

ಮೇಷ: ಹೊಸ ಜವಾಬ್ದಾರಿ. ಹಿರಿಯರಿಂದ ಪ್ರಶಂಸೆ. ಸಹೋದರಿಯ ಭೇಟಿ. ಕುಟುಂಬದೊಂದಿಗೆ ದೇವಾಲಯಕ್ಕೆ ಪಯಣ. ಉಲ್ಲಾಸ. ಶುಭಸಂಖ್ಯೆ: 4
ವೃಷಭ: ವ್ಯಾಪಾರಸ್ಥರಿಗೆ ಸಾಧಾರಣ ಲಾಭ. ವೃಥಾ ಖರ್ಚು. ಆತ್ಮೀಯ ಬಂಧುಗಳ ಮನೆಗೆ ಭೇಟಿ. ಸಂಗಾತಿಯ ಸಲಹೆ ಸ್ವೀಕರಿಸಿ. ಶುಭಸಂಖ್ಯೆ: 9
ಮಿಥುನ: ಕೆಲಸಗಳಲ್ಲಿ ವಿಘ್ನ. ಅನವಶ್ಯಕ ಖರ್ಚು. ಆರೋಗ್ಯದಲ್ಲಿ ಚೇತರಿಕೆ. ದಿನಾಂತ್ಯದಲ್ಲಿ ಶುಭ ಸುದ್ದಿ ಬಂದು ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 5
ಕಟಕ: ವ್ಯಾಪಾರ ಉದ್ದಿಮೆಯಲ್ಲಿ ಅಲ್ಪ ಪ್ರಗತಿ ಕಾಣುತ್ತದೆ. ಅನಗತ್ಯವಾಗಿ ಆತಂಕ ಕಾಡಬಹುದು. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 8
ಸಿಂಹ: ಶುಭಕಾರ್ಯ ಯತ್ನ ಸಫಲ. ಅಧಿಕ ತಿರುಗಾಟ. ಹಿರಿಯರನ್ನು ನಿರ್ಲಕ್ಷಿಸಬೇಡಿ. ಅವರ ಮಾರ್ಗದರ್ಶನ ತೀರ ಅಗತ್ಯ. ಶುಭಸಂಖ್ಯೆ: 7
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ. ವಿಶೇಷ ಅಧಿಕಾರ ಪ್ರಾಪ್ತಿ. ದಿನದ ಮಧ್ಯಭಾಗದಲ್ಲಿ ಚಿಂತೆ. ಸಂಜೆ ವೇಲೆಗೆ ಎಲ್ಲವೂ ನಿರಾಳ. ಶುಭಸಂಖ್ಯೆ: 3
ತುಲಾ: ನಂಬಿ ಕೆಟ್ಟವರಿಲ್ಲ ಎಂಬುದು ಸುಳ್ಳಾದ ಅನುಭವ. ಕುಟುಂಬದಲ್ಲಿ ಅಸಮಾಧಾನ. ಮನೆಯಲ್ಲಿ ಮಂಗಳ ಕಾರ್ಯದ ಸಡಗರ. ಶುಭಸಂಖ್ಯೆ: 4
ವೃಶ್ಚಿಕ: ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಕುಟುಂಬದಲ್ಲಿ ಸಾಮರಸ್ಯದಿಂದ ನೆಮ್ಮದಿ. ವ್ಯಾಪಾರಸ್ಥರಿಗೆ ಅಧಿಕ ಲಾಭದ ಸಾಧ್ಯತೆ. ಶುಭಸಂಖ್ಯೆ: 6
ಧನುಸ್ಸು: ಶುಭಕಾರ್ಯಕ್ಕೆ ಚಾಲನೆ. ಅನವಶ್ಯಕ ಖರ್ಚನ್ನು ನಿಯಂತ್ರಿಸಿ. ಮಾತು ಬೆಳ್ಳಿಯಂತೆ, ಅದರ ಮೇಲಿನ ಹಿಡಿತ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 4
ಮಕರ: ದುಷ್ಟರ ಸಹವಾಸ ಒಳ್ಳೆಯದಲ್ಲ, ತಪ್ಪಿಸಿಕೊಳ್ಳಿ. ಸಾರ್ವಜನಿಕವಾಗಿ ಅವಮಾನ ಸಾಧ್ಯತೆ. ಪತ್ನಿಗೆ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 6
ಕುಂಭ: ಅನಗತ್ಯವಾಗಿ ಧನವ್ಯಯ. ಕೃಷಿಯಲ್ಲಿ ಅಲ್ಪ ಲಾಭ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಆರ್ಥಿಕ ಅಡಚಣೆ. ಶುಭಸಂಖ್ಯೆ: 8
ಮೀನ: ವ್ಯಾಪಾರದಲ್ಲಿ ಪ್ರಗತಿ. ಸಾರ್ವಜನಿಕ ಜೀವನದಲ್ಲಿ ಮನ್ನಣೆ. ಭೂ ವ್ಯವಹಾರಸ್ಥರಿಗೆ ಆರ್ಥಿಕ ನಷ್ಟ. ಕುಟುಂಬದಲ್ಲಿ ಸಂತೋಷ. ಶುಭಸಂಖ್ಯೆ: 1