ಈ ರಾಶಿಯವರಿಗಿಂದು ವಿಚಿತ್ರ ಸನ್ನಿವೇಶ ಅಚ್ಚರಿ ಮೂಡಿಸಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯವಹಾರದ ಮಾತುಕತೆ ಫಲ ನೀಡಲಿದೆೆ. ಮಿತ್ರ ವೃಂದದಲ್ಲಿ ಕಂಡುಬರುವ ಗೊಂದಲ ಹೋಗಲಾಡಿಸುವಲ್ಲಿ ಯಶಸ್ವಿ. ಶುಭಸಂಖ್ಯೆ: 9

ವೃಷಭ: ನಿಮ್ಮ ಕನಸನ್ನು ನನಸು ಮಾಡುವ ಅವಕಾಶಗಳು ಲಭಿಸಲಿವೆ. ಸಂತೋಷದಿಂದ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶುಭಸಂಖ್ಯೆ:1

ಮಿಥುನ: ಸಂಶೋಧಕರಿಗೆ ಬಹಳಷ್ಟು ಮಹತ್ವಪೂರ್ಣ ದಿನ. ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳಲು ಅವಕಾಶ ಸಿಗುವುದು. ಶುಭಸಂಖ್ಯೆ:4

ಕಟಕ: ದೈನಂದಿನ ಚಟುವಟಿಕೆ ಹೊರತುಪಡಿಸಿ ವಿಭಿನ್ನ ಪ್ರಯೋಗಗಳಲ್ಲಿ ಆಸಕ್ತಿ ಹೊಂದುವಿರಿ. ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ: 7

ಸಿಂಹ: ಭಾವನೆಗಳನ್ನು ಬೇರೆಯವರ ಜತೆ ಹಂಚಿಕೊಳ್ಳಬೇಡಿ. ಸಂತಾನ ಭಾಗ್ಯ.ಅದರ ಫಲವಾಗಿ ಮನೆಯಲ್ಲಿ ಸಂಭ್ರಮದ ವಾತಾವರಣ. ಶುಭಸಂಖ್ಯೆ: 2

ಕನ್ಯಾ: ರಾಜಕೀಯ ಭವಿಷ್ಯದ ಬಗ್ಗೆ ಮಾತುಕತೆ ನಡೆಸಿ. ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಶಕ್ತರಾಗುವಿರಿ. ಶುಭಸಂಖ್ಯೆ: 7

ತುಲಾ: ಆಸಕ್ತಿಕರ ಅವಕಾಶ ಸರಿಯಾಗಿ ಬಳಸಿಕೊಂಡಲ್ಲಿ ಯೋಜನೆಗಳಿಗೆ ಸಹಕಾರಿಯಾಗಲಿದೆ. ಸ್ತ್ರೀ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 3

ವೃಶ್ಚಿಕ: ಹಲವು ದಿನಗಳಿಂದ ಬರಬೇಕಾಗಿರುವ ಹಣ ಸಂಜೆಯ ವೇಳೆಗೆ ಕೈ ಸೇರುವುದು. ಕಾರ್ಯ ಕಲಾಪ ಸುಗಮವಾಗಿ ಸಾಗುವವು. ಶುಭಸಂಖ್ಯೆ: 7

ಧನುಸ್ಸು: ವಿಚಿತ್ರ ಸನ್ನಿವೇಶ ಅಚ್ಚರಿ ಮೂಡಿಸಲಿದೆ. ಕೌಟುಂಬಿಕ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿಯುತ ಸ್ಥಾನದಲ್ಲಿರುವಂತೆ ಭಾಸವಾಗಲಿದೆ. ಶುಭಸಂಖ್ಯೆ: 4

ಮಕರ: ವಿಭಿನ್ನ ಜನರ ಭೇಟಿ. ಸಾಮಾಜಿಕ ಬದುಕಿನಲ್ಲಿ ಬದಲಾವಣೆ ಗಾಳಿ. ಸರಳ ಬದುಕು ಇಷ್ಟವಾಗುವುದು. ಉನ್ನತ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 9

ಕುಂಭ: ತುರ್ತು ವಿಷಯದತ್ತ ಗಮನವಿರಲಿ. ಕೌಟುಂಬಿಕ ಸಂಬಂಧ ಸದೃಢಗೊಳ್ಳಲಿವೆ. ಯಾವುದೇ ವಿಚಾರದ ಅನಗತ್ಯ ಚರ್ಚೆ ಬೇಡ. ಶುಭಸಂಖ್ಯೆ: 7

ಮೀನ: ಕಳೆದ ದಿನಗಳ ಆತ್ಮಾವಲೋಕನದಿಂದ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ. ಮಗಳ ಮದುವೆ ಕಲಾಪ ಸುಗಮವಾಗಿ ನೆಮ್ಮದಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net