ನಿತ್ಯಭವಿಷ್ಯ| ಈ ರಾಶಿಯವರಿಗೆ ಅನೇಕ ದಿನದಿಂದ ಕಾಡುತ್ತಿದ್ದ ಕೊರತೆ ಇಂದು ನಿವಾರಣೆಯಾಗಲಿದೆ

Nitya-Bhavishya-vvani-1-2-1
Published on

ಮೇಷ: ಇತರರಿಗೆ ಮಾದರಿಯಾಗಬಲ್ಲಂತಹ ಕೆಲಸ ಮಾಡುವವರು ನೀವು. ಸಾಮಾಜಿಕ ಮನ್ನಣೆ ಸಿಗುವುದರಿಂದ ಸಂತಸವಿದೆ. ಶುಭಸಂಖ್ಯೆ: 1

ವೃಷಭ: ಕಲಾವಿದರಿಗೆ ವಿನೂತನವಾದ ಕಲಾಕೃತಿಗಳು ಉತ್ತಮ ಲಾಭವನ್ನೇ ತಂದುಕೊಡಲಿವೆ. ಆಪ್ತರ ಭೇಟಿಯೂ ಸಾಧ್ಯವಾಗಲಿದೆ. ಶುಭಸಂಖ್ಯೆ: 6

ಮಿಥುನ: ನೀವೇ ನಿಮ್ಮನ್ನು ವಿಮಶಿಸಿಕೊಳ್ಳಲಿದ್ದೀರಿ. ಮುಂದೆ ಎದುರಾಗುವಂಥ ಅಡೆತಡೆಗಳನ್ನು ಇದರಿಂದ ತಡೆಯಬಹುದು. ಶುಭಸಂಖ್ಯೆ: 7

ಕಟಕ: ಕೃಷಿಕವರ್ಗದವರಿಗೆ ಕೆಲವು ರೀತಿಯ ತಡೆಗಳು ಎದುರಾಗಬಹುದು. ಬೆಳೆದು ನಿಂತಿರುವ ಪೈರಿಗೆ ಬೇಗನೆ ಸೂಕ್ತ ವ್ಯವಸ್ಥೆ ಮಾಡಿ. ಶುಭಸಂಖ್ಯೆ: 4

ಸಿಂಹ: ಅನೇಕ ದಿನಗಳಿಂದ ಕಾಡುತ್ತಿದ್ದ ಕೊರತೆಗಳು ನಿವಾರಣೆಯಾಗಲಿವೆ. ಮಕ್ಕಳಿಂದ ಶುಭವಾದ ಸಮಾಚಾರವನ್ನೂ ಕೇಳಲಿದ್ದೀರಿ. ಶುಭಸಂಖ್ಯೆ: 8

ಕನ್ಯಾ: ನಿಮ್ಮ ಯೋಚನೆ-ಯೋಜನೆಗಳು ಬೇಗಬೇಗನೆ ಸಾಕಾರಗೊಳ್ಳಲಾರವು. ಆದರೆ ನವೋತ್ಸಾಹಕ್ಕೆ ಬೇಕಾದ ಅವಕಾಶಗಳು ಸಿಗಲಿವೆ. ಶುಭಸಂಖ್ಯೆ: 5

ತುಲಾ: ಹೊಸ ದಾರಿಯ ಬಗ್ಗೆ ದ್ವಂದ್ವ ಎದುರಾಗಬಹುದು. ಈ ಕುರಿತಾಗಿ ಆತ್ಮೀಯರಾದ ಸ್ನೇಹಿತರ ಸಲಹೆ ಪಡೆಯುವುದು ಯುಕ್ತವಾಗಿದೆ. ಶುಭಸಂಖ್ಯೆ: 2

ವೃಶ್ಚಿಕ: ವ್ಯವಧಾನದಿಂದ ಬಾಳಸಂಗಾತಿಯ ಸಲಹೆ ಕೇಳಿಸಿಕೊಳ್ಳಿ. ಅವರು ನೀಡುವ ಸಲಹೆಗಳಿಂದ ಲಾಭ ಉಂಟಾಗಲು ಸಾಧ್ಯವಿದೆ. ಶುಭಸಂಖ್ಯೆ: 9

ಧನುಸ್ಸು: ಹೊಸ ಕನಸುಗಳನ್ನು ಮುಂದಕ್ಕೆ ತಳ್ಳುತ್ತಿರಬೇಡಿ. ಆಪ್ತರಾದ ಜನರು ನಿಮಗೆ ಕನಸುಗಳ ಸಾಕಾರಕ್ಕೆ ದೊಡ್ಡ ನೆರವನ್ನೇ ನೀಡಲಿದ್ದಾರೆ. ಶುಭಸಂಖ್ಯೆ: 3

ಮಕರ: ಮೇಲಧಿಕಾರಿಗಳ ಮೆಚ್ಚುಗೆ, ಹಾರೈಕೆಗಳೆಲ್ಲವೂ ದೊರೆಯಲಿವೆ. ವೃತ್ತಿಜೀವನದಲ್ಲಿ ಪದೋನ್ನತಿ ದೊರೆಯುವ ಸಂಭವವೂ ಇದೆ. ಶುಭಸಂಖ್ಯೆ: 7

ಕುಂಭ: ವಿವಾಹಾಪೇಕ್ಷಿಗಳಿಗೆ ಹಿರಿಯರ ನೆರವು ಸಿಗಲಿದೆ. ಭಗವತಿ ಚಂಡಿಕಾಂಬೆಯ ಕೃಪಾಶೀರ್ವಾದದಿಂದ ಮುಂದಿನ ಯತ್ನದಲ್ಲಿ ಯಶಸ್ಸಿದೆ. ಶುಭಸಂಖ್ಯೆ: 6

ಮೀನ: ವಂಚಕರ ಸಂಚುಗಳಿಗೆ ಸಿಲುಕುವ ಸಂಭವ ಇದೆ. ಹೀಗಾಗಿ ಕಾಗದಪತ್ರಗಳನ್ನೆಲ್ಲ ಸಂಪೂರ್ಣವಾಗಿ ಓದಿದ ನಂತರವೇ ಸಹಿ ಮಾಡಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net