ಈ ರಾಶಿಯವರಿಗಿಂದು ಧನಲಾಭವಾಗಿ ಮನಸ್ಸಿಗೆ ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಧನ ನಷ್ಟ. ಮನಕ್ಲೇಷ ಉಂಟಾಗಬಹುದು. ಅಮೂಲ್ಯ ವಸ್ತುಗಳ ಕಳವು ಆದೀತು, ಎಚ್ಚರ. ಮಾತಿನ ಚಕಮಕಿ, ಚೋರ ಭೀತಿ. ಶುಭಸಂಖ್ಯೆ: 9

ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸವಾಗುವ ಸಾಧ್ಯತೆ. ದೇವಾಲಯಕ್ಕೆ ಭೇಟಿ ನೀಡುವಿರಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

ಮಿಥುನ: ಧನಲಾಭವಾಗಿ ಮನಸ್ಸಿಗೆ ನೆಮ್ಮದಿ. ವಾಹನ ಖರೀದಿಸುವ ಯೋಗವಿದೆ. ಹಿರಿಯರು ನೀಡುವ ಉಪದೇಶವನ್ನು ಗೌರವಿಸಿ. ಶುಭಸಂಖ್ಯೆ:4

ಕಟಕ: ಗಣಕ ಯಂತ್ರದಿಂದ ಲಾಭವಾಗಲಿದೆ. ಅಲಂಕಾರಿಕ ವಸ್ತುಗಳ ಖರೀದಿಯಿಂದ ಖರ್ಚು. ಇಷ್ಟದೇವರ ಸ್ಮರಣೆಯನ್ನು ಮಾಡಿ. ಶುಭಸಂಖ್ಯೆ: 7

ಸಿಂಹ: ಮೇಲಧಿಕಾರಿಗಳಿಂದ ತೊಂದರೆಯಾದೀತು. ಸಮಾಧಾನ ಮುಖ್ಯ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಸಾಲ ಮರುಪಾವತಿ. ಶುಭಸಂಖ್ಯೆ:2

ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜೊತೆಯಲ್ಲಿ ಕಲಹವಾದೀತು, ಶಾಂತವಾಗಿರಿ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ:1

ತುಲಾ: ಮಾನಸಿಕ ವೇದನೆ. ಅಗ್ನಿಭಯ, ಬೆಂಕಿಯ ಹತ್ತಿರ ಹುಷಾರಾಗಿರಿ. ಅಶಾಂತಿಯ ವಾತಾವರಣ. ಕುಲದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 8

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ವೈದ್ಯರ ಸಲಹೆ ಪಡೆಯಿರಿ. ಮಾತಿನ ಚಕಮಕಿ, ಧನ ನಷ್ಟ. ಆರಕ್ಷಕ ವೃತ್ತಿಯವರಿಗೆ ಅಡಚಣೆ. ಶುಭಸಂಖ್ಯೆ:7

ಧನುಸ್ಸು: ಹೊಸ ಯೋಜನೆಗಳು ಪ್ರಾರಂಭವಾಗಲಿವೆ. ವ್ಯವಸಾಯದಲ್ಲಿ ಲಾಭ ಬರಲಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ ಪ್ರಾಪ್ತಿ. ಶುಭಸಂಖ್ಯೆ:1

ಮಕರ: ಬಂಗಾರ ಪ್ರಾಪ್ತಿಯಾಗುವ ಶುಭ. ಗುರುಹಿರಿಯರ ದರ್ಶನ. ಬಂಧುಗಳಿಂದ ಮಾನ್ಯತೆ. ಟ್ರಾವೆಲ್ಸ್​ನವರಿಗೆ ಅಧಿಕ ಲಾಭ. ಶುಭಸಂಖ್ಯೆ:5

ಕುಂಭ: ಅನಗತ್ಯ ಅಲೆದಾಟ ಮಾಡಬೇಕಾಗುವುದು. ಸಮಯಕ್ಕೆ ಸರಿಯಾಗಿ ಊಟ ಮಾಡಲಾಗದಷ್ಟು ಕೆಲಸದೊತ್ತಡ. ಧನ ನಷ್ಟ. ಶುಭಸಂಖ್ಯೆ: 4

ಮೀನ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ. ಅತಿಯಾದ ನೋವು ಬಾಧಿಸಬಹುದು. ಶತ್ರುವಿನಿಂದ ತೊಂದರೆ, ಎಚ್ಚರದಿಂದಿರಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net