

ಮೇಷ: ಹೊಸ ಜವಾಬ್ದಾರಿ. ಹಿರಿಯರಿಂದ ಪ್ರಶಂಸೆ. ಸಹೋದರಿಯರ ಭೆೇಟಿ. ಧಾರ್ವಿುಕ ಮಂದಿರಕ್ಕೆ ಕುಟುಂಬದೊಂದಿಗೆ ಪ್ರಯಾಣ. ಶುಭಸಂಖ್ಯೆ: 7
ವೃಷಭ: ವ್ಯಾಪಾರಸ್ಥರಿಗೆ ಸಾಧಾರಣ ಲಾಭ. ವೃಥಾ ಖರ್ಚು. ಆತ್ಮೀಯ ಬಂಧುವಿನ ಮನೆಗೆ ಭೇಟಿ. ಸಂಗಾತಿಯ ಸಲಹೆ ಸ್ವೀಕರಿಸಿ. ಶುಭಸಂಖ್ಯೆ: 8
ಮಿಥುನ: ಕೆಲವು ಕೆಲಸಗಳಲ್ಲಿ ವಿಘ್ನ. ಅನವಶ್ಯಕ ಖರ್ಚು. ಆರೋಗ್ಯ ಚೇತರಿಕೆ. ದಿನಾಂತ್ಯದಲ್ಲಿ ಶುಭ ಸುದ್ದಿ ಬರಲಿದೆ, ನಿರೀಕ್ಷಿಸಿ. ಶುಭಸಂಖ್ಯೆ: 9
ಕಟಕ: ವ್ಯಾಪಾರ ಉದ್ದಿಮೆಯಲ್ಲಿ ಅಲ್ಪ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಮಸ್ಯೆ ತಲೆದೋರಬಹುದು. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 5
ಸಿಂಹ: ಶುಭಕಾರ್ಯ ಯತ್ನ ಸಫಲ. ಅಧಿಕ ತಿರುಗಾಟ. ಹಿರಿಯರನ್ನು ನಿರ್ಲಕ್ಷಿಸಬೇಡಿ. ದಿನಾಂತ್ಯದಲ್ಲಿ ಆಯಾಸ ಕಾಣಿಸಬಹುದು. ಶುಭಸಂಖ್ಯೆ: 7
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ. ವಿಶೇಷ ಅಧಿಕಾರ ದೊರೆಯುವ ಸಾಧ್ಯತೆ ಇದೆ. ದಿನದ ಮಧ್ಯಭಾಗದಲ್ಲಿ ಚಿಂತೆ. ಶುಭಸಂಖ್ಯೆ: 3
ತುಲಾ: ನಂಬಿದವರಿಂದಲೇ ವಂಚನೆ. ಕುಟುಂಬದಲ್ಲಿ ಅಸಮಾಧಾನ. ಮನೆಯಲ್ಲಿ ಮಂಗಳ ಕಾರ್ಯದ ಸಡಗರ ಕಂಡುಬರಲಿದೆ. ಶುಭಸಂಖ್ಯೆ: 9
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ ದೊರೆತು ಸಮಾಧಾನ. ಕುಟುಂಬದಲ್ಲಿ ಸೌಖ್ಯ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ: 6
ಧನುಸ್ಸು: ಶುಭಕಾರ್ಯಕ್ಕೆ ಚಾಲನೆ. ಅನವಶ್ಯಕ ಖರ್ಚನ್ನು ನಿಯಂತ್ರಿಸಿ. ಮಾತಿನ ನಿಯಂತ್ರಣ ಇಲ್ಲದಿದ್ದರೆ ಅಪಾಯ ಕಾದಿದೆ. ಶುಭಸಂಖ್ಯೆ: 1
ಮಕರ: ದುಷ್ಟ ಜನರ ಸಹವಾಸ. ಹುಷಾರಾಗಿರಿ. ಸಾರ್ವಜನಿಕವಾಗಿ ಅವಮಾನ ಸಾಧ್ಯತೆ. ಪತ್ನಿಗೆ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 8
ಕುಂಭ: ಅನವಶ್ಯಕವಾಗಿ ಧನವ್ಯಯ. ಕೃಷಿಯಲ್ಲಿ ಅಲ್ಪ ಲಾಭ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ಮೀನ: ವ್ಯಾಪಾರ ಉದ್ಯೋಗಗಳಲ್ಲಿ ಪ್ರಗತಿ. ಸಾರ್ವಜನಿಕವಾಗಿ ಭೂ ವ್ಯವಹಾರಸ್ಥರಿಗೆ ಆರ್ಥಿಕ ನಷ್ಟ. ಕುಟುಂಬದಲ್ಲಿ ಸಂತೋಷ. ಶುಭಸಂಖ್ಯೆ: 7