

ಮೇಷ ರಾಶಿಯಲ್ಲಿ ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರು ಮೀನ-ಮೇಷ ಎಣಿಸದೆ ದೈವತ್ವದಲ್ಲಿ ತೊಡಗಿಕೊಂಡರೆ ಮಾತ್ರವೇ ಅಲ್ವ ಯಶಸ್ಸು, ಮನಸ್ಸಿಗೆ ಸಮಾಧಾನವು ಸಿಗಬಹುದಷ್ಟೇ. ಸುಖ-ದುಃಖಕ್ಕೆ ಯಾರೂ ಕಾರಣರಲ್ಲ. ನಾವು ಪಡೆದುಬಂದ ಸಂತೋಷ, ದುಃಖವನ್ನು ಸಮಾನ ರೀತಿಯಲ್ಲಿ ಕಂಡುಕೊಳ್ಳಬೇಕು. ಕೈಯಿಟ್ಟ ಕಾರ್ಯವು ನಡೆಯುವುದಕ್ಕೆ ವಿಳಂಬ. ಕಾರ್ಯ ಕೆಲಸದಲ್ಲಿ ತೊಡಕು. ಅಪವಾದ ಬರುವ ಸಾಧ್ಯತೆ. ಗುರುಗಳನ್ನು ಸಂದರ್ಶಿಸಿ ಪರಿಹಾರ ಕಂಡುಕೊಳ್ಳಿ.
ಪರಮಾತ್ಮನು ಮನುಷ್ಯನನ್ನು ಪ್ರಾಣಿಗಳನ್ನು ಸುಂದರವಾಗಿ ಕಾಣಲು ಸಸ್ಯಗಳನ್ನು ಅದಕ್ಕೆ ತಕ್ಕನಾಗಿ ಪ್ರಾಣಿ-ಪಕ್ಷಿಯನ್ನು ಸೃಷ್ಟಿಸಿದ್ದಾನೆ. ಮನುಷ್ಯನು ಪ್ರಾಣಿಯೇ ಸರಿ. ಆದರೆ, ಪ್ರಾಣಿ-ಪಕ್ಷಿಗಳಿಗಿಂತಾ ಮನುಷ್ಯನು ಶ್ರೇಷ್ಠ ಜೀವಿ. ಯಾವ ಅಹಿತವನ್ನೂ ಮಾಡದೆ ಹಿತವಾದ ಕೆಲಸಗಳನ್ನು ಮಾಡುತ್ತಾ ಒಳ್ಳೆಯದನ್ನು ನುಡಿಯಬೇಕು. ಮನಸ್ಸಿನ ಕಾರ್ಯ ಸಾಧಿಸಲು ಸಾಧ್ಯ. ಇಲ್ಲದಿದ್ದರೆ ಸಾಮೂಹಿಕವಾಗಿ ತಿರಸ್ಕಾರಕ್ಕೆ ಒಳಗಾಗಿ ಸಂಕಲ್ಪ ನಿಧಾನವಾಗಿ ಸಾಗುತ್ತದೆ. 11 ಶುಕ್ರವಾರಗಳ ಕಾಲ ಚಂಡಿಕಾಪಾಠವನ್ನು ಪಾರಾಯಣ ಮಾಡಿಸಿ.
ಕನ್ಯಾ, ಮಿಥುನ ರಾಶಿಗಳು ಬುಧನ ಸ್ವಕ್ಷೇತ್ರಗಳು. ಅತ್ಯಂತ ಶುಭಫಲ ನೀಡುವುದು ಬುಧ ಗ್ರಹನೊಬ್ಬನೆ. ಎಲ್ಲರ ಜೊತೆಯಲ್ಲೂ ಬುದ್ಧಿಯನ್ನು ಜೋಡಿಸಿ ಜ್ಞಾನಶಕ್ತಿಯನ್ನು, ಜ್ಞಾನಧಾರಣ ಮೇಧಾ ಶಕ್ತಿಯನ್ನು ನೀಡುವ ಗ್ರಹ ಬುಧ. ಯಾವುದೇ ಗ್ರಹದೊಡನೆ ಹೊಂದಿಕೊಂಡು ಸಾಗುವವನು ಬುಧನೇ. ಮಿಥುನ ರಾಶಿಯವರು ಎಲ್ಲವನ್ನು ಹೊಂದಿಕೊಂಡು ಹೋದರೆ ದಶಮ ಗುರು ಸ್ವಕ್ಷೇತ್ರದಲ್ಲಿ ಇರುವುದರಿಂದ ಕೆಲಸಗಳು ಗರಿಷ್ಠ ಮಟ್ಟವನ್ನು ಮುಟ್ಟಿ ಸುಖವನ್ನು ಕೊಡುತ್ತದೆ.
