

ಮೇಷ: ನಿಮ್ಮ ಆಲಸ್ಯತನದಿಂದ ಉತ್ತಮ ಅವಕಾಶವನ್ನು ಕಳೆದುಕೊಳ್ಳುವಿರಿ. ಚುರುಕಾಗಿರಲು ಯತ್ನಿಸಿ. ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 9
ವೃಷಭ: ಕಚೇರಿಯಲ್ಲಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಮಾಧಾನ. ಹಿರಿಯರ ಭೇಟಿ. ತಾಯಿಯ ಮಾತನ್ನು ಪಾಲಿಸಿ. ಶುಭಸಂಖ್ಯೆ: 5
ಮಿಥುನ: ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಬಿಗಡಾಯಿಸಬಹುದು. ಹೊಸ ಆಸ್ತಿ ಖರೀದಿಗೆ ನಿರ್ಧಾರ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 5
ಕಟಕ: ಹಲವು ವರ್ಷಗಳಿಂದ ಇದ್ದ ಕುಟುಂಬದ ವಿವಾದಕ್ಕೆ ಹಿರಿಯರ ಮಾರ್ಗದರ್ಶನದೊಂದಿಗೆ ತಾರ್ಕಿಕ ಅಂತ್ಯ. ಸುಖ ಭೋಜನ. ಶುಭಸಂಖ್ಯೆ: 2
ಸಿಂಹ: ದುರ್ಬಲತೆ ಪ್ರದರ್ಶಿಸಲು ಹೋಗಬೇಡಿ. ಮೇಲಧಿಕಾರಿಗಳಿಂದ ಒತ್ತಡ ಬರಬಹುದು. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 5
ಕನ್ಯಾ: ಜಟಿಲ ಸಮಸ್ಯೆಗೆ ಹಿರಿಯರಿಂದ ಮತ್ತು ಕುಟುಂಬದಿಂದ ಸಲಹೆ, ಪರಿಹಾರ. ಮಕ್ಕಳಿಂದ ಹಣದ ವಿಚಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 7
ತುಲಾ: ಅನವಶ್ಯಕ ತಿರುಗಾಟ. ಕಚೇರಿಯ ಕೆಲಸದಲ್ಲಿ ನಿರೀಸಿದಂತೆ ಯಶಸ್ಸು ಪ್ರಾಪ್ತಿ. ಮನಸ್ಸಿಗೆ ಸಮಾಧಾನವಾಗಲಿದೆ. ಶುಭಸಂಖ್ಯೆ: 2
ವೃಶ್ಚಿಕ: ಸಂಗಾತಿಯೊಂದಿಗೆ ವಿರಸ. ಕಚೇರಿಯಲ್ಲಿ ಭಿನ್ನಾಭಿಪ್ರಾಯ. ಒತ್ತಡವನ್ನು ಸಮಾಧಾನದಿಂದ ನಿಭಾಯಿಸಿ. ಸ್ನೇಹಿತನ ಭೆೇಟಿ. ಶುಭಸಂಖ್ಯೆ: 6
ಧನುಸ್ಸು: ಮಾತು ಮುತ್ತಿನಂತಿರಲಿ. ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ ಸಾಧ್ಯತೆ.ಸಾರ್ವಜನಿಕ ೇತ್ರದಲ್ಲಿ ಕಾರ್ಯಸಿದ್ಧಿ. ಶುಭಸಂಖ್ಯೆ: 8
ಮಕರ: ವ್ಯಾಪಾರದಲ್ಲಿ ನಷ್ಟ. ಅನವಶ್ಯಕ ಖರ್ಚು. ಮಕ್ಕಳಿಂದ ಧನ ನಷ್ಟ. ಭೂ ವಿವಾದದಲ್ಲಿ ಮೋಸ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 1
ಕುಂಭ: ತಂದೆ ತಾಯಿಯನ್ನು ಗೌರವಿಸಿ. ವಿವಾದವನ್ನು ಹಿರಿಯರ ಸಲಹೆ ಮೇರೆಗೆ ಬಗೆಹರಿಸಿ. ದೀನ&ದಲಿತರಿಗೆ ದಾನ ಮಾಡಿ. ಶುಭಸಂಖ್ಯೆ: 9
ಮೀನ: ಪ್ರತಿಭಾನ್ವಿತರಿಗೆ ವಿಶೇಷ ಜನಮನ್ನಣೆ. ಹಲವು ದಿನಗಳಿಂದ ಅನಾರೋಗ್ಯದಲ್ಲಿದ್ದ ಬಂಧುಗಳ ವಿಯೋಗ. ಕಚೇರಿಯಲ್ಲಿ ಕಿರಿಕಿರಿ. ಶುಭಸಂಖ್ಯೆ: 9