ಈ ರಾಶಿಯವರು ಗುರು ದತ್ತಾತ್ರೇಯನ ಆರಾಧನೆ ಮಾಡಿ...ಒಳಿತಾಗುತ್ತದೆ

Nitya-Bhavishya-vvani-1-2-1
Published on

ಮೇಷ: ಆಹಾರಧಾನ್ಯಗಳನ್ನು ಅಪಾರ ಪ್ರಮಾಣದಲ್ಲಿ ದಾಸ್ತಾನು ಮಾಡುವವರು ಎಚ್ಚರಿಕೆಯಲ್ಲಿರಬೇಕು. ಈಗ ಚಾತುರ್ಯವಷ್ಟೇ ಸಾಲದು. ಶುಭಸಂಖ್ಯೆ: 7

ವೃಷಭ: ವಸ್ತ್ರಗಳ ಉತ್ಪಾದಕರು, ಮಾರಾಟಗಾರರು ಪರಸ್ಪರ ಭಿನ್ನಾಭಿಪ್ರಾಯಗಳಿಂದ ದೂರ ಇದ್ದರಷ್ಟೇ ಲಾಭವಾಗಲಿದೆ. ಶುಭಸಂಖ್ಯೆ: 4

ಮಿಥುನ: ನೀವು ಮಾದಕದ್ರವ್ಯದಂತಹ ದುರಭ್ಯಾಸಕ್ಕೆ ಅಂಟಿಕೊಂಡಿದ್ದರೆ ಅದರಿಂದ ದೂರವಾಗಲು ಪ್ರಯತ್ನಿಸಿ. ಯಶಸ್ಸು ಸಿಗಲಿದೆ. ಶುಭಸಂಖ್ಯೆ: 1

ಕಟಕ: ಹೊಸ ಮನೆಯ ಕೆಲಸಗಳನ್ನು ಪ್ರಾರಂಭಿಸಲು ಅಡೆತಡೆಗಳು ಬರಬಹುದು. ಅವಸರ ಮಾಡದೆ ತೀರ್ಮಾನ ಕೈಗೊಳ್ಳಿ. ಶುಭಸಂಖ್ಯೆ: 3

ಸಿಂಹ: ಯಾವುದೋ ಕಾರಣವನ್ನು ಮುಂದೆ ಮಾಡಿಕೊಂಡು ಯಾವುದೋ ಹರಳನ್ನು ಧರಿಸದಿರಿ. ತುಸು ಎಚ್ಚರ ಇರಲಿ. ಶುಭಸಂಖ್ಯೆ: 6

ಕನ್ಯಾ: ಖರ್ಚುಗಳನ್ನು ತಡೆಯುವಂಥ ಯೋಜನೆಯನ್ನು ಹಾಕಿಕೊಂಡರೆ ಮಾತ್ರವೇ ಧನನಷ್ಟವನ್ನು ತಪ್ಪಿಸಲು ಸಾಧ್ಯವಾಗಲಿದೆ. ಶುಭಸಂಖ್ಯೆ: 9

ತುಲಾ: ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧ್ಯವಾಗದು. ಗಮನ ಸೆಳೆಯುವಂತಹ ಸುತ್ತಮುತ್ತಲಿನ ಪ್ರಭಾವಗಳಿಂದ ಹೊರಬನ್ನಿ. ಶುಭಸಂಖ್ಯೆ: 8

ವೃಶ್ಚಿಕ: ದೂರ್ವಾಂಕುರಗಳಿಂದ ಮಹಾಗಣಪತಿಯನ್ನು ಪೂಜಿಸಿದರೆ ಬರಲಿರುವ ವಿಘ್ನಗಳನ್ನು ನಿವಾರಿಸಿಕೊಳ್ಳಲು ಅನುಕೂಲ. ಶುಭಸಂಖ್ಯೆ: 5

ಧನಸ್ಸು: ಬೆಟ್ಟಿಂಗ್, ರೇಸ್ ಥರದ ಅಭ್ಯಾಸಗಳ ಹಿಂದೆ ಹೋಗಬೇಡಿ. ಗ್ರಹಚಾರದ ಏರುಪೇರುಗಳಿಂದ ನಷ್ಟ ನಿಶ್ಚಿತ. ಶುಭಸಂಖ್ಯೆ: 2

ಮಕರ: ಸರ್ಕಾರಿ ಕೆಲಸಕಾರ್ಯಗಳಲ್ಲಿ ಶುಭಕರ ಪರಿಣಾಮ ಸಿಗಲಿದೆ. ಭಕ್ತಿಯಿಂದ ಕುಲದೇವತಾ ಸ್ಮರಣೆ ಮಾಡಿ. ಶುಭಸಂಖ್ಯೆ: 7

ಕುಂಭ: ಕೆಲವು ಆಂತರಿಕ ಸಮಸ್ಯೆಗಳಿಂದ ಶೀಘ್ರ ಹೊರಬರಲು ಗುರು ದತ್ತಾತ್ರೇಯನ ಆರಾಧನೆಯಿಂದ ಸಾಧ್ಯವಿದೆ. ಶುಭಸಂಖ್ಯೆ: 4

ಮೀನ: ಕಾರ್ಯಸಿದ್ಧಿ, ಧನಲಾಭ, ಬಂಧುಮಿತ್ರರ ಜತೆಗೆ ನೆಮ್ಮದಿಯ ಮಾತುಕತೆಗಳಿಗೆ ಇಂದು ಅವಕಾಶ ದೊರೆಯಲಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net