ಮನುಷ್ಯನು ಗಾಳಿ, ಬೆಳಕು ಜಲವಿಲ್ಲದೆ ಬದುಕಲು ಅಸಾಧ್ಯವಾದ ಮಾತು. ಯಾರು ಏನನ್ನು ಬೇಕಾದರೂ ಕೊಡಬಹುದು. ಪಂಚತತ್ವದಲ್ಲಿ ಈ 3 ತತ್ವಗಳನ್ನು ನೀಡುವವನು ಉಷ್ಣತೆಗೆ ಸೂರ್ಯ, ತೇವಾಂಶಕ್ಕೆ ಚಂದ್ರ, ವಾಯುತತ್ವಕ್ಕೆ ಗಾಳಿ. ಈ ದೈವ ಋಣ ತೀರಿಸಲು ಮನುಷ್ಯನಿಗೆ ಸಾಧ್ಯವೇ? ಆದ್ದರಿಂದ ಮನುಷ್ಯನು ದೈವಕ್ಕೆ ಶರಣು ಹೋಗಿ ಪೌರ್ಣಮಿ ದಿನದಂದು ಶಿರದಲ್ಲಿ ಚಂದ್ರರನ್ನು ಮುಡಿದಿರುವ ಉಮಾಮಹೇಶ್ವರ ವ್ರತಕಥೆ ಓದಿರಿ.
ಮನುಷ್ಯನು ಸದಾಕಾಲವು ಧರ್ಮದ ಹಾದಿಯಲ್ಲಿ ಸಾಗಿದರೆ ಅವನನ್ನು ದೈವವೇ ಕಾಪಾಡುತ್ತದೆ. ಧರ್ಮಕರ್ವಧಿಪತಿ ಶನಿಯು ಶುಭದಲ್ಲಿದ್ದು, ಶುಭ್ರವಾದ ಜೀವನ, ಶುಭ ಸಮಾಚಾರ, ಶುದ್ಧ ರೀತಿಯಲ್ಲಿ ಸಂಪಾದಿಸಿದ ಧನ ತಂದುಕೊಡಲು ಉದ್ಯುಕ್ತನಾಗಿದ್ದಾನೆ. ಗುರುವು ಸ್ವಕ್ಷೇತ್ರದಲ್ಲಿ ಇರುವುದು ಯಾರ ಹಂಗೂ ಬೇಕಾಗಿಲ್ಲ. ನಿರಂತರವಾದ ಸೂರ್ಯಪ್ರಾರ್ಥನೆ ಇರಲಿ. ನಿಮ್ಮ ಕುಲಗುರುವಿಗೆ ನಮಸ್ಕಾರವಿರಲಿ. ಸದಾ ಷಣ್ಮುಖ ನಾಮಸ್ಮರಣೆಯಿರಲಿ.
