

ಮೇಷ: ಗುರಿಸಾಧನೆಗೆ ಹೊಸ ಯೋಜನೆ ರೂಪಿಸಿ. ಸ್ವಂತ ಕೆಲಸದಲ್ಲಿ ಯಶಸ್ಸು ಲಭಿಸಲಿದೆ. ಆರ್ಥಿಕವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ. ಶುಭಸಂಖ್ಯೆ: 9
ವೃಷಭ: ಗೃಹೋಪಕರಣಗಳ ಖರೀದಿಯಲ್ಲಿ ಮೋಸ. ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೇ. ಸ್ತ್ರೀಯರಿಗೆ ಚಿನ್ನಾಭರಣ ಖರೀದಿ ಯೋಗ ಇದೆ. ಶುಭಸಂಖ್ಯೆ:1
ಮಿಥುನ: ಅಪವ್ಯಯ. ವಿದ್ಯಾರ್ಥಿಗಳು ಮಹಾತ್ವ್ವಾಕಾಂಕ್ಷಿಗಳಾಗಿ. ಕಲಾವಿದರಿಗೆ ಪ್ರಯಾಣದ ಸಾಧ್ಯತೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಶುಭಸಂಖ್ಯೆ: 5
ಕಟಕ: ಕುಟುಂಬದಲ್ಲಿ ಭಿನ್ನಾಭಿಪ್ರಾಯ. ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಪ್ರಗತಿ. ಸಹೋದ್ಯೋಗಿಗಳ ಕುಟಿಲತೆಯಿಂದ ತೊಂದರೆ. ಶುಭಸಂಖ್ಯೆ: 8
ಸಿಂಹ: ಆದಾಯಕ್ಕಿಂತ ಖರ್ಚು ಅಧಿಕವಾಗಬಹುದು. ಪ್ರತಿಭಾನ್ವಿತರಿಗೆ ಪುರಸ್ಕಾರ. ಅಧಿಕಾರ ಗ್ರಹಣದಲ್ಲಿ ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 2
ಕನ್ಯಾ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಖರೀದಿಯಲ್ಲಿ ಮೋಸ ಸಾಧ್ಯತೆ. ಸಜ್ಜನರ ಸಾನಿಧ್ಯ ಸಿಗುತ್ತದೆ. ಸ್ತ್ರೀಯರಿಗೆ ವಿಶೇಷ ದಿನ. ಶುಭಸಂಖ್ಯೆ: 4
ತುಲಾ: ಕಾರ್ಯನಿಮಿತ್ತ ತಿರುಗಾಟ. ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ವಿಶೇಷ ಅನುಭವ ಆಗಲಿದೆ. ಕುಟುಂಬದಲ್ಲಿ ವಿವಾಹ ನಿಶ್ಚಯ. ಶುಭಸಂಖ್ಯೆ:3
ವೃಶ್ಚಿಕ: ಆರ್ಥಿಕ ಸಮಸ್ಯೆ ತಲೆದೋರಲಿದೆ. ಉದ್ಯೋಗ ವ್ಯವಹಾರದಲ್ಲಿ ಅಸ್ಥಿರತೆ. ನಿರ್ಣಾಯಕ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ: 7
ಧನುಸ್ಸು: ಕಚೇರಿ ಕಾರ್ಯ ನಿಮಿತ್ತ ಪ್ರವಾಸ ಸಾಧ್ಯತೆ. ಕಚೇರಿಯಲ್ಲಿ ಪ್ರತಿಷ್ಠೆಗೆ ಧಕ್ಕೆ ಆಗಬಹುದು. ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಶುಭಸಂಖ್ಯೆ: 6
ಮಕರ: ಸಹೋದ್ಯೋಗಿಗಳಿಂದ ತೊಂದರೆ. ಹಿರಿಯರೊಂದಿಗೆ ಮನಸ್ತಾಪ. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ. ವೃಥಾ ತಿರುಗಾಟ. ಶುಭಸಂಖ್ಯೆ: 3
ಕುಂಭ: ವಿದ್ಯಾರ್ಥಿಗಳಿಗೆ ಯಶಸ್ಸು. ಕಷ್ಟ ಜೀವಿಗಳಿಗೆ ಧನಲಾಭ. ವ್ಯಾಪಾರದಲ್ಲಿ ಸ್ಪರ್ಧೆ ಏರ್ಪಡಲಿದೆ. ಸ್ತ್ರೀಯರಿಗೆ ಆಭರಣ ಲಾಭ. ಶುಭಸಂಖ್ಯೆ: 4
ಮೀನ: ಸಂಗಾತಿಯ ಜೊತೆ ವಿವಾದ. ಶಿಕ್ಷಕರಿಗೆ ಬಡ್ತಿ ಸಾಧ್ಯತೆ. ಅದೃಷ್ಟದಿಂದ ಸಮಸ್ಯೆ ಪರಿಹಾರ. ನೂತನ ನಿವೇಶನ ಖರೀದಿ. ಶುಭಸಂಖ್ಯೆ: 5