

ಮೇಷ: ಶ್ರೀ ಭೂವರಾಹಸ್ವಾಮಿಯ ಆರಾಧನೆಯನ್ನು
ಮಾಡಿ. ಆಸ್ತಿಯ ವಿಚಾರದಲ್ಲಿ ನಿರಾಳತೆ
ಉಂಟಾಗಿ ಒಳಿತಾಗಲಿದೆ. ಶುಭಸಂಖ್ಯೆ: 9
ವೃಷಭ: ಬಹಳ ಮಹತ್ವದ ವ್ಯಕ್ತಿಯೊಬ್ಬರನ್ನು ಭೇಟಿ
ಮಾಡಲಿದ್ದೀರಿ. ಇದರಿಂದ ವಿವಾಹಾಪೇಕ್ಷಿಗಳಿಗೆ
ನೆಮ್ಮದಿಯ ಸಿಗಲಿದೆ. ಶುಭಸಂಖ್ಯೆ: 3
ಮಿಥುನ: ದೇಹಾಲಸ್ಯ ಉಂಟಾಗಬಹುದು.
ಆರೋಗ್ಯ ಸಂಬಂಧಿ ಅಡೆತಡೆಗಳ ನಡುವೆಯೂ
ಭೂವ್ಯವಹಾರದಲ್ಲಿ ಜಯ. ಶುಭಸಂಖ್ಯೆ: 6
ಕಟಕ: ವೈಯಕ್ತಿಕ ವಿಷಯದಲ್ಲಿ ತಲೆ ಹಾಕುವವರು
ಎದುರಾಗಬಹುದು. ಅವರನ್ನು ಚಾಣಾಕ್ಷತೆಯಿಂದಲೇ
ನಿಯಂತ್ರಿಸಿ. ಶುಭಸಂಖ್ಯೆ: 8
ಸಿಂಹ: ನಷ್ಟ ಮಾಡುವ ಉದ್ಯಮದಿಂದ ವಿಮುಕ್ತಿಯನ್ನು
ಪಡೆಯುವಿರಿ. ಲಕ್ಷ್ಮೀನರಸಿಂಹನನ್ನು
ಭಕ್ತಿಯಿಂದ ಪ್ರಾರ್ಥಿಸಿ. ಶುಭಸಂಖ್ಯೆ: 4
ಕನ್ಯಾ: ಕೈಗೊಂಡ ಅನೇಕ ಕಾರ್ಯಗಳಲ್ಲಿ
ಗೆಲುವಿನ ಸಾಧ್ಯತೆಗಳೇ ಹೆಚ್ಚಾಗಿವೆ.
ಪಂಚಮುಖಿ ಆಂಜನೆಯನ ಸ್ಮರಣೆ ಮಾಡಿ. ಶುಭಸಂಖ್ಯೆ: 2
ತುಲಾ: ಧನಲಾಭಕ್ಕೆ ಅವಕಾಶಗಳಿದ್ದರೂ
ಸುಲಭವಾಗಿ ಸಿಗಲಾರದು. ಬೌದ್ಧಿ ಬಲ
ಪ್ರದರ್ಶನದಿಂದ ಜಯ ಸಾಧಿಸುವಿರಿ. ಶುಭಸಂಖ್ಯೆ: 5
ವೃಶ್ಚಿಕ: ಕೋಪವನ್ನು ಉಂಟುಮಾಡುವ ಕುಹಕಿಗಳೇ
ಎದುರಾಗಬಹುದು. ಹಣಕಾಸಿನ
ವಿಚಾರದಲ್ಲಿ ಎಚ್ಚರ ಇದ್ದಿರಲಿ. ಶುಭಸಂಖ್ಯೆ: 1
ಧನುಸ್ಸು: ಕಷ್ಟಕರ ಕೆಲಸಗಳಲ್ಲಿ ಮುಳುಗಿದರೆ
ಸಮಯ ವ್ಯರ್ಥವಾದೀತು. ಸರಳ ಕಾರ್ಯಗಳಿಂದ
ಜನಪ್ರೀತಿ ಪಡೆಯುವಿರಿ. ಶುಭಸಂಖ್ಯೆ: 7
ಮಕರ: ಹಳೆಯ ವಸ್ತುಗಳ ವಿಲೇವಾರಿ ಮಾಡುವವರಿಗೆ
ಲಾಭವಾಗಲಿದೆ. ಕಾರ್ಯಸಿದ್ಧಿಗಾಗಿ
ಕುಲದೇವರ ದರ್ಶನ ಮಾಡಿ. ಶುಭಸಂಖ್ಯೆ: 3
ಕುಂಭ: ಮನೆಯವರ ಜತೆ ಸೇರಿ ಶುಭಕಾರ್ಯದ
ವಿಚಾರವನ್ನು ನಿರ್ಧರಿಸುವಿರಿ. ಕುಟುಂಬದ
ಪರಂಪರೆಗೂ ಮನ್ನಣೆ ಲಭ್ಯ. ಶುಭಸಂಖ್ಯೆ: 9
ಮೀನ: ರಾಜಕಾರಣಿಗಳಿಗೆ ಅನಿರೀಕ್ಷಿತ ಯಶಸ್ಸು
ಪಡೆಯುವ ಯೋಗವಿದೆ. ಶ್ರಮಿಕರಿಗೆ
ಧನಲಾಭದಿಂದ ನೆಮ್ಮದಿಯಿದೆ. ಶುಭಸಂಖ್ಯೆ: 6