ಈ ರಾಶಿಯವರಿಗೆ ಇಂದು ಸಾಂಸಾರಿಕ ಸಂತೋಷ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಇಂದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಪ್ರಯಾಣಕ್ಕೆ ಒಳ್ಳೆಯ ದಿನ ಅಲ್ಲ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ: 9

ವೃಷಭ: ಸಹೋದ್ಯೋಗಿಗಳಿಂದ ನಿಮ್ಮ ಕೆಲಸದ ಪ್ರಶಂಸೆ. ಉದ್ಯಮಿಗಳಿಗೆ ವ್ಯಾಪಾರದಲ್ಲಿ ವಿಶೇಷ ಲಾಭ. ಭೂಮಿಯಿಂದ ಅಧಿಕ ಲಾಭ. ಶುಭಸಂಖ್ಯೆ: 1

ಮಿಥುನ: ರಾಜಕೀಯ ವಿಷಯಗಳಲ್ಲಿ ಆಸಕ್ತಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಕಚೇರಿಯಲ್ಲಿ ಅನುಕೂಲಕರ ವಾತಾವರಣ. ಶುಭಸಂಖ್ಯೆ:3

ಕಟಕ: ಕೆಲಸದಲ್ಲಿ ಒತ್ತಡ. ಆರ್ಥಿಕ ಮಿತವ್ಯಯವನ್ನು ಪಾಲಿಸಿ. ಆರೋಗ್ಯದಲ್ಲಿ ವ್ಯತ್ಯಯ ಆದೀತು, ವೈದ್ಯರ ಸಲಹೆ ತಪ್ಪದೆ ಪಾಲಿಸಿ. ಶುಭಸಂಖ್ಯೆ: 2

ಸಿಂಹ: ಸರ್ಕಾರಿ ಕಚೇರಿಗಳಲ್ಲಿ ಕಾರ್ಯಸಿದ್ಧಿ. ಉನ್ನತ ಸ್ಥಾನವನ್ನು ಹೊಂದುವ ಸಾಧ್ಯತೆ. ಮನೆಯಲ್ಲಿ ಶುಭ ಸಮಾರಂಭದ ಸಡಗರ. ಶುಭಸಂಖ್ಯೆ: 8

ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ಫಲಪ್ರಾಪ್ತಿ. ಆಲಸ್ಯದಿಂದ ದೂರವಿರುವುದು ಉತ್ತಮ. ಹಿರಿಯರ ಮಾರ್ಗದರ್ಶನದಿಂದ ಪ್ರಗತಿ. ಶುಭಸಂಖ್ಯೆ: 7

ತುಲಾ: ತಂದೆ-ತಾಯಿ, ಸಹೋದರಿಯರಿಂದ ಸಂತೋಷ. ಕೌಟುಂಬಿಕವಾಗಿ ಎಲ್ಲಾ ವಿಧದಲ್ಲಿ ನೆಮ್ಮದಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ಸಹೋದ್ಯೋಗಿಗಳಿಂದ, ಆತ್ಮೀಯರಿಂದ ಸೂಕ್ತ ಸಲಹೆ. ಆರೋಗ್ಯ ಸ್ಥಿತಿ ಉತ್ತಮ. ಗೃಹೋಪಯೋಗಿ ಸಾಮಗ್ರಿ ಖರೀದಿ. ಶುಭಸಂಖ್ಯೆ:5

ಧನುಸ್ಸು: ಕೋರ್ಟು-ಕಚೇರಿ ಕಲಹಗಳಲ್ಲಿ ಜಯ. ಕೃಷಿರಂಗದಲ್ಲಿ ಇರುವವರಿಗೆ ಉತ್ತಮ ಲಾಭ. ಆರ್ಥಿಕ ಉನ್ನತಿ ಕಾಣುವಿರಿ. ನೆಮ್ಮದಿ. ಶುಭಸಂಖ್ಯೆ: 3

ಮಕರ: ವಾಹನ ಮಾರಾಟಗಾರರಿಗೆ ಅಧಿಕ ಲಾಭ. ಷೇರು ವ್ಯವಹಾರದಲ್ಲಿ ಉತ್ತಮ ಅನುಭವ ಪಡೆಯುವಿರಿ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 4

ಕುಂಭ: ಕಲಾವಿದರಿಗೆ ಪುರಸ್ಕಾರ. ಆರ್ಥಿಕವಾಗಿ ಬಲಗೊಳ್ಳುವಿರಿ. ಸಾಂಸಾರಿಕ ಸಂತೋಷ. ನಿಮ್ಮ ಕೆಲಸಗಳಿಗೆ ಹಿರಿಯರ ಪ್ರಸಂಸೆ. ಶುಭಸಂಖ್ಯೆ: 7

ಮೀನ: ಮಧ್ಯವರ್ತಿಗಳಿಗೆ ಅಧಿಕ ಲಾಭ. ಆಸ್ತಿ ವಿಭಾಗದಲ್ಲಿ ಮನಸ್ತಾಪ. ತಾಳ್ಮೆ ಇರಲಿ. ಮನೆಯಲ್ಲಿ ಮದುವೆ ನಿಶ್ಚಯ ಸಾಧ್ಯತೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net