

ಮೇಷ: ಭೇಟಿಯಾಗುವ ವಿಶೇಷ ಜನರು ಕಿರಿಕಿರಿ ಉಂಟುಮಾಡಿದರೂ ಮಹತ್ವದ ಸಂಗತಿಗಳನ್ನು ತಿಳಿಸಲಿದ್ದಾರೆ. ಶುಭಸಂಖ್ಯೆ: 9
ವೃಷಭ: ವಿರೋಧಿಗಳಿಂದ ಅಣಕಿಸಲ್ಪಡುವ ಪ್ರಸಂಗ ಎದುರಾಗಬಹುದು. ಆದರೂ ಸಾವಧಾನದಿಂದಲೇ ವರ್ತಿಸಿ. ಶುಭಸಂಖ್ಯೆ: 7
ಮಿಥುನ: ಬದುಕಿನ ಬಹು ನಿರೀಕ್ಷೆಯ ಮಹತ್ವದ ಕಾಲಘಟ್ಟ ಹತ್ತಿರದಲ್ಲೇ ಇದೆ. ಅದಕ್ಕಾಗಿ ತಯಾರಿ ಪ್ರಾರಂಭವಾಗಲಿ. ಶುಭಸಂಖ್ಯೆ: 1
ಕಟಕ: ಚಿನ್ನದ ವಸ್ತುಗಳ ಬಗ್ಗೆ ವಿಶೇಷ ನಿಗಾ ಇಟ್ಟರೆ ಒಳ್ಳೆಯದು. ದಿನದ ಒತ್ತಡಗಳ ಮಧ್ಯೆ ಈ ಬಗ್ಗೆ ನಿರ್ಲಕ್ಷಿಸದಿರಿ. ಶುಭಸಂಖ್ಯೆ: 3
ಸಿಂಹ: ಅನ್ಯಲಿಂಗಿಗಳ ಜತೆ ಅತಿಯಾದ ಸಲುಗೆ ವಹಿಸುವುದು ಬೇಡ. ಈ ಸೂಕ್ಷ್ಮ ಕಾಲಘಟ್ಟದ ವಿವೇಚನೆ ನಿಮಗೆ ಇದ್ದಿರಲಿ. ಶುಭಸಂಖ್ಯೆ: 6
ಕನ್ಯಾ: ಈಜುವುದೂ ಸೇರಿದಂತೆ ನೀರಿನ ಕುರಿತ ವಿಷಯಗಳಲ್ಲಿ ಎಚ್ಚರ ವಹಿಸಬೇಕು. ಧನ್ವಂತರಿಯ ಸ್ತುತಿ ಮಾಡಿ. ಶುಭಸಂಖ್ಯೆ: 4
ತುಲಾ: ಉನ್ನತ ವ್ಯಾಸಂಗದ ವಿಚಾರವಾಗಿ ಆರ್ಥಿಕ ಬೆಂಬಲ ಪಡೆಯುವ ಹೊಸ ಮಾರ್ಗವನ್ನು ಕಂಡುಕೊಳ್ಳಲಿದ್ದೀರಿ. ಶುಭಸಂಖ್ಯೆ: 8
ವೃಶ್ಚಿಕ: ಹಿರಿಯರ ಆಸ್ತಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಬಂಧುಗಳಿಂದ ಕೆಲವು ಕಡತಗಳು ಸಿಗುವಂಥ ಸಾಧ್ಯತೆಗಳಿವೆ. ಶುಭಸಂಖ್ಯೆ: 2
ಧನಸ್ಸು: ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ. ಸಂಗಾತಿಯ ಜತೆಗಿನ ಚರ್ಚೆಯಿಂದ ತಕ್ಕ ಬೆಂಬಲ ಕೂಡ ಲಭ್ಯ. ಶುಭಸಂಖ್ಯೆ: 5
ಮಕರ: ನಿಮ್ಮ ದೌರ್ಬಲ್ಯಗಳನ್ನು ಅರಿತವರು ಬಲೆ ಬೀಸುವುದಕ್ಕೆ ಸಜ್ಜಾಗಿದ್ದಾರೆ. ಹೆಚ್ಚಿನ ವಿವೇಕದಿಂದಲೇ ವರ್ತಿಸಿ. ಶುಭಸಂಖ್ಯೆ: 9
ಕುಂಭ: ಅಪರೂಪದ ಸಿದ್ಧಿಯೊಂದು ಒದಗಲು ಬೇಕಾದ ಅವಕಾಶ ಬರಲಿದೆ. ಅದನ್ನು ಜಾಣ್ಮೆಯಿಂದ ಅರ್ಥೈಸಿಕೊಳ್ಳಿ. ಶುಭಸಂಖ್ಯೆ: 7
ಮೀನ: ನಿಮ್ಮ ವರ್ತನೆಗಳು ಸಂಶಯಕ್ಕೆ ಅವಕಾಶ ಮಾಡಬಹá-ದು. ಪಾರದರ್ಶಕತೆಯಿಂದಲೇ ನಡೆದುಕೊಂಡರೆ ಕ್ಷೇಮವಿದೆ. ಶುಭಸಂಖ್ಯೆ: 1