

ಮೇಷ: ಅವಸರದಲ್ಲಿ ನಿರ್ಧಾರ ಕೈಗೊಳ್ಳಬೇಡಿ. ಎಲ್ಲದಕ್ಕೂ ರ್ಚಚಿಸಲು ಹೋಗಬೇಡಿ. ಕುಟುಂಬದ ಸಲಹೆಯನ್ನು ಪಡೆದುಕೊಳ್ಳಿ. ಶುಭಸಂಖ್ಯೆ: 2
ವೃಷಭ: ಹಿಂದಿನ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸಿ. ವಹಿವಾಟು ಪ್ರಾರಂಭ. ದಿನಾಂತ್ಯದಲ್ಲಿ ಆತ್ಮೀಯರ ಆಗಮನ. ಶುಭಸಂಖ್ಯೆ: 8
ಮಿಥುನ: ಬಾಳಸಂಗಾತಿಯೊಂದಿಗೆ ತಾಳ್ಮೆಯಿರಲಿ. ಮಾನಸಿಕ ಒತ್ತಡ. ಕಚೇರಿಯಲ್ಲಿ ಹಿರಿಯರಿಂದ ಸಲಹೆ. ಗಣೇಶನನ್ನು ಪೂಜಿಸಿ. ಶುಭಸಂಖ್ಯೆ: 9
ಕಟಕ: ನೆರೆಯವರೊಂದಿಗೆ ಆತ್ಮೀಯತೆಯಿಂದ ವರ್ತಿಸಿ. ಶುಭ ಕೆಲಸಕ್ಕೆ ಚಾಲನೆ. ಬಾಳ ಸಂಗಾತಿಯೊಂದಿಗೆ ವಿಹಾರ. ಶುಭಸಂಖ್ಯೆ: 6
ಸಿಂಹ: ಕೋಪವನ್ನು ನಿಗ್ರಹಿಸಿಕೊಳ್ಳಿ. ಹಿತಶತ್ರುಗಳ ಬಗ್ಗೆ ಅನುಕಂಪದ ಭಾವನೆ ಬೇಡ. ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 1
ಕನ್ಯಾ: ವಾಹನ ಚಾಲನೆಯಲ್ಲಿ ಹುಷಾರು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಅನಿರೀಕ್ಷಿತ ಅವಕಾಶ. ಗಾಯಕರಿಗೆ ವಿಶೇಷ ದಿನ. ಶುಭಸಂಖ್ಯೆ: 9
ತುಲಾ: ಬಂಧುಗಳಿಗೆ ಮಾರ್ಗದರ್ಶನ. ಪತ್ನಿಯೊಂದಿಗೆ ವಿರಸ. ವಿದ್ಯಾರ್ಥಿಗಳಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಶುಭವಾರ್ತೆ ಶುಭಸಂಖ್ಯೆ: 3
ವೃಶ್ಚಿಕ: ರಾಜಕಾರಣಿಗಳಿಗೆ ಮಹತ್ವದ ಜವಾಬ್ದಾರಿ. ನಟರಿಗೆ ಅವಕಾಶ. ವೈದ್ಯರ ಸಲಹೆ ಶ್ರದ್ಧೆಯಿಂದ ಪಾಲಿಸಿ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 5
ಧನಸ್ಸು: ಮಕ್ಕಳ ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ತಿರುವು. ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಕಾರ್ಯಸಿದ್ದಿ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 6
ಮಕರ: ಸಮಸ್ಯೆಯನ್ನು ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಕಚೇರಿಯಲ್ಲಿ ತಾಳ್ಮೆ ಅಗತ್ಯ. ಶುಭಸಂಖ್ಯೆ: 2
ಕುಂಭ: ಅಪರೂಪದ ವ್ಯಕ್ತಿಯ ಭೇಟಿ. ವೃಥಾ ಖರ್ಚು. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ದಿನಾಂತ್ಯದಲ್ಲಿ ಸುಖ ಭೋಜನ. ಶುಭಸಂಖ್ಯೆ: 6
ಮೀನ : ಅವಕಾಶವನ್ನು ಬಳಸಿಕೊಳ್ಳಿ. ಬಂಧುಗಳ ಆಗಮನ. ಉದ್ಯೋಗದಲ್ಲಿ ಸ್ಪರ್ಧೆ. ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರ. ಶುಭಸಂಖ್ಯೆ: 7