ಈ ರಾಶಿಯವರಿಗೆ ಇಂದು ಪ್ರಭಾವಿ ವ್ಯಕ್ತಿಯೊಂದಿಗೆ ಸಂಪರ್ಕ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸದ ನಿಮಿತ್ತ ಪ್ರವಾಸ. ಆತ್ಮೀಯರ ವಿಯೋಗ ಕಾಡಲಿದೆ. ಕುಟಿಲತನದಿಂದ ಸಮಸ್ಯೆ. ಆರ್ಥಿಕ ಪ್ರಗತಿ ಉತ್ತಮ. ಶುಭಸಂಖ್ಯೆ:9

ವೃಷಭ: ಕೆಲಸಗಳಲ್ಲಿ ಯಶಸ್ವಿ. ಅದೃಷ್ಟದ ಅನುಭವ ನಿಮಗಾಗುತ್ತದೆ. ಆರ್ಥಿಕ ಸಮಸ್ಯೆ ಕಾಡಬಹುದು. ದಿನಾಂತ್ಯದಲ್ಲಿ ಧನಲಾಭ. ಶುಭಸಂಖ್ಯೆ:1

ಮಿಥುನ: ಧಾರ್ವಿುಕ ಕಾರ್ಯಗಳು ನಡೆಯಲಿವೆ. ಆತ್ಮವಿಶ್ವಾಸ ಜಾಸ್ತಿ. ವಿವಾಹ ನಿಶ್ಚಯ. ಪ್ರಗತಿಯ ಇನ್ನೊಂದು ಹಂತ ತಲುಪಲಿದೆ. ಶುಭಸಂಖ್ಯೆ: 6

ಕಟಕ: ತಂದೆ ತಾಯಿಯ ಆರೋಗ್ಯ ನೋಡಿಕೊಳ್ಳಿ. ಮಕ್ಕಳ ಬಗ್ಗೆ ಕಾಳಜಿ ಇರಲಿ. ಶಿಕ್ಷಕರಿಗೆ ತೊಂದರೆ. ಹಳೆಯ ನೆನಪುಗಳು ಕಾಡಲಿವೆ. ಶುಭಸಂಖ್ಯೆ: 5

ಸಿಂಹ: ಕಚೇರಿಯಲ್ಲಿ ಹೊಸ ಯೋಜನೆ ರೂಪಿಸುವಿರಿ. ಯಶಸ್ಸು ಲಭಿಸುತ್ತದೆ. ಸ್ನೇಹಿತರಿಂದ ಸಮಸ್ಯೆ. ಶತ್ರುಗಳ ವಿರುದ್ಧ ಜಯ. ಶುಭಸಂಖ್ಯೆ: 8

ಕನ್ಯಾ: ಆರ್ಥಿಕ ಪ್ರಗತಿ ಅಷ್ಟಕಷ್ಟೇ. ಕೆಲಸದಲ್ಲಿ ಯಶ. ಹೃದಯದ ನೋವು ಕಾಡಬಹುದು. ಮಾತುಕತೆಯಲ್ಲಿ ವಿವಾದ ಬೇಡ. ಶುಭಸಂಖ್ಯೆ: 2

ತುಲಾ: ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಮಿತ್ರರಿಂದಾಗಿ ಸಹಕಾರ ಕ್ಷೇತ್ರದಲ್ಲಿ ಮುನ್ನಡೆ. ಅವಿವಾಹಿತರಿಗೆ ಕಾರ್ಯಸಿದ್ದಿ. ಶುಭಸಂಖ್ಯೆ: 3

ವೃಶ್ಚಿಕ: ಅಧಿಕ ಖರ್ಚು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ನಿರ್ಣಾಯಕ ಕೆಲಸಗಳಲ್ಲಿ ಯಶ. ಶುಭಸಂಖ್ಯೆ: 4

ಧನುಸ್ಸು: ಅಪಾರ ಪ್ರಮಾಣದ ಆರ್ಥಿಕ ಲಾಭ. ಮಿತ್ರರಿಂದ ತೊಂದರೆ. ವಿವಾಹ ಭಾಗ್ಯ. ಪ್ರಭಾವಿ ವ್ಯಕ್ತಿಯೊಂದಿಗೆ ಸಂಪರ್ಕ. ಶುಭಸಂಖ್ಯೆ:6

ಮಕರ: ಖರೀದಿಯಲ್ಲಿ ಮೋಸ ಹಿರಿಯ ವ್ಯಕ್ತಿಗಳ ಮಾರ್ಗದರ್ಶನ. ಉದ್ಯೋಗದಲ್ಲಿ ಅಸ್ಥಿರತೆ. ಬದಲಾವಣೆ. ಅನವಶ್ಯಕ ಖರ್ಚು. ಶುಭಸಂಖ್ಯೆ: 8

ಕುಂಭ: ಕಾರ್ಯನಿಮಿತ್ತ ಪ್ರವಾಸ. ವಿದೇಶ ಪ್ರವಾಸ ಸಾಧ್ಯತೆ. ಜನಪ್ರಿಯತೆ ಗಳಿಸುವಿರಿ. ತರಬೇತಿಗೆ ಆಯ್ಕೆಯಾಗುವ ಸಾಧ್ಯತೆ. ಶುಭಸಂಖ್ಯೆ: 9

ಮೀನ: ಆರ್ಥಿಕ ಮುಗ್ಗಟ್ಟಿಗೆ ಪರಿಹಾರ. ನಿರ್ಲಕ್ಷ್ಯ ವಹಿಸಿದರೆ ಕೆಲಸದಲ್ಲಿ ತೊಂದರೆ. ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಗುವಿರಿ. ಧನಲಾಭ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net