ನಿತ್ಯ ಭವಿಷ್ಯ| ಈ ರಾಶಿಯವರು ಮಕ್ಕಳನ್ನು ಗೆಳೆಯರಂತೆ ನೋಡಿಕೊಳ್ಳುವ ಸಹನೆಯನ್ನು ತೋರಿಸಿ

Nitya-Bhavishya-vvani-1-2
Published on

ಮೇಷ: ತಿಳಿವಳಿಕೆ, ಜ್ಞಾನದ ಮಟ್ಟಗಳು ನಿಮ್ಮನ್ನು ತುಂಬಿದ ಕೊಡವನ್ನಾಗಿಸಿ ಪ್ರಶಂಸೆಯನ್ನು ತಂದುಕೊಡಲಿವೆ. ಶುಭಸಂಖ್ಯೆ: 8

ವೃಷಭ: ವಿವೇಕವೊಂದೇ ನಿಮ್ಮನ್ನು ಕಾಪಾಡುವ ವಜ್ರಾಯುಧವಾಗಿದೆ. ಈ ಕುರಿತು ಸಕಾರಾತ್ಮಕ ನಿಲುವಿರಲಿ. ಶುಭಸಂಖ್ಯೆ: 2

ಮಿಥುನ: ದೀನರಕ್ಷಕ ಮೈಲಾರಲಿಂಗೇಶ್ವರನ ಅನುಗ್ರಹದ ಫಲವಾಗಿ ಒಳಿತಾದುದನ್ನು ಸದ್ಯದಲ್ಲೇ ಸಾಧಿಸುತ್ತೀರಿ. ಶುಭಸಂಖ್ಯೆ: 9

ಕಟಕ: ಇರುವುದೆಲ್ಲವ ಬಿಟ್ಟು ಇರದಿರುವುದರ ಬಗೆಗೆ ತೊಳಲಾಡಿದರೆ ಮಹತ್ವದ್ದೊಂದು ನಷ್ಟವೇ ಆದೀತು. ಶುಭಸಂಖ್ಯೆ: 6

ಸಿಂಹ: ಅನಿರೀಕ್ಷಿತ ದಿಕ್ಕಿನಿಂದ ಸಿಕ್ಕ ಬೆಂಬಲದಿಂದ ಹಲವಾರು ಅಡೆತಡೆಗಳನ್ನು ದಾಟಿ ಗೆಲುವು ಪಡೆಯುತ್ತೀರಿ. ಶುಭಸಂಖ್ಯೆ: 4

ಕನ್ಯಾ: ಮಕ್ಕಳನ್ನು ಗೆಳೆಯರಂತೆ ನೋಡಿಕೊಳ್ಳುವ ಸಹನೆಯನ್ನು ತೋರಿಸಿ. ನಿಮ್ಮ ಬೆಂಬಲಕ್ಕೆ ಅವರು ಒದಗಿಬರುತ್ತಾರೆ. ಶುಭಸಂಖ್ಯೆ: 7

ತುಲಾ: ಕೈಗೊಂಡ ಕಾರ್ಯಗಳಲ್ಲಿ ನಿರ್ವಿಘ್ನಗಳನ್ನು ಅನುಗ್ರಹಿಸುವ ಗಣಪತಿಯನ್ನು ದೂರ್ವೆಯ ಮೂಲಕ ಆರಾಧಿಸಿ. ಶುಭಸಂಖ್ಯೆ: 5

ವೃಶ್ಚಿಕ: ಮುಗಿಯಿತು ಎಂದು ಅನಿಸದ ಅನೇಕ ಕೆಲಸಗಳ ನಡುವೆಯೂ ಸ್ಥೈರ್ಯ ಇದ್ದೇ ಇರಲಿ. ಕ್ಷೇಮವಿದೆ. ಶುಭಸಂಖ್ಯೆ: 1

ಧನಸ್ಸು: ಮಹತ್ವದ ಕೆಲಸಕ್ಕೆ ಮುಂದಾಗುವಾಗಲೇ ಅಡೆತಡೆ ಎದುರಾದೀತು. ಚಾತುರ್ಯದಿಂದ ಅದನ್ನು ದೂರ ತಳ್ಳಿ. ಶುಭಸಂಖ್ಯೆ: 8

ಮಕರ: ಸಾವಿರಾರು ಮೆಟ್ಟಿಲು ಹತ್ತಿ ಮೇಲೇರಲು ಸಾಧ್ಯವೇ ಎಂಬ ಅಂಜಿಕೆ ಕರಗಿ ಗುರಿ ತಲುಪುವ ಪವಾಡ ಸಾಧ್ಯ. ಶುಭಸಂಖ್ಯೆ: 5

ಕುಂಭ: ಬೆಲೆಬಾಳುವ ಒಡವೆ ಅಥವಾ ಮಹತ್ವದ ಕಾಗದಪತ್ರಗಳ ಬಗೆಗೆ ಖಂಡಿತವಾಗಿಯೂ ಅಲಕ್ಷ್ಯ ಮಾಡದಿರಿ. ಶುಭಸಂಖ್ಯೆ: 3

ಮೀನ: ನಿಮ್ಮ ನಿರ್ಧಾರಗಳನ್ನು ನಿರಂತರವಾದ ಅಭದ್ರತೆಗೆ ತಳ್ಳಲು ಕಾಣದ ಕೈಯೊಂದಕ್ಕೆ ಅವಕಾಶ ನೀಡದಿರಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net