ಈ ರಾಶಿಯವರಿಂದು ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹಣಕಾಸಿನ ಸಮಸ್ಯೆ ಕಾಡಬಹುದು. ತಾಮ್ರದ ವ್ಯಾಪಾರಸ್ಥರಿಗೆ ಬೇಡಿಕೆ ಬರಲಿದೆ. ರೇಷ್ಮೆ ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 9

ವೃಷಭ: ಕೃಷಿಯ ಕಡೆ ಒಲವು ಹೆಚ್ಚಲಿದೆ. ಮಹಿಳಾ ವೈದ್ಯರಿಗೆ ಅವಕಾಶ. ಬ್ಯಾಂಕಿಂಗ್ ಉದ್ಯೋಗಿಗಳಿಗೆ ಉತ್ತಮ ಆದಾಯ. ಶುಭಸಂಖ್ಯೆ: 1

ಮಿಥುನ: ರಿಯಲ್ ಎಸ್ಟೇಟ್​ನಲ್ಲಿ ಶುಭ ಸಮಾಚಾರ ಬರಲಿದೆ. ವಾಹನ ಚಾಲಕರಿಗೆ ಉತ್ತಮ ಲಾಭವಾಗಲಿದೆ. ವಿವಾಹಕ್ಕೆ ಶುಭಸಮಯ. ಶುಭಸಂಖ್ಯೆ: 5

ಕಟಕ: ಕಲಾವಿದರಿಗೆ ಜನಪ್ರಿಯತೆ ದೊರೆಯಲಿದೆ. ಮಕ್ಕಳ ಆರೋಗ್ಯ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ರಾಜಕೀಯದಲ್ಲಿ ಯಶಸ್ಸು. ಶುಭಸಂಖ್ಯೆ: 2

ಸಿಂಹ: ಚರ್ಮವ್ಯಾಧಿ ಬಾಧಿಸಬಹುದು. ಹಾಡುಗಾರರಿಗೆ ಉತ್ತಮ ಅವಕಾಶ. ರಾಜಕಾರಣಿಗಳಿಗೆ ಪ್ರಶಸ್ತವಾದ ಸಮಯ. ಶುಭಸಂಖ್ಯೆ: 8

ಕನ್ಯಾ: ಹೂ ವ್ಯಾಪಾರಿಗಳಿಗೆ ಒಳ್ಳೆಯ ಆದಾಯ. ರೈತರ ಫಸಲಿಗೆ ಬೇಡಿಕೆ ಹೆಚ್ಚುವುದು. ಆರ್ಥಿಕವಾಗಿ ಸ್ವಲ್ಪಮಟ್ಟಿನ ಚೇತರಿಕೆ. ಶುಭಸಂಖ್ಯೆ: 6

ತುಲಾ: ಗೃಹ ಮಾರಾಟಗಾರರಿಗೆ ಆದಾಯ. ವಿದ್ಯುತ್ ವಲಯದ ಕಾರ್ವಿುಕರು ಎಚ್ಚರ ವಹಿಸಿ. ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 4

ವೃಶ್ಚಿಕ: ಆರೋಗ್ಯದಲ್ಲಿ ತೊಂದರೆ ಕಾಣಬಹುದು. ಜಾಹೀರಾತು ಸಂಸ್ಥೆಗಳಿಗೆ ಲಾಭ. ವಿದೇಶಿವಸ್ತು ಉತ್ಪಾದಿಸುವವರಿಗೆ ಬೇಡಿಕೆ. ಶುಭಸಂಖ್ಯೆ: 3

ಧನುಸ್ಸು: ಹೈನುಗಾರಿಕೆಗೆ ಬೇಡಿಕೆ. ಮನರಂಜನಾ ವಲಯದವರಿಗೆ ವಿಪುಲ ಅವಕಾಶ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಶುಭಸಂಖ್ಯೆ: 9

ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ. ಆರಕ್ಷಕ ವರ್ಗದವರು ಜಾಗೃತೆಯಿಂದಿರಿ. ಸಣ್ಣ ಕೈಗಾರಿಕೆಗಳಿಗೆ ಸುಸಮಯ. ಶುಭಸಂಖ್ಯೆ:1

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳ ಭೇಟಿ ನೀಡುವಿರಿ. ಸ್ವಯಂ ಉದ್ಯೋಗಸ್ಥರಿಗೆ ಶುಭ. ಶುಭಸಂಖ್ಯೆ: 4

ಮೀನ: ನಿದ್ರಾಹೀನತೆಯಿಂದ ಅನಾರೋಗ್ಯ ಬಾಧಿಸಬಹುದು. ಕುಶಲಕರ್ವಿುಗಳಿಗೆ ಹೆಚ್ಚಿನ ಬೇಡಿಕೆ. ವರ್ಗಾವಣೆ ಸಾಧ್ಯತೆ ಇದೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net