ಈ ರಾಶಿಯವರು ಆರೋಗ್ಯದ ದೃಷ್ಟಿಯಿಂದ ದೂರದ ಪ್ರವಾಸ ಬಿಡುವುದು ಉತ್ತಮ...

Nitya-Bhavishya-vvani-1-2-1
Published on

ಮೇಷ: ಬೇರೆಯವರು ನಿಮ್ಮ ಹಾದಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಧೂರ್ತರನ್ನು ಜಾಣ್ಮೆಯಿಂದ ದೂರ ಇಡಿ. ಶುಭಸಂಖ್ಯೆ: 6

ವೃಷಭ: ಸಹೋದರರೂ ಕೂಡ ನಿಮ್ಮ ವಿಚಾರವನ್ನು ವಿರೋಧಿಸಬಹುದು. ತಾಳ್ಮೆಯೊಂದೇ ನಿಮ್ಮನ್ನು ರಕ್ಷಿಸುವ ಅಸ್ತ್ರವಾಗಿದೆ. ಶುಭಸಂಖ್ಯೆ: 1

ಮಿಥುನ: ಅಂತಿಮ ಗೆಲುವು ನಿಮ್ಮದೇ ಆಗಬೇಕು ಎಂಬ ಮಹತ್ವಾಕಾಂಕ್ಷೆ ತಪ್ಪಲ್ಲ. ಆದರೆ ಅದರಿಂದ ತೊಂದರೆ ಆದೀತು. ಶುಭಸಂಖ್ಯೆ: 3

ಕಟಕ: ದೂರದ ಪ್ರವಾಸವನ್ನು ಬಿಡುವುದು ಉತ್ತಮ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗಲಿ. ಶುಭಸಂಖ್ಯೆ: 7

ಸಿಂಹ: ಮೇಲಧಿಕಾರಿಗಳ ಜತೆಗಿನ ವಾದವನ್ನು ಬಿಡಿ. ಕೆಲವೊಮ್ಮೆ ನಿಮ್ಮ ತಪ್ಪುಗಳೇ ನಿಮ್ಮನ್ನು ಸುತ್ತಿಕೊಳ್ಳಬಹುದು. ಎಚ್ಚರ. ಶುಭಸಂಖ್ಯೆ: 5

ಕನ್ಯಾ: ಆಸ್ತಿಯ ವಿಚಾರದ ವ್ಯಾಜ್ಯಗಳೆಲ್ಲ ಪರಿಹಾರದಲ್ಲಿ ಅಂತ್ಯಗೊಳ್ಳಲಿವೆ. ಆದರೆ ನೀವು ಮಾತ್ರ ಸ್ವಲ್ಪ ತಾಳ್ಮೆಯಿಂದಲೇ ವರ್ತಿಸಬೇಕು. ಶುಭಸಂಖ್ಯೆ: 9

ತುಲಾ: ಅವಮಾನಿಸುವಂತಹ ಜನರು ಸುತ್ತಮುತ್ತ ಇರಬಹುದು. ಅಸಮಾಧಾನ ತೋರಿಸಿಕೊಳ್ಳದೆ ಅಂಥವರನ್ನು ನಿರ್ಲಕ್ಷಿಸಿಬಿಡಿ. ಶುಭಸಂಖ್ಯೆ: 2

ವೃಶ್ಚಿಕ: ಬಾಳಸಂಗಾತಿಯ ಮುಖಾಂತರ ಒಳಿತಿನ ಮಾರ್ಗದ ಹುಡುಕಾಟ ಅರ್ಥಪೂರ್ಣತೆಯನ್ನು ಪಡೆಯಲಿದೆ. ದರ್ಪ ಬೇಡ. ಶುಭಸಂಖ್ಯೆ: 4

ಧನಸ್ಸು: ಕುಟುಂಬದ ಸದಸ್ಯರು ನಿಮ್ಮಿಂದ ಒಳ್ಳೆಯ ಮಾತುಗಳನ್ನು ನಿರೀಕ್ಷೆ ಮಾಡಿರುತ್ತಾರೆ. ಅವರನ್ನು ಹಳಿಯದೆಯೇ ಪ್ರಶಂಸೆ ಮಾಡಿ. ಶುಭಸಂಖ್ಯೆ: 8

ಮಕರ: ಹಳೆಯ ವಿಧಾನಗಳನ್ನು ಹೊಸ ಉತ್ಸಾಹದಿಂದ ಜಾರಿಗೊಳಿಸಿ. ಇದರಿಂದ ವ್ಯಪಾರದಲ್ಲಿ ಹೆಚ್ಚಿನ ಲಾಭವಾಗಲು ಅವಕಾಶವಿದೆ. ಶುಭಸಂಖ್ಯೆ: 1

ಕುಂಭ: ನಿಮಗೆ ಅಗತ್ಯವಾಗಿ ಬೇಕಾದ ವಿಚಾರದಲ್ಲಿ ಹೆದ್ದಾರಿಯೊಂದು ಹಿರಿಯರೊಬ್ಬರ ನೆರವಿನ ಮೂಲಕ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 6

ಮೀನ: ನಿಮ್ಮ ಬೌದ್ಧಿಕ ತಾಕತ್ತನ್ನು ರ್ತಾಕತೆಯಿಂದ ಬಳಸಿಕೊಂಡರೆ ಧನಲಾಭದ ಕನಸನ್ನು ಸುಲಭವಾಗಿ ಕಾಣಬಹುದು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net