

ಮೇಷ: ಮಹಾಲಕ್ಷ್ಮಿದೇವಿಯ ಕೃಪಾಕಟಾಕ್ಷವು ನಿಮ್ಮ
ಮೇಲಿದೆ. ಕಿರು ಬಂಡವಾಳದ ವ್ಯವಹಾರವನ್ನು
ಸದ್ಯ ಪ್ರಾರಂಭ ಮಾಡಬಹುದು. ಶುಭಸಂಖ್ಯೆ: 4
ವೃಷಭ: ಎಲ್ಲ ಸಾಲಗಳಿಂದಲೂ ಹೊರಬರುವಂತಹ
ಸುವರ್ಣಾವಕಾಶವಿದೆ. ಮತ್ತೆ ಹೊಸ ಸಾಲಗಳಿಗೆ
ಕೈಹಾಕಲು ಹೋಗದಿದ್ದರೆ ಕ್ಷೇಮ. ಶುಭಸಂಖ್ಯೆ: 9
ಮಿಥುನ: ಎಷ್ಟೇ ಸವಾಲುಗಳು ಎದುರಾಗಿ ಬಂದರೂ
ನಿಮ್ಮತನವನ್ನು ಕಾಪಾಡಿಕೊಳ್ಳುವಿರಿ. ಸಹನೆಯ
ಬಾಳಿನಿಂದ ಸಿದ್ಧಿ ಪಡೆಯುವಿರಿ. ಶುಭಸಂಖ್ಯೆ: 7
ಕಟಕ: ಷೋಡಶೋಪಚಾರಗಳಿಂದ ಕುಲದೇವರನ್ನು
ಪೂಜಿಸಿ. ಹೊಸ ಯೋಜನೆಗಳಿಗೆ ಬೇಕಾದಂತಹ
ನಿಗೂಢ ಪಥವೊಂದು ಸಿಗುತ್ತದೆ. ಶುಭಸಂಖ್ಯೆ: 8
ಸಿಂಹ: ಯಾರನ್ನೂ ನಂಬಲೇಬಾರದು ಎಂದೇನಿಲ್ಲ.
ಆದರೂ ಗೋಮುಖ ವ್ಯಾಘ್ರಗಳಂಥ ಜನರ
ಬಗ್ಗೆ ಗಮನ ಇರಿಸಿದರೆ ಉತ್ತಮ. ಶುಭಸಂಖ್ಯೆ: 6
ಕನ್ಯಾ: ನಿಮ್ಮ ಹೊಣೆಗಾರಿಕೆಯ ನಿಭಾಯಿಸುವಿಕೆಗೆ
ಪ್ರಶಂಸೆ ದೊರಕಿ ಅವಧಿ ವಿಸ್ತರಿಸುವ ಸಾಧ್ಯತೆ
ಇದೆ. ನೀವೂ ಒಪ್ಪಿದರೆ ಉತ್ತಮ. ಶುಭಸಂಖ್ಯೆ: 1
ತುಲಾ: ನಿಮ್ಮ ಶಕ್ತಿ, ದೌರ್ಬಲ್ಯ ಎರಡೂ ಮಾತುಗಳೇ
ಆಗಿವೆ. ಹೀಗಾಗಿ ಮೌನದಿಂದ ಇದ್ದರಷ್ಟೇ
ಪ್ರಾಮುಖ್ಯತೆ ಪಡೆಯುವಿರಿ. ಶುಭಸಂಖ್ಯೆ: 3
ವೃಶ್ಚಿಕ: ಅಪರೂಪಕ್ಕೆ ಸಿಕ್ಕಿದ ಲಾಭವನ್ನೇ ನಂಬಿಕೊಂಡು
ದೊಡ್ಡ ಮಟ್ಟದ ಬಂಡವಾಳವನ್ನು ಹೂಡಬೇಡಿ.
ನಷ್ಟವೇ ಆದೀತು. ಎಚ್ಚರವಿರಲಿ. ಶುಭಸಂಖ್ಯೆ: 5
ಧನುಸ್ಸು: ಆಧ್ಯಾತ್ಮಿಕ ಆಲೋಚನೆಗಳಿಂದ ಮಾನಸಿಕ
ದೃಢತೆಯನ್ನು ಪಡೆಯುವಿರಿ. ಮನದ ತುಮುಲ,
ಗೊಂದಲಗಳೆಲ್ಲವೂ ನೀಗಲಿವೆ. ಶುಭಸಂಖ್ಯೆ: 2
ಮಕರ: ಪಿತ್ರಾರ್ಜಿತ ಆಸ್ತಿಯ ವಿವಾದವು ತಲೆನೋವನ್ನು
ತಂದೊಡ್ಡಬಹುದು. ಹೀಗಾಗಿ ಶಾಂತಚಿತ್ತರಾಗಿ
ವ್ಯವಹರಿಸುವುದು ಈಗ ಯುಕ್ತ. ಶುಭಸಂಖ್ಯೆ: 4
ಕುಂಭ: ನಿಮ್ಮ ಅರ್ಹತೆಗೆ ತಕ್ಕಂತಹ ಮನ್ನಣೆ ಸಿಗಲಿದೆ.
ಸಹಜವಾಗಿಯೇ ಸಂತಸ ಹೊಂದಲಿದ್ದೀರಿ.
ವಿಷ್ಣು ಸಹಸ್ರನಾಮವನ್ನು ಪಠಿಸಿ. ಶುಭಸಂಖ್ಯೆ: 9
ಮೀನ: ಮನೆಯಲ್ಲಿ ಭಿನ್ನಭಿಪ್ರಾಯಗಳು ಬರುವುದು
ಸಹಜ. ಅದನ್ನೇ ಇನ್ನೂ ಹಿಗ್ಗಿಸದಿರಿ. ಸ್ವಯಂವರ
ಪಾರ್ವತಿಯ ಸ್ಮರಣೆ ಮಾಡಿ. ಶುಭಸಂಖ್ಯೆ: 7