ನಿತ್ಯಭವಿಷ್ಯ | ಆಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ- ಈ ರಾಶಿಯವರೊಮ್ಮೆ ಆಲೋಚಿಸುವುದು ಒಳಿತು!

Nithya Bhavishya vvani
Published on

ಮೇಷ - ಎದುರಾದವರೆಲ್ಲ ದೊಡ್ಡ ಜನ ಎಂದು
ಭಾವಿಸಿ ಮರುಳಾಗದಿರಿ. ಮೋಸದ ಬಲೆಯಲ್ಲಿ
ಸಿಲುಕಬೇಕಾದೀತು. ಶುಭಸಂಖ್ಯೆ: 9

ವೃಷಭ- ಮನ ಬಂದಂತೆ ಖರ್ಚು ಮಾಡಲು
ಹೋಗದಿರಿ. ಸಣ್ಣ ಮಟ್ಟದ ಉಳಿತಾಯದ
ಪ್ರಯತ್ನದಿಂದ ಒಳಿತಾಗಲಿದೆ. ಶುಭಸಂಖ್ಯೆ: 5

ಮಿಥುನ- ಎಲ್ಲರನ್ನೂ ಮೆಚ್ಚಿಕೊಳ್ಳುವ ನಿಮ್ಮ ಗುಣ
ಅಪರೂಪವಾದದ್ದು. ಆದರೆ ಸದ್ಯದ ವೇಳೆ
ಬಿಗುವಾಗಿದ್ದರೆ ಉತ್ತಮ. ಶುಭಸಂಖ್ಯೆ: 1

ಕಟಕ- ಬೆಳ್ಳಗಿರುವುದೆಲ್ಲ ಹಾಲು ಎಂಬ ತಪ್ಪು
ಕಲ್ಪನೆಗಳು ತೊಂದರೆಯಾಗಲಿದೆ. ಈ ಬಗ್ಗೆ
ಜಾಗ್ರತೆಯಿಂದಿದ್ದರೆ ಉತ್ತಮ. ಶುಭಸಂಖ್ಯೆ: 3

ಸಿಂಹ - ಕೈಗೊಂಡ ಕಾರ್ಯವನ್ನು ಮಧ್ಯದಲ್ಲಿ
ಬಿಟ್ಟುಬಿಡಬೇಡಿ. ನೀವು ನಂಬಿದ ದೇವರ
ಅನುಗ್ರಹದಿಂದ ಕಾರ್ಯಸಿದ್ಧಿ. ಶುಭಸಂಖ್ಯೆ: 8

ಕನ್ಯಾ - ಆಭರಣಗಳನ್ನು ಖರೀದಿಸುವ ನಿಟ್ಟಿನಲ್ಲಿ
ಯೋಚನೆಯನ್ನೂ ಮಾಡದಿರಿ. ಇದು ದೊಡ್ಡ
ಖರ್ಚಿನ ಪಟ್ಟಿ ಸಿದ್ಧವಾದೀತು. ಶುಭಸಂಖ್ಯೆ: 6

ತುಲಾ- ಶುಕ್ರನ ಕೃಪೆಯಿಂದ ಭೂಮಿಗೆ ಸಂಬಂಧಿಸಿದ
ವ್ಯಾಜ್ಯವೊಂದು ಪರಿಹಾರವನ್ನು ಕಾಣಲಿದೆ.
ಚಿಂತಿಸದೆ ನಿರಾಳವಾಗಿರಿ. ಶುಭಸಂಖ್ಯೆ: 2

ವೃಶ್ಚಿಕ - ಧೈರ್ಯವೇ ಎಲ್ಲಕ್ಕೂ ಮೂಲ ಸಾಧನ
ಎಂದು ಅರಿತುಕೊಂಡು ಮನದಲ್ಲಿರುವ
ಭಯವನ್ನು ಹೊರಗೋಡಿಸಿ. ಶುಭಸಂಖ್ಯೆ: 4

ಧನುಸ್ಸು- ಕೆಲವರಿಗೆ ನಿಮ್ಮೊಡನೆ ಜಗಳವಾಡುವ
ಭಾವನೆ ಬರಬಹುದು. ನೀವು ಪ್ರತಿಕ್ರಿಯೆ
ನೀಡದಿರುವುದೇ ಉತ್ತಮ. ಶುಭಸಂಖ್ಯೆ: 7

ಮಕರ - ರಫ್ತು ವ್ಯವಹಾರದ ಬಗ್ಗೆ ಯೋಚಿಸುತ್ತಿದ್ದೀರಿ.
ಅದರಲ್ಲಿ ತಿಳಿವಳಿಕೆ ಇರುವವರನ್ನು
ಸಂರ್ಪಸಿದರೆ ಯುಕ್ತ. ಶುಭಸಂಖ್ಯೆ: 9

ಕುಂಭ - ದುರ್ಗಾದೇವಿಯ ಕೃಪೆಯಿಂದ ಶುಭ
ಸಮಾಚಾರ ಕೇಳಲಿದ್ದೀರಿ. ಆದರೆ ಯಾವ
ಕಾರಣಕ್ಕೂ ಉಬ್ಬಿಹೋಗದಿರಿ. ಶುಭಸಂಖ್ಯೆ: 5

ಮೀನ- ನಿಮ್ಮದೇ ಆದ ವಹಿವಾಟುಗಳ ಕುರಿತ
ಯೋಜನೆ ಮೇಲಿನ ಹಂತಕ್ಕೆ ಏರಲಿದೆ.
ಭಕ್ತಿಯಿಂದ ಶಿವಸ್ತುತಿ ಮಾಡಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net