನ. ಶುಭಸಂಖ್ಯೆ: 4
ಕಟಕ: ಶೀತಬಾಧೆ ಕಾಡಬಹುದು. ಪತ್ರ ವ್ಯವಹಾರಗಳಿಂದ ಅನುಕೂಲ ಒದಗಿಬರಲಿದೆ. ಯತ್ನ ಕಾರ್ಯದಲ್ಲಿ ಜಯ ನಿಮ್ಮದು. ಶುಭಸಂಖ್ಯೆ: 8
ಸಿಂಹ: ವಿವಾಹ ಯೋಗವಿದೆ. ಧನಪ್ರಾಪ್ತಿಯಾಗಿ ಮಾನಸಿಕ ಸಮಾಧಾನ. ವ್ಯವಸಾಯದಲ್ಲಿ ಸಮೃದ್ಧಿ. ಉತ್ತಮ ಆದಾಯ ಬರಲಿದೆ. ಶುಭಸಂಖ್ಯೆ: 3
ಕನ್ಯಾ: ಕುಟುಂಬದಲ್ಲಿ ಮನಸ್ತಾಪ ಉಂಟಾದೀತು. ಮುದ್ರಕರಿಗೆ ಶುಭಕರ ದಿನ. ಶತ್ರು ನಿವಾರಣೆಯಾಗಿ ನಿರಾಳ. ದಾಂಪತ್ಯ ಸುಖ. ಶುಭಸಂಖ್ಯೆ: 2
ತುಲಾ: ರಾಜಕೀಯ ರಂಗದಲ್ಲಿ ಇರುವವರಿಗೆ ವಿಶೇಷ ದಿನ. ಮಾತಿನಿಂದ ವಿವಾದ. ಪತ್ನಿಯಿಂದ ಸಹಾಯ. ಸಹನೆಯಿಂದ ವರ್ತಿಸಿ. ಶುಭಸಂಖ್ಯೆ: 5
ವೃಶ್ಚಿಕ: ಕೃಷಿಕರಿಗೆ ಉತ್ತಮ ಫಲ ದೊರೆತು ನೆಮ್ಮದಿ. ವೃತ್ತಿಯಲ್ಲಿ ಬಲ ದೊರೆಯುವುದು. ಹಾಲು ಮಾರಾಟ, ಹೈನುಗಾರರಿಗೆ ಅನುಕೂಲ. ಶುಭಸಂಖ್ಯೆ: 1
ಧನುಸ್ಸು: ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಶುಭ ಕಾರ್ಯಗಳಿಗಾಗಿ ಖರ್ಚು ಮಾಡುವಿರಿ. ದೈವ ಸಹಾಯ ಇರಲಿದೆ. ಶುಭಸಂಖ್ಯೆ: 6
ಮಕರ: ಕಚೇರಿಯಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಸಂಗಾತಿಯಿಂದ ಸಹಕಾರ. ಪ್ರಯಾಣದಲ್ಲಿ ತೊಡಕು. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 9
ಕುಂಭ: ಆರೋಗ್ಯದಲ್ಲಿ ಏರುಪೇರು ಆದೀತು. ಉನ್ನತ ಅಧಿಕಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ. ಮಕ್ಕಳಿಂದ ನಿರೀಕ್ಷಿತ ಸಹಾಯ. ಶುಭಸಂಖ್ಯೆ: 3
ಮೀನ: ದಾಂಪತ್ಯದಲ್ಲಿ ಕೊಂಚ ಅಸಮಾಧಾನ. ಸಮಾಧಾನ ಇರಲಿ. ತಂದೆ ಮಕ್ಕಳಲ್ಲಿ ಸಹಕಾರ ಭಾವ. ಮಿತ್ರರಿಂದ ತೊಡಕು. ಶುಭಸಂಖ್ಯೆ: 8