

ಮೇಷ: ಮಕ್ಕಳ ವೈವಾಹಿಕ ಮಾತುಕತೆಗೆ ಕಾಲ ಕೂಡಿ ಬರುವುದು. ಉದ್ಯೋಗದಲ್ಲಿ ಯಶಸ್ಸು, ಕೀರ್ತಿ. ಅನಾರೋಗ್ಯ ಕಾಡಲಿದೆ. ಶುಭಸಂಖ್ಯೆ: 8
ವೃಷಭ: ಸರ್ಕಾರಿ ವ್ಯವಹಾರಗಳಲ್ಲಿ ಕಾರ್ಯಸಿದ್ಧಿ. ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆ ಸಾಧ್ಯತೆ. ಸೋಮಾರಿತನದಿಂದ ಧನ ನಷ್ಟ. ಶುಭಸಂಖ್ಯೆ: 2
ಮಿಥುನ: ಮಂದಗತಿಯಲ್ಲಿ ಕಾರ್ಯಸಿದ್ದಿ ಆಗಲಿದೆ. ಉದ್ದಿಮೆದಾರರಿಗೆ ಸಾಧಾರಣ ಬಲ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 3
ಕಟಕ: ಬಹುದಿನಗಳ ಪ್ರಯತ್ನ ಸಫಲ. ನಿರೀಕ್ಷಿಸಿದಂತೆ ಧನಸಹಾಯ. ಸಹೋದ್ಯೋಗಿ ಜತೆ ಮನಸ್ತಾಪ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 2
ಸಿಂಹ: ನಂಬಿದವರಿಂದಲೇ ಮೋಸ ಸಾಧ್ಯತೆ. ಪರಸ್ಥಳ ವಾಸ ಸಂಭವ. ಆಲೋಚಿಸದೆ ತೆಗೆದುಕೊಂಡ ನಿರ್ಣಯಗಳಿಂದ ತೊಂದರೆ. ಶುಭಸಂಖ್ಯೆ: 9
ಕನ್ಯಾ: ಆತ್ಮೀಯರೇ ವಿರೋಧಿಗಳಾಗಬಹುದು. ಮಾಡದ ತಪ್ಪಿಗೆ ಕ್ಷಮೆ ಯಾಚಿಸುವ ಸಂಭವ. ಗೃಹ ನಿರ್ಮಾಣ ಕಾರ್ಯ ಯಶಸ್ವಿ. ಶುಭಸಂಖ್ಯೆ: 1
ತುಲಾ: ಮನಸ್ಸಿನ ಚಂಚಲತೆಯಿಂದ ಕಾರ್ಯ ವಿಘ್ನ. ಕಷ್ಟಕಾಲದಲ್ಲಿ ಆತ್ಮೀಯರ ಸಹಾಯ. ಸಾರ್ವಜನಿಕ ವಲಯದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 1
ವೃಶ್ಚಿಕ: ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಮನ್ನಣೆ. ಕೆಟ್ಟ ಜನರಿಂದ ದೂರವಿರಿ. ಆಸ್ತಿ ಖರೀದಿಯೋಗವಿದೆ. ಭೂ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 4
ಧನುಸ್ಸು: ಹೊಸ ಕೆಲಸಕ್ಕೆ ಆಸೆಪಟ್ಟು ಹಳೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ. ಆಮಿಷಕ್ಕೆ ಒಳಗಾಗಬೇಡಿ. ಸಂಗಾತಿ ಆರೋಗ್ಯದಲ್ಲಿ ಜಾಗ್ರತೆ. ಶುಭಸಂಖ್ಯೆ: 3
ಮಕರ: ಕುಟುಂಬದಲ್ಲಿ ವಾಗ್ವಾದ ಬೇಡ. ಸಾಧನೆಗೆ ಬಂಧುಗಳಿಂದ ಪ್ರಶಂಸೆ. ವ್ಯವಹಾರ ಕೌಶಲದಿಂದ ಲಾಭ. ತಾಯಿಗೆ ಅನಾರೋಗ್ಯ. ಶುಭಸಂಖ್ಯೆ: 6
ಕುಂಭ: ಉದ್ಯೋಗ ಸಂಬಂಧಿ ಸಮಸ್ಯೆ. ನಿಮ್ಮ ಪರಿಶ್ರಮ ಫಲ ನೀಡುವುದು. ಅಪರಿಚಿತರೊಂದಿಗೆ ವ್ಯವಹಾರ ಮಾಡುವಾಗ ಜಾಗ್ರತೆ. ಶುಭಸಂಖ್ಯೆ: 5
ಮೀನ: ಇಂದು ಲಾಭವಿದೆ. ವಿದ್ಯಾರ್ಥಿಗಳ ಅಭಿಲಾಷೆ ಈಡೇರುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರು. ಅನಿರೀಕ್ಷಿತ ಆಘಾತ. ಶುಭಸಂಖ್ಯೆ: 7