ಈ ರಾಶಿಯ ಸ್ತ್ರೀಯರಿಗೆ ಇಂದು ಶುಭದಾಯಕ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದೃಷ್ಟಿ ದೋಷದಿಂದ ಸಮಸ್ಯೆಯಾಗುವ ಸಾಧ್ಯತೆ. ಇಷ್ಟ ವಸ್ತುಗಳ ಖರೀದಿ. ಮನಕ್ಲೇಷ. ಆರ್ಥಿಕ ಸಂಕಷ್ಟ. ರೋಗಬಾಧೆ. ಶುಭಸಂಖ್ಯೆ: 3

ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ಕೆಲಸ ಕಾರ್ಯಗಳಲ್ಲಿ ತೊಂದರೆಯಾಗುವುದು. ಆರೋಗ್ಯ ಸಮಸ್ಯೆ. ಮಿತ್ರ ದ್ರೋಹ ವಂಚನೆ. ಶುಭಸಂಖ್ಯೆ:6

ಮಿಥುನ: ಚೋರ ಭಯವಿದೆ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶತ್ರು ಬಾಧೆ. ಅನಗತ್ಯ ಖರ್ಚು. ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 7

ಕಟಕ: ಹಣಕಾಸಿನ ವಿಷಯದಲ್ಲಿ ಕಲಹವಾಗುವ ಸಾಧ್ಯತೆ ಇದೆ ಎಚ್ಚರ. ಪತಿ ಪತ್ನಿಯರಲ್ಲಿ ಕಲಹ. ಋಣ ಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 5

ಸಿಂಹ: ಅತಿಯಾದ ನೋವು. ಎಲ್ಲಿ ಹೋದರೂ ಅಶಾಂತಿ. ಕೆಲಸದಲ್ಲಿ ಜವಾಬ್ದಾರಿ ನಿಭಾಯಿಸುವಿರಿ. ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ. ಶುಭಸಂಖ್ಯೆ: 9

ಕನ್ಯಾ: ಮಾತೃವಿನಿಂದ ಶುಭ ಹಾರೈಕೆ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಸಕಾಲಕ್ಕೆ ಭೋಜನ ಇಲ್ಲದಿರುವಿಕೆ. ಇಷ್ಟಾರ್ಥಸಿದ್ಧಿ. ಶುಭಸಂಖ್ಯೆ: 8

ತುಲಾ: ವಾಣಿಜ್ಯ ರಂಗದವರಿಗೆ ಲಾಭದಾಯಕ ದಿನ. ಕುಟುಂಬ ಸೌಖ್ಯವಿದೆ. ಉತ್ತಮ ಪ್ರಗತಿ. ವಿಪರೀತ ಖರ್ಚು ವೆಚ್ಚಗಳು ಆಗಬಹುದು. ಶುಭಸಂಖ್ಯೆ: 7

ವೃಶ್ಚಿಕ: ಆಲಸ್ಯ ಮನೋಭಾವ ಬಿಡಿ. ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ. ಸ್ತ್ರೀಯರಿಗೆ ಶುಭದಾಯಕವಾದ ದಿನ. ಶುಭಸಂಖ್ಯೆ: 6

ಧನುಸ್ಸು: ಯತ್ನ ಕಾರ್ಯಾನುಕೂಲ. ಮಿತ್ರರೊಡನೆ ಕಲಹವಾದೀತು. ಅಧಿಕ ತಿರುಗಾಟ. ಷೇರು ವ್ಯವಹಾರಗಳಲ್ಲಿ ನಷ್ಟವಾಗುವ ಸಂಭವ. ಶುಭಸಂಖ್ಯೆ:5

ಮಕರ: ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುವುದು ನಿಶ್ಚಿತ. ವಕೀಲರಿಗೆ ಕಾರ್ಯಸಿದ್ಧಿ. ಆರೋಗ್ಯ ವೃದ್ಧಿ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 3

ಕುಂಭ: ಹಣಕಾಸಿನ ವಿಷಯದಲ್ಲಿ ಕಲಹವಾಗಬಹುದು. ಮಾತಾಪಿತರಲ್ಲಿ ವಾತ್ಸಲ್ಯ. ಸಲ್ಲದ ಅಪವಾದ ಬಂದೀತು. ಹಿರಿಯರ ಸಲಹೆ. ಶುಭಸಂಖ್ಯೆ: 3

ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ತಾಳ್ಮೆ ಅಗತ್ಯ. ಕೆಲಸ ಕಾರ್ಯಗಳಲ್ಲಿ ಜಯವಿದೆ. ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net