ಈ ರಾಶಿಯವರ ಮನೆಗಿಂದು ಅಪರೂಪದ ಅತಿಥಿಯ ಆಗಮನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಚೇರಿಯಲ್ಲಿ ಒತ್ತಡ. ವ್ಯಾಪಾರದಲ್ಲಿ ನಷ್ಟವಾಗಬಹುದು. ಎಚ್ಚರದಿಂದಿರಿ. ಉದ್ಯೋಗ ಅರಸುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 6

ವೃಷಭ: ಭಾಗ್ಯ ಭಾವದ ಗ್ರಹಕೂಟದಿಂದಾಗಿ ಕಾರ್ಯಸಿದ್ದಿ. ನಟರಿಗೆ ವಿಶೇಷ ಅವಕಾಶ. ದಿನಾಂತ್ಯದಲ್ಲಿ ಆಯಾಸ ಕಾಣಿಸಬಹುದು. ಶುಭಸಂಖ್ಯೆ:9

ಮಿಥುನ: ಅನಾರೋಗ್ಯದಿಂದಾಗಿ ಅಸಮಾಧಾನ. ನಿರೀಕ್ಷಿಸಿದಂತೆ ಯಶಸ್ಸು ಸಿಗದಿರುವುದಕ್ಕೆ ಬೇಸರ. ಆತ್ಮೀಯರ ಸಲಹೆ. ಶುಭಸಂಖ್ಯೆ:5

ಕಟಕ: ಗೃಹ ನಿರ್ಮಾಣದ ಕನಸಿನ ಸಾಕಾರ. ಪತ್ನಿಯ ಸಲಹೆಯನ್ನು ತಿರಸ್ಕರಿಸಬೇಡಿ. ಕಚೇರಿಯಲ್ಲಿ ಸಮಾಧಾನದಿಂದ ವರ್ತಿಸಿ. ಶುಭಸಂಖ್ಯೆ:3

ಸಿಂಹ: ಸಾರ್ವಜನಿಕ ಜೀವನದಲ್ಲಿ ಮನ್ನಣೆ. ರಾಜಕಾರಣಿಗಳಿಗೆ ವಿಶೇಷ ದಿನ. ಕಲಾವಿದರಿಗೆ ಅದೃಷ್ಟ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7

ಕನ್ಯಾ: ಭೂಮಿಯಿಂದ ಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ತೀರ್ಪ. ಅನಾರೋಗ್ಯಕಾಡಲಿದೆ. ಶುಭಸಂಖ್ಯೆ: 2

ತುಲಾ: ಮಾತೃಮೂಲದ ಧನಪ್ರಾಪ್ತಿ. ಮನೆ ಕಟ್ಟುವುದಕ್ಕೆ ಚಾಲನೆ ನೀಡುವಿರಿ. ಸರ್ಕಾರಿ ಕೆಲಸಗಳಲ್ಲಿ ವಿಘ್ನ. ದೇವರ ಧ್ಯಾನ ಮಾಡಿ. ಶುಭಸಂಖ್ಯೆ: 6

ವೃಶ್ಚಿಕ: ಸಹೋದರರ ಸಲಹೆಯನ್ನು ತಿರಸ್ಕರಿಸಬೇಡಿ. ಮನೆಗೆ ಅಪರೂಪದ ಅತಿಥಿಯ ಆಗಮನ. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 6

ಧನುಸ್ಸು: ಆರ್ಥಿಕ ಅಡಚಣೆ. ಮಾತಿನ ಬಗ್ಗೆ ನಿಗಾ ಇರಲಿ. ಕುಟುಂಬದಲ್ಲಿ ಅಸಮಾಧಾನ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 2

ಮಕರ: ದೃಢ ನಿರ್ಧಾರ ತೆಗೆದುಕೊಳ್ಳಲು ಗೊಂದಲ. ಸಂಬಂಧಿಕರಿಂದ ಸಲಹೆ. ಹಣದ ಅಪವ್ಯಯ. ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 8

ಕುಂಭ: ವಿದ್ಯಾರ್ಥಿಗಳಿಗೆ ಕನಸಿನ ಸಾಕಾರ. ಸೋಮಾರಿತನ ನಿಮ್ಮ ಶತ್ರು. ದಿನಾಂತ್ಯದಲ್ಲಿ ಶುಭವಾರ್ತೆ ಕೇಳಿ ಸಂಭ್ರಮಿಸುವಿರಿ. ಶುಭಸಂಖ್ಯೆ: 6

ಮೀನ: ವ್ಯಾಪಾರಸ್ಥರಿಗೆ ವಿಶೇಷ ಧನಲಾಭ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ಸಹೋದರಿಯರ ಮನೆಗೆ ಭೇಟಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net