ಭವಿಷ್ಯ: ಈ ರಾಶಿಯವರಿಗಿಂದು ಅಧಿಕ ಧನಾಗಮನವಾಗಿ ಮಾನಸಿಕ ಸಮಾಧಾನ

Nithya Bhavishya
Published on

ಮೇಷ: ಅಧಿಕ ಧನಾಗಮನವಾಗಿ ಮಾನಸಿಕ ಸಮಾಧಾನ. ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ. ಮಕ್ಕಳ ನಡತೆಯಿಂದ ಆತಂಕ. ಶುಭಸಂಖ್ಯೆ: 9

ವೃಷಭ: ಸ್ವಂತ ವ್ಯವಹಾರದಲ್ಲಿ ಅನುಕೂಲ. ಶತ್ರುಗಳಿಂದ ಮನೋವೇದನೆ. ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1

ಮಿಥುನ: ಪ್ರೀತಿ ಪ್ರೇಮದ ವಿಷಯದಲ್ಲಿ ಆತಂಕ. ಅಧಿಕ ಖರ್ಚು ಉಂಟಾಗುವುದು. ಅತಿಯಾದ ವಿಷಯಾಸಕ್ತಿ. ಭಾವನೆಗಳು ಕಾಡುವುದು. ಶುಭಸಂಖ್ಯೆ: 5

ಕಟಕ: ಮಹಿಳೆಯರಿಂದ ಆರ್ಥಿಕ ನಷ್ಟ. ಕೆಲವೊಂದು ವಿಷಯಗಳಿಂದ ಸಮಸ್ಯೆ. ಸ್ಥಿರಾಸ್ತಿ ಅಥವಾ ವಾಹನದಿಂದ ಮೋಸ. ಶುಭಸಂಖ್ಯೆ: 8

ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು. ಬಂಧು ಬಾಂಧವರಿಂದ ಸಮಸ್ಯೆ. ವಿಲಾಸಿ ಜೀವನಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಶುಭಸಂಖ್ಯೆ: 2

ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು ಸಿಗುವುದು. ದೂರ ಪ್ರದೇಶದಲ್ಲಿ ಉದ್ಯೋಗ. ಸ್ವಂತ ಉದ್ಯೋಗದವರಿಗೆ ಅನುಕೂಲವಿದೆ. ಶುಭಸಂಖ್ಯೆ:3

ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ. ಕಲ್ಪನೆಗಳಲ್ಲಿ ವಿಹರಿಸುವಿರಿ. ಸ್ವಂತ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ ಒದಗಿಬರುವುದು. ಶುಭಸಂಖ್ಯೆ: 2

ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ. ಆಕಸ್ಮಿಕ ಅವಘಡ. ಪ್ರಯಾಣದಿಂದ ನಷ್ಟವಾದೀತು. ಉದ್ಯೋಗ ಸ್ಥಳದಲ್ಲಿ ಅಪಮಾನ. ಶುಭಸಂಖ್ಯೆ: 6

ಧನುಸ್ಸು: ಅನಾರೋಗ್ಯ ಸಮಸ್ಯೆ. ಸಾಲಬಾಧೆ ಮತ್ತು ಶತ್ರು ಕಾಟ. ಭವಿಷ್ಯದ ಚಿಂತೆ ವಿಪರೀತ ಕಾಡುವುದು. ಬಂಧುಗಳಿಂದ ಲಾಭ. ಶುಭಸಂಖ್ಯೆ: 4

ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ಅನುಕೂಲಕರ ಸನ್ನಿವೇಶ. ಉತ್ತಮ ಹೆಸರು ಸಂಪಾದನೆ. ಅಧಿಕ ಖರ್ಚು. ಶುಭಸಂಖ್ಯೆ: 1

ಕುಂಭ: ಪ್ರಯಾಣದಲ್ಲಿ ಶತ್ರು ಕಾಟ. ತಂದೆಯಿಂದ ನಿರೀಕ್ಷಿತ ಸಹಕಾರ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ ಕೈಗೊಳ್ಳಲು ಸಿದ್ಧತೆ. ಶುಭಸಂಖ್ಯೆ: 5

ಮೀನ: ಮಕ್ಕಳಿಂದ ನೋವು ಉಂಟಾಗಬಹುದು. ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ. ಆಯುಷ್ಯದ ಬಗ್ಗೆ ಚಿಂತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net