ಮನಸ್ಸಿನ ಸ್ವಾಸ್ಥ್ಯ ಕಳೆದುಕೊಂಡವನು ಬಲಹೀನನು. ಸಪ್ತಮ ಗುರುವಿನಿಂದ ಮುಂದಿನ ಸಂವತ್ಸರಕ್ಕೆ ಅಷ್ಟಮಕ್ಕೆ ಬರುತ್ತಾನೆ. ನಿಮಗೆ ಮಾಡಿಕೊಟ್ಟ ಕೆಲಸ ಅರ್ಥ ಮಾಡಿಕೊಳ್ಳದೆ ಇದ್ದರೆ ಗುರುವೇ ನಿಮಗೆ ಪಾಠ ಕಲಿಸುವುದಲ್ಲದೆ ಆಡಿದ ಮಾತನ್ನು ಅರ್ಥ ಮಾಡಿಕೊಳ್ಳದಿದ್ದರೆ ಪಂಚಮ ಶನಿಯು ನಿಮ್ಮನ್ನು ಕಾಣದ ಕಷ್ಟಗಳಿಗೆ ಸಿಲುಕಿಸುತ್ತಾನೆ. ನಡೆ-ನುಡಿಯು ಏಕತಾಳವಾಗಿರಬೇಕು. ದ್ರೋಹ ಮಾಡಬೇಕಾಗಿಲ್ಲ. ದ್ರೋಹ ಚಿಂತನೆ ಬಂದರೆ ಸಾಕು ದೈವದ್ರೋಹ ಶುಭಫಲ ಕಳೆದುಕೊಳ್ಳುವಿರಿ. ಗುರು ವಂಶಜರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳಿ. ಸುಳ್ಳುಗಳನ್ನು ನುಡಿದರೆ ಹೊಟ್ಟೆಗೆ ಅದೇ ಮುಳ್ಳಾಗುತ್ತದೆ. ಅದನ್ನು ದೂರವಿಟ್ಟು ಅನಂತಪದ್ಮನಾಭನನ್ನು ಪೂಜಿಸಿ. ಸತ್ಪಲ ಪಡೆಯಿರಿ.
ಈ ವಾರದಲ್ಲಿ ಗ್ರಹಗಳ ದೃಷ್ಟಿ, ಸ್ಥಾನಗಳು ನಿರೀಕ್ಷಿಸಿದ ಫಲವನ್ನು ಕಾಣದೆ ಇರುವ, ಕೇಳದೇ ಇರುವ, ನೋಡದೆ ಇರುವ ಕೆಲಸಗಳನ್ನು ಮಾಡಿ ಸಮೃದ್ಧಿ- ಸಂತೋಷ ನಡೆಸುತ್ತಾನೆ. ಮೂರ್ಖನಾಗಿ ಬದುಕುವ ಬದಲು ಸನ್ಮಾರ್ಗದಲ್ಲಿ ನಡೆದರೆ ಜ್ಞಾನ ಲಭ್ಯ. ಅಧಿಕ ಸಂಪಾದನೆ, ಸಂತೋಷ ಕಾಣುತ್ತೀರಿ. ನಿಮಗೆ ಯಾರಾದರೂ ಮನಸ್ಸಿಗೆ ದುಃಖ ಅಥವಾ ನಷ್ಟ ಉಂಟು ಮಾಡಿದರೆ ಅವರು ಒಂದು ದಿನ ನಿಮ್ಮ ಮುಂದೆ ತಲೆಬಾಗಿ ನಿಲ್ಲುತ್ತಾರೆ. ತಾಳ್ಮೆಯೇ ಮಂತ್ರವಾಗಿರಲಿ. ವ್ರತಗಳಲ್ಲಿ ಶ್ರೇಷ್ಠವಾದ ಕೈಲಾಸದಲ್ಲೇ ಆಧರಿಸುವ ಉಮಾಮಹೇಶ್ವರ ವ್ರತಕತೆಯನ್ನು ಓದಿ ಪಾರ್ವತಿ ಪರಮೇಶ್ವರರೆಂದು ಬ್ರಾಹ್ಮಣ ಮುತೆôದೆಯರಿಗೆ ಅನ್ನದಾನ ಮಾಡಿ.
