

ಮೇಷ: ಆರೋಗ್ಯದಲ್ಲಿ ವ್ಯತ್ಯಾಸ. ಅಪನಿಂದನೆ ಎದುರಾದೀತು, ಮೋಸ ಹೋಗುವಿಕೆ. ವ್ಯಾಪಾರದಲ್ಲಿ ನಷ್ಟ. ಯಾರನ್ನೂ ನಂಬಬೇಡಿ. ಶುಭಸಂಖ್ಯೆ: 9
ವೃಷಭ: ಧನಲಾಭ. ಐಶ್ವರ್ಯ ವೃದಿ. ಭೂಮಿ ಖರೀದಿಯ ಚಿಂತನೆ. ಶತ್ರು ಭಾದೆ ಕಾಡಬಹುದು. ಪರರಿಗೆ ಉಪಕಾರ ಮಾಡುವಿರಿ. ಶುಭಸಂಖ್ಯೆ: 1
ಮಿಥುನ: ಮರಣದ ವಾರ್ತೆ ಕೇಳಬೇಕಾದೀತು. ಸಹೋದರರ ಕಲಹ. ಸಮಾಧಾನ ಚಿತ್ತದಿಂದಿರಿ. ಅಕಾಲ ಭೋಜನ ಮಾಡಬೇಕಾದೀತು. ಶುಭಸಂಖ್ಯೆ: 7