

ಮೇಷ: ವ್ಯವಹಾರಗಳಲ್ಲಿ ಮೋಸ, ವಂಚನೆ ಸಾಧ್ಯತೆ. ತಾಳ್ಮೆಯ ನಿರ್ಣಯದಿಂದ ಸುಖ. ಗೃಹದಲ್ಲಿ ವಿಶ್ರಾಂತಿ ಪಡೆದರೆ ನೆಮ್ಮದಿ. ಶುಭಸಂಖ್ಯೆ: 9
ವೃಷಭ: ಒತ್ತಡದ ದಿನ. ವಿನಯದ ನಡೆಯಿಂದ ಸ್ಥಾನಮಾನ ವೃದ್ಧಿ. ನಿರೀಕ್ಷೆಗೂ ಮೀರಿದ ಧನ ಸಂಪತ್ತು ಲಭ್ಯ. ಕೆಲಸಗಳಲ್ಲಿ ಶ್ರೇಯಸ್ಸು. ಶುಭಸಂಖ್ಯೆ: 2
ಮಿಥುನ: ಆರೋಗ್ಯ ಗಮನಿಸಿ. ತಾಳ್ಮೆಯಿರಲಿ. ನಿರೀಕ್ಷಿತ ಸುಖ ಅನುಭವವಾದೀತು. ಉತ್ತಮ ಧನಾರ್ಜನೆ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 5
ಕಟಕ: ಕಾರ್ಯಗಳಲ್ಲಿ ತಲ್ಲೀನತೆ. ಹಣಕಾಸಿನ ವಿಚಾರದಲ್ಲಿ ಸಮಸ್ಯೆ. ಗೃಹೋಪಕರಣ ವಸ್ತುಗಳ ಸಂಗ್ರಹ. ಹಿರಿಯರಿಂದ ಸಹಕಾರ. ಶುಭಸಂಖ್ಯೆ: 4
ಸಿಂಹ: ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ. ಸ್ಥಾನ, ಗೌರವ ಸಂಪಾದಿಸಿದ ತೃಪ್ತಿ. ಆಸ್ತಿ, ಗೃಹ ಸಂಬಂಧ ಖರ್ಚು. ನಿರೀಕ್ಷಿತ ಧನಾಗಮ. ಶುಭಸಂಖ್ಯೆ: 6
ಕನ್ಯಾ: ಪ್ರಯಾಣದಿಂದ ದೇಹಾಯಾಸ. ಧಾರ್ವಿುಕ ಕಾರ್ಯಗಳಿಗಾಗಿ ಧನವ್ಯಯ. ದೂರದ ವ್ಯವಹಾರಗಳಲ್ಲಿ ಪ್ರಗತಿ ಕಾಣಲಿದೆ. ಶುಭಸಂಖ್ಯೆ: 6
ತುಲಾ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣ ಸಂಭವ. ದೇವತಾ ಕಾರ್ಯದಲ್ಲಿ ಭಾಗಿಯಾದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ಶುಭಸಂಖ್ಯೆ: 2
ವೃಶ್ಚಿಕ: ಭೂಮಿ, ಆಸ್ತಿ ವಿಚಾರಗಳಲ್ಲಿ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಸಹೋದರ ಸಮಾನರಿಂದ ಸಹಕಾರ. ಶುಭಸಂಖ್ಯೆ: 7
ಧನುಸ್ಸು: ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗ ವ್ಯವಹಾರಾದಿಗಳಲ್ಲಿ ಉತ್ತಮ ಪ್ರಗತಿ. ವಿದ್ಯಾರ್ಥಿಗಳಿಗೆ ಹಚ್ಚಿನ ಅವಕಾಶ ಲಭ್ಯ. ಶುಭಸಂಖ್ಯೆ: 5
ಮಕರ: ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ. ನೂತನ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿ ಸುಖ ಲಭ್ಯ. ಶುಭಸಂಖ್ಯೆ: 8
ಕುಂಭ: ಆರೋಗ್ಯ ಸ್ಥಿರ. ಜನಮನ್ನಣೆ. ಸಂಕಲ್ಪಿಸಿದಂತೆ ವ್ಯವಹಾರಗಳಲ್ಲಿ ಪ್ರಗತಿ. ಮಿತ್ರರಿಂದಲೂ ಗಣ್ಯರಿಂದಲೂ ಪೋ›ತ್ಸಾಹ. ಶುಭಸಂಖ್ಯೆ: 3
ಮೀನ: ದೀರ್ಘ ಪ್ರಯಾಣ ಸಂಭವ. ಕೆಲಸದಲ್ಲಿ ಅಡಚಣೆ ಆದರೂ ನಿರೀಕ್ಷಿತ ಸ್ಥಾನ ಸುಖ ಪ್ರಾಪ್ತಿ. ಧನಾರ್ಜನೆಗೆ ವಿಪುಲ ಅವಕಾಶ. ಶುಭಸಂಖ್ಯೆ: 3