ಮನುಷ್ಯನು ಮನುಷ್ಯನನ್ನು ತಿರಸ್ಕರಿಸದೆ ಸತ್ಕರಿಸಿ ಅವನಲ್ಲಿ ಅಡಗಿರುವ ತಪೋಶಕ್ತಿ, ದೈವತ್ವ ಪಡೆಯಬೇಕು. ನಡೆಯುವಾಗ ಎಡವುವನಿಗೆ ಕಾರಣ ತಿಳಿಯುತ್ತದೆ. ಅದರಂತೆ ಗುರುವಚನವು ಅಮೃತವಿದ್ದಂತೆ. ನಿಮಗೆ ಒಳ್ಳೆಯ ಕಾಲ ನಡೆಯುತ್ತಿದೆ. ಧನ, ಸುಖ ಸಂತೋಷ ಪಡೆಯುವ ಕಾಲ. ಅನ್ಯ ಆಲೋಚನೆ ಬಿಟ್ಟು ಯಾರ ಜತೆಯಾದರೂ ತಪ್ಪಾಗಿ ನಡೆದುಕೊಂಡಿದ್ದರೆ ದೇವರ ಮುಂದೆ ಕ್ಷಮೆಯಾಚಿಸಿ. ಪಂಚಮ ಗುರು- ತೃತೀಯ ಶನಿ ವಿಶೇಷ ಫಲ ನೀಡುತ್ತಾನೆ. ಭಾದ್ರಪದ ಮಾಸದ ದೇವತೆಯಾದ ವಾಮನ ಕಥೆಯನ್ನು ಸುದರ್ಶನ ಅಷ್ಟೋತ್ತರ ಪಠಿಸಿ, ಶ್ರೀಕೃಷ್ಣನನ್ನು ಧ್ಯಾನಿಸಿ.
ಮೂಲಾ-4, ಪೂ.ಷಾ-4, ಉ.ಷಾ-1ರಲ್ಲಿ ಸ್ವಕ್ಷೇತ್ರ ಗುರುವು ಯಾವ ಅಶುಭಗಳನ್ನು ತರುವುದಿಲ್ಲ. ದೇವರನ್ನು, ದೊಡ್ಡವರನ್ನು ಕಂಡ ಕೂಡಲೇ ಶಿರವು ತಾನಾಗಿಯೇ ಬಾಗಬೇಕು. ಬಲವಂತವಾಗಿ ಶಿರವನ್ನು ಬಗ್ಗಿಸಲು ಆಗುವುದಿಲ್ಲ. ಧನಸ್ಸನ್ನು ಮುರಿಯಲಾಗುವುದಿಲ್ಲ. ಗುರಿ ದೈವಾತ್ಮಕವಾಗಿರಲಿ. ಯಶಸ್ಸಿನ ಬಗ್ಗೆ ಹೆಮ್ಮೆಯೂ ಬೇಡ. ಸಾಧನೆ ಮಾಡಿದ್ದೇನೆಂಬ ಪ್ರಶಂಸೆಯೂ ಬೇಡ. ತಿದ್ದಲು ಬಂದವರು ತಿದ್ದಲಿ. ಈಗ ಎಲ್ಲಾ ಸದ್ಗುಣಗಳನ್ನು ಕಲಿಯುವ ಸಮಯ. ಕಲಿತು ಬಾಳಿದರೆ ರಾಜ್ಯ, ಕೋಶ, ಆರೋಗ್ಯ ತುಂಬಿದ ಆಯಸ್ಸು ನಿಮ್ಮದಾಗುತ್ತದೆ. ನೆನಪಿರಲಿ ಇನ್ನೂ 4 ತಿಂಗಳು ಶನಿಯ ಕಡೆಯ ಸಂಚಾರವಿದೆ.
ಅಷ್ಟ ಲಕ್ಷಣದಲ್ಲಿ ಮುಖ ಲಕ್ಷಣವೇ ಬಹಳ ಪ್ರಮುಖವಾದ ವಿಚಾರ. ಮುಖವು ರಥದೊಳಗಿರುವ ದೇವರಂತೆ ಇರಬೇಕು. ಮನುಷ್ಯನು ಕೀರ್ತಿವಂತನಾಗಿ, ಯಶಸ್ಸನ್ನು ಗಳಿಸಬೇಕಾದರೆ ಜಯವನ್ನು ಮುಟ್ಟಿ ಸಾಧನೆಯನ್ನು ಮಾಡಿ ತೋರಿಸಬೇಕು. ಗ್ರಹಗಳು ಶುಭಾಶುಭಗಳನ್ನು ತರುವುದೇ ನಮ್ಮ ಒಳ್ಳೆಯದಕ್ಕೆ. ಶನಿಯು ಲಗ್ನದಲ್ಲಿ, ತೃತೀಯದಲ್ಲಿ ಗುರುವಿದ್ದಾನೆ. ಕೆಲಸವು ನಿಮ್ಮಂತೆ ಆಗಲು ನೋಡಿಕೊಳ್ಳಿ.
ಸ್ತಂಭವೇ ಮನುಷ್ಯನಿಗೆ ಆಧಾರ. ಅದರಂತೆ ಮನುಷ್ಯ ದೈವ ಬಲವೇ ದೇವರು ಕೊಡುವ ಆಧಾರ. ದೈವಾಧಾರದಲ್ಲಿ ನಿಂತು ಕೆಲಸ ಮುಂದುವರಿಸಿ. ಪೂರ್ಣಕಲಶದಲ್ಲಿ ಅಲಂಕಾರ ಪ್ರಿಯನಾದ ವಿಷ್ಣುವನ್ನು ನೋಡಿದಂತೆ ಮುಖಲಕ್ಷಣವು ಹಾಗಾಗಬೇಕಾದರೆ ಸತ್ಕಾರ್ಯ, ಧೈವಸ್ಮರಣೆ, ಮಾತಾ-ಪಿತರನ್ನು ಉಮಾಮಹೇಶ್ವರರಂತೆ ಪೂಜಿಸಿ. 12ರ ಶನಿಯ ತಾಪವು ಕುಗ್ಗಿ, ಮಾತೃ ಪ್ರಿಯ ಶನಿಯು ನಿಮ್ಮನ್ನು ಹರಸುವನು. ದ್ವಿತೀಯದಲ್ಲಿ ಗುರು ಇರುವುದರಿಂದ ಅನ್ಯತಾ ಯಾರನ್ನೂ ದೂಷಿಸದೆ ಮುಂದೆ ಸಾಗಿದಲ್ಲಿ ಅನಂತವಾಗಿ ನಿಮ್ಮನ್ನು ಹರಸಲು ಶ್ರೀ ಕೃಷ್ಣನು ನಿಂತಿದ್ದಾನೆ. ಕೃಷ್ಣಾಷ್ಟೋತ್ತರ ಪಾರಾಯಣ ಮಾಡಿರಿ.
ಮೀನ ರಾಶಿಯಲ್ಲಿ ಜನಿಸಿರುವ ನೀವು ಜಲಪ್ರಾಣಿಯಾದ ಮೀನಿನಂತೆ ಒದ್ದಾಡಬಾರದು. ಮೀನಿಗೆ ನೀರಿನಿಂದ ಹೊರಬಂದರೆ ಆಯುಷ್ಯವು ಇಂಗುತ್ತದೆ. ಮನುಷ್ಯನಿಗೆ ದೇವರು ಶತಾಯುಷ್ಯನಾಗಿ ಬದುಕುವ ಹಕ್ಕನ್ನು, ಸದ್ಗುಣಗಳನ್ನು ಕೊಟ್ಟಿದ್ದಾನೆ. ಏಕಾದಶ ಶನಿಯ ಶುಭ ಫಲವನ್ನು ಪಡೆದು ನಿನ್ನೆಯ ಚಂದ್ರನನ್ನು ನೋಡುವ ಹಂಬಲ ಇರಲಿ. ಯಾರನ್ನೂ ನಿಂದಿಸಬೇಡಿ, ಪಾಪ ಸಂಗ್ರಹವನ್ನು ಮಾಡಬೇಡಿ. ಗುರುವು ಲಗ್ನದಲ್ಲಿರುವುದರಿಂದ ಶುಭ್ರನಾಗಿ, ಸತ್ಯವಂತನಾಗಿ ಸದಾಕಾಲವೂ ದೈವ ಮಾರ್ಗವನ್ನು ಆಲೋಚಿಸುತ್ತಾ ಮುಂದೆ ಸಾಗಿದರೆ. ಜೀವನವು ಬಂಗಾರದಂತೆ ಸಾಗುವುದು.