

ಮೇಷ: ಕರ್ತವ್ಯನಿಷ್ಠೆ ಹೊಂದಿರುವ ನಿಮ್ಮ ವ್ಯಕ್ತಿತ್ವ ಅತ್ಯಂತ ಗಮನಾರ್ಹವಾದುದು. ವಿಶೇಷ ಯಶಸ್ಸು ಒಲಿದುಬರಲಿದೆ. ಶುಭಸಂಖ್ಯೆ: 5
ವೃಷಭ: ಆರೋಗ್ಯದ ವಿಚಾರವನ್ನು ಸ್ವಲ್ಪ ನಿರ್ಲಕ್ಷ್ಯ ಮಾಡುತ್ತಿದ್ದೀರಿ. ವೈದ್ಯರನ್ನು ಭೇಟಿಯಾಗಿ ಸರಳ ಚಿಕಿತ್ಸೆ ಪಡೆದರೆ ಕ್ಷೇಮ. ಶುಭಸಂಖ್ಯೆ: 4
ಮಿಥುನ: ನಿಮ್ಮ ಕೃಷಿಭೂಮಿಯನ್ನು ಪುನಶ್ಚೇತನ ಮಾಡಿಸಲು ಇದು ಸಕಾಲವಾಗಿದೆ. ಹೊಸ ಸಹಭಾಗಿಗಳು ಸಿಗಲಿದ್ದಾರೆ. ಶುಭಸಂಖ್ಯೆ: 6
ಕಟಕ: ಪ್ರಯಾಣಕ್ಕಾಗಿ ಹೊರಟ ಸಂದರ್ಭದಲ್ಲಿ ನಿಮ್ಮ ಚಾತುರ್ಯ, ಜಾಣ್ಮೆಗಳು ಗಾಂಭೀರ್ಯವನ್ನು ಸ್ವಲ್ಪವೂ ಕಳೆದುಕೊಳ್ಳದಿರಲಿ. ಶುಭಸಂಖ್ಯೆ: 9
ಸಿಂಹ: ಮಹತ್ವವಾದುದನ್ನು ಸಾಧಿಸಬೇಕು ಎಂಬ ನಿಮ್ಮ ಸಂಕಲ್ಪಕ್ಕೆ ಹೆಚ್ಚಿನ ಬೆಂಬಲ ಒದಗಲಿದೆ. ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಶುಭಸಂಖ್ಯೆ: 7
ಕನ್ಯಾ: ಉತ್ತಮ ಕೆಲಸಕ್ಕೆ ಸ್ವಾಭಾವಿಕವಾಗಿ ಮನ್ನಣೆ ಲಭಿಸುತ್ತದೆ. ನೀವು ಹಿರಿಯರಿಂದ ಪ್ರಶಂಸೆ ಪಡೆಯಲೆಂದೇ ದುಡಿಯಬೇಡಿ. ಶುಭಸಂಖ್ಯೆ: 8
ತುಲಾ: ಆತ್ಮೀಯತೆಗಾಗಿ ಕಾದಿರುವ ನಿಮಗೆ ಬಾಳಸಂಗಾತಿ ನೆರವಾಗಲಿದ್ದಾರೆ. ಒಂಬತ್ತು ಸಲ ನವಗ್ರಹ ಸ್ತೋತ್ರ ಓದಿ. ಶುಭಸಂಖ್ಯೆ: 3
ವೃಶ್ಚಿಕ: ಗ್ರಹಪೀಡೆಯಿಂದ ಬಳಲುತ್ತಿದ್ದೀರಿ. ಆದರೂ ಕೂಡ ಧೈರ್ಯದಿಂದ ಇರಲು ಶ್ರದ್ಧೆಯಿಂದ ಶಿವಾಷ್ಟಕವನ್ನು ಪಠಣ ಮಾಡಿ. ಶುಭಸಂಖ್ಯೆ: 1
ಧನಸ್ಸು: ಸಂಪತ್ತಿನ ಬಗ್ಗೆ ಗೌರವ ಹೊಂದಿರಬೇಕು. ಅದನ್ನು ಸಂಗ್ರಹಿಸುವ ದಾರಿ ಕೂಡ ಶುದ್ಧವೇ ಆಗಿರಬೇಕು. ಈ ಬಗ್ಗೆ ತಿಳಿದಿರಿ. ಶುಭಸಂಖ್ಯೆ: 2
ಮಕರ: ಕೆಲವೊಮ್ಮೆ ತಣ್ಣೀರನ್ನು ಕೂಡ ತಣಿಸಿಯೇ ಕುಡಿಯಬೇಕಾಗುತ್ತದೆ. ಹೀಗಾಗಿ ಎಲ್ಲದರ ಬಗ್ಗೆಯೂ ಜಾಗ್ರತೆ ವಹಿಸಬೇಕು. ಶುಭಸಂಖ್ಯೆ: 5
ಕುಂಭ: ಶ್ರೀ ಗುರುದತ್ತನ ಅಪಾರವಾದ ಕರುಣೆ ನಿಮ್ಮ ಪಾಲಿಗಿದೆ. ನಿರ್ವಿಘ್ನತೆಯಿಂದ ಕೆಲಸಗಳಲ್ಲಿ ಯಶಸ್ವಿಯಾಗುವಿರಿ. ಶುಭಸಂಖ್ಯೆ: 4
ಮೀನ: ಇಂಜಿನಿಯರ್ಗಳು, ಜೀವವಿಮಾ ಕ್ಷೇತ್ರದವರಿಗೆ ವೃತ್ತಿಯನ್ನು ವಿಸ್ತಾರ ಮಾಡಿಕೊಳ್ಳುವುದಕ್ಕೆ ಕೆಲವು ವಿಭಿನ್ನ ಅವಕಾಶಗಳಿವೆ. ಶುಭಸಂಖ್ಯೆ: 6