

ಮೇಷ: ಉಷ್ಣಪ್ರಕೃತಿಯ ದೇಹದವರಿಗೆ ಸ್ವಲ್ಪಮಟ್ಟಿಗೆ ತೊಂದರೆ ಆದೀತು. ಚಂದ್ರಪೀಡಾ ನಿವಾರಣಾ ಸ್ತೋತ್ರ ಪಠಿಸಿ. ಶ್ಶಾಂತಿ ಲಭ್ಯ. ಶುಭಸಂಖ್ಯೆ: 2
ವೃಷಭ: ಬಹಳ ದಿನಗಳಿಂದಲೂ ನಿಂತುಹೋಗಿದ್ದ ಕಾರ್ಯಗಳಿಗೆ ಮರುಚಾಲನೆ ಸಿಗಲಿದೆ. ಮಕ್ಕಳಿಂದ ಕಿರಿಕಿರಿಯಾದೀತು. ಶುಭಸಂಖ್ಯೆ: 4
ಮಿಥುನ: ಸರ್ಕಾರಿ ಅಧಿಕಾರಿಗಳ ಸಹಾಯ ಸಿಗಲಿದೆ. ಅಲರ್ಜಿಯಿಂದ ಸ್ವಲ್ಪ ತೊಂದರೆಯಾದೀತು. ವಿರುದ್ಧಾಹಾರ ಸೇವಿಸದಿರಿ. ಶುಭಸಂಖ್ಯೆ: 9
ಕಟಕ: ಕುಟುಂಬದಲ್ಲಿ ಶುಭವಾರ್ತೆ ಕೇಳಿಬರಲಿದೆ. ಮಕ್ಕಳ ವಿಚಾರದಲ್ಲಿ ಬಹಳ ಹರ್ಷಪಡುವಿರಿ. ವ್ಯಾವಹಾರಿಕ ಜಾಣ್ಮೆ ಇರಲಿ. ಶುಭಸಂಖ್ಯೆ: 6
ಸಿಂಹ: ಆಪ್ತ ಮಿತ್ರರು ಶತ್ರುಗಳಾಗಿ ಬದಲಾದರೂ ಹೊಸ ಮೈತ್ರಿಯಿಂದ ನಿಮಗೆ ಲಾಭವಿದೆ. ಬಟ್ಟೆ ಖರೀದಿಸುವಾಗ ಜಾಗ್ರತೆ ಬೇಕು. ಶುಭಸಂಖ್ಯೆ: 3
ಕನ್ಯಾ: ವಾಯುಬಾಧೆ ಅನುಭವಕ್ಕೆ ಬರಬಹುದು. ನೆರೆಯವರು ನೆರವು ನೀಡುವರು. ಚಿನ್ನದ ಖರೀದಿಗೆ ಸುಸಂದರ್ಭವಿದು. ಶುಭಸಂಖ್ಯೆ: 8
ತುಲಾ: ಸಂಜೆಯ ವೇಳೆಗೆ ಸಂತಸದ ಸಮಾಚಾರ ಕೇಳಿಬರಬಹುದು. ಹೊಟ್ಟೆನೋವಿನ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಶುಭಸಂಖ್ಯೆ: 1
ವೃಶ್ಚಿಕ: ಖಾಸಗಿ ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿಯ ದಿನವಾಗಿದೆ. ಯಾವುದೇ ಕಾರಣಕ್ಕೂ ಆತುರ ಪಡದಿರಿ. ಶಿವನನ್ನು ಸ್ತುತಿಸಿ. ಶುಭಸಂಖ್ಯೆ: 7
ಧನುಸ್ಸು: ಧನಾಗಮನದ ಸಾಧ್ಯತೆಯಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು. ಸುಮ್ಮನೆ ಅನವಶ್ಯಕ ಚರ್ಚೆ ಮಾಡದಿರಿ. ಶುಭಸಂಖ್ಯೆ: 5
ಮಕರ: ಬಾಳಸಂಗಾತಿಗೆ ಅಸೌಖ್ಯ ಸಂಭವಿಸಬಹುದು. ಕಾಗದಪತ್ರಗಳ ವಿಚಾರದಲ್ಲಿ ವಿಶೇಷವಾದ ಎಚ್ಚರ ವಹಿಸಲೇಬೇಕಾಗುತ್ತದೆ. ಶುಭಸಂಖ್ಯೆ: 2
ಕುಂಭ: ಸಮಾಜದಲ್ಲಿ ಮನ್ನಣೆಯನ್ನು ಗಳಿಸಬಹುದು. ಬಂಧುಮಿತ್ರರಿಂದ ಸಹಾಯ ಸಹಕಾರ ಲಭ್ಯ. ಆರೋಗ್ಯದೆಡೆಗೆ ಕಾಳಜಿ ಅಗತ್ಯ. ಶುಭಸಂಖ್ಯೆ: 4
ಮೀನ: ದ್ರವ್ಯಲಾಭ ಉಂಟಾಗಲಿದೆ. ವಾಹನ ಖರೀದಿ ಮಾಡುವ ಬಗ್ಗೆ ಯೋಚಿಸಬಹುದು. ಭಕ್ತಿಯಿಂದ ಶಿವನಾಮದ ಸ್ಮರಣೆ ಮಾಡಿ. ಶುಭಸಂಖ್ಯೆ: 9