

ಮೇಷ: ಭೂವ್ಯವಹಾರದಿಂದ ಲಾಭ. ನಿಮ್ಮ ನಿರ್ಧಾರವು ಸಂತೋಷ, ಸಮೃದ್ಧಿಯನ್ನು ಕೊಡುತ್ತದೆ. ಅನಿರೀಕ್ಷಿತ ಧನಲಾಭ ಸಾಧ್ಯತೆ. ಶುಭಸಂಖ್ಯೆ: 7
ವೃಷಭ: ಬಿಡುವಿಲ್ಲದ ಕೆಲಸಗಳಿಂದ ದಣಿವು. ಕಳ್ಳತನವಾಗುವ ಸಾಧ್ಯತೆ. ಪ್ರಭಾವಿಗಳೊಂದಿಗೆ ನಿಕಟ ಸಂಪರ್ಕ. ದುಶ್ಚಟದಿಂದ ಕಿರಿಕಿರಿ. ಶುಭಸಂಖ್ಯೆ: 6
ಮಿಥುನ: ಮುಂಗೋಪ, ಅಸಹನೆಯಿಂದ ಸಮಸ್ಯೆ. ತೃಪ್ತಿಕರ ಫಲಿತಾಂಶ ಪಡೆಯಲು ಸರಿಯಾದ ಕಾರ್ಯಯೋಜನೆ ರೂಪಿಸಿ. ಶುಭಸಂಖ್ಯೆ: 3
ಕಟಕ: ನಿಮ್ಮ ಆಲೋಚನೆಗಳ ಮೇಲೆ ಗುರುಗಳಿಂದ ಗಮನಾರ್ಹ ಪ್ರಭಾವ. ನಿರ್ಧಾರ ಬದಲಾವಣೆ ಸಾಧ್ಯತೆ. ಜವಾಬ್ದಾರಿ ನಿರ್ವಹಿಸಿ. ಶುಭಸಂಖ್ಯೆ: 6
ಸಿಂಹ: ಸಾರ್ವಜನಿಕವಾಗಿ ಸಹನೆಯಿರಲಿ. ವಿದ್ಯಾರ್ಥಿಗಳಿಗೆ ವಿಶೇಷ ಪ್ರಗತಿ. ನಿಮ್ಮ ವ್ಯಕ್ತಿತ್ವ ಮತ್ತು ನೋಟವನ್ನು ಬದಲಾಯಿಸಿಕೊಳ್ಳಿ. ಶುಭಸಂಖ್ಯೆ: 9
ಕನ್ಯಾ: ಕೆಲಸಗಾರರ ಮೇಲೆ ಒತ್ತಡ ಹೇರಬೇಡಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಕುಟುಂಬದಲ್ಲಿ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 2
ತುಲಾ: ನಿಮ್ಮ ಕೆಟ್ಟ ನಿರ್ಧಾರಗಳು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತವೆ. ಯೋಚಿಸಿ ನಿರ್ಧರಿಸಿ. ಮಧುರ ಬಾಂಧವ್ಯಕ್ಕೆ ಒತ್ತುಕೊಡಿ. ಶುಭಸಂಖ್ಯೆ:3
ವೃಶ್ಚಿಕ: ಮಂದಹಾಸವಿರಲಿ, ಸಮಸ್ಯೆ ಪರಿಹಾರವಾಗುತ್ತದೆ. ವ್ಯಾಪಾರಿಗಳಿಗೆ ಸರಕುಗಳ ನಷ್ಟ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ಶುಭಸಂಖ್ಯೆ: 7
ಧನುಸ್ಸು: ಅವಕಾಶವಾದಿಗಳಿಂದ ಕಿರಿಕಿರಿ. ಕಚೇರಿಯಲ್ಲಿ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ. ದಿನಾಂತ್ಯದಲ್ಲಿ ವಿಹಾರ. ಶುಭಸಂಖ್ಯೆ: 6
ಮಕರ: ಕೆಲಸಕ್ಕೆ ಹಿರಿಯರಿಂದ ಒತ್ತಡ. ಏಕಾಗ್ರತೆಗೆ ಭಂಗ. ಅಧಿಕ ಖರ್ಚು. ವೈಯಕ್ತಿಕ ಜೀವನಕ್ಕೆ ಆದ್ಯತೆ ಇರಲಿ. ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 9
ಕುಂಭ: ಅಹಂಭಾವ ಪ್ರದರ್ಶನ ಮಾಡಬೇಡಿ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಹಣದ ಅಪವ್ಯಯ. ಆಸ್ತಿ ವಿವಾದ ತಾರಕಕ್ಕೆ. ಶುಭಸಂಖ್ಯೆ: 5
ಮೀನ: ಆರ್ಥಿಕ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಗೊಂದಲ. ಹೊಸ ನಿವೇಶನ ಖರೀದಿ ಸಾಧ್ಯತೆ. ಮಗಳ ಮದುವೆ ಯತ್ನ ಸಫಲ. ಶುಭಸಂಖ್ಯೆ: 4