ಈ ರಾಶಿಯವರಿಗೆ ಇಂದು ಯಶಸ್ಸಿನಲ್ಲಿ ಪಾಲುದಾರರಾಗುವ ಅವಕಾಶ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಕಾಲಿಕ ಸಲಹೆ ದೊರೆತು ಕಾರ್ಯದಲ್ಲಿ ಯಶಸ್ಸು. ಸರ್ಕಾರದಿಂದ ಬರಬೇಕಾದ ಸೌಲಭ್ಯಗಳು ಬಂದೊದಗುವವು. ಶುಭಸಂಖ್ಯೆ: 8

ವೃಷಭ: ಸ್ನೇಹಿತರ ಸಲಹೆಯಿಂದ ಯಶಸ್ಸಿನ ಮಾರ್ಗ ಕಾಣುವುದು. ನೆರೆಯವರಿಂದ ಸಹಕಾರ. ಮಂಗಳಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:5

ಮಿಥುನ: ಕೌಟುಂಬಿಕ ಸಮಸ್ಯೆ ಪರಿಹಾರವಾಗಿ ನೆಮ್ಮದಿ. ಆಭರಣಗಳ ಬಗ್ಗೆ ಜಾಗ್ರತೆ ವಹಿಸಿ. ರಾಜಕೀಯದಲ್ಲಿರುವವರಿಗೆ ಯಶ. ಶುಭಸಂಖ್ಯೆ: 3

ಕಟಕ: ವಿಶೇಷ ವ್ಯಕ್ತಿಗಳ ಪರಿಚಯದಿಂದಾಗಿ ಪ್ರಭಾವಿತರಾಗಿ ಉಲ್ಲಾಸ ಮೂಡುವುದು. ಹೆಣ್ಣುಮಕ್ಕಳ ವಿಚಾರದಲ್ಲಿ ಕಾಳಜಿ ವಹಿಸಿ. ಶುಭಸಂಖ್ಯೆ:3

ಸಿಂಹ: ಪ್ರಯತ್ನಕ್ಕೆ ಪ್ರತಿಫಲ ದೊರಕಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಸಾಧ್ಯತೆ. ಸಮುದ್ರ ಖಾದ್ಯ ಉದ್ಯಮಿಗಳಿಗೆ ಲಾಭ. ಶುಭಸಂಖ್ಯೆ: 4

ಕನ್ಯಾ: ಹಿರಿಯರ ಮಾತುಗಳಿಗೆ ಅಗೌರವ ಬೇಡ. ಯಾವುದೇ ಸಂಕಷ್ಟ ಬಂದರೂ ಹಿರಿಯರ ಜಾಣ್ಮೆಯ ಮಾತುಗಳಿಂದ ಪರಿಹಾರ. ಶುಭಸಂಖ್ಯೆ: 7

ತುಲಾ: ಉತ್ತಮ ಕೆಲಸಗಳಿಗಾಗಿ ಮುನ್ನುಗ್ಗಿ ಯಶ ಸಾಧಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಲಾಭವಿಲ್ಲ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 6

ವೃಶ್ಚಿಕ: ದ್ವಂದ್ವ ನಿಲುವಿನಿಂದಾಗಿ ಆರ್ಥಿಕ ನಷ್ಟ. ವಸ್ತ್ರಾಭರಣ ಖರೀದಿ ಸಾಧ್ಯತೆ. ಪುಣ್ಯ ಕ್ಷೇತ್ರ ದರ್ಶನ ಭಾಗ್ಯ. ಕಾರ್ಯಗಳು ಸುಗಮ. ಶುಭಸಂಖ್ಯೆ:2

ಧನುಸ್ಸು: ಸ್ನೇಹಿತರಿಂದಾಗಿ ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ. ಹೊಂದಾಣಿಕೆಯಿಂದ ಉತ್ತಮ ಕಾರ್ಯನಿರ್ವಹಣೆ. ಶುಭಸಂಖ್ಯೆ: 9

ಮಕರ: ಯಶಸ್ಸಿನಲ್ಲಿ ಪಾಲುದಾರರಾಗುವ ಅವಕಾಶ. ಸಹೋದ್ಯೋಗಿಗಳಿಂದ ಮಾನ್ಯತೆ. ಮನೆ ಸಮಾರಂಭಗಳಲ್ಲಿ ಗೌರವ. ಶುಭಸಂಖ್ಯೆ: 9

ಕುಂಭ: ವೃತ್ತಿ ಸಮಸ್ಯೆ ಉಲ್ಬಣಗೊಂಡರೂ ಕ್ರಮೇಣ ಪರಿಹಾರ ಸಿಗಲಿದೆ. ಉದ್ಯೋಗ ಪ್ರಾಪ್ತಿ. ವಾಹನ ಸವಾರರು ಎಚ್ಚರದಿಂದಿರಿ. ಶುಭಸಂಖ್ಯೆ:1

ಮೀನ: ಕಲಾವಿದರು, ವಿದ್ವಾಂಸರಿಗೆ ಸಾಮಾಜಿಕ ಗೌರವ. ಮಹಿಳೆಯರು ಅಧಿಕ ಮಾತಿನಿಂದಾಗಿ ಸಂಕಷ್ಟಕ್ಕೊಳಗಾಗಬಹುದು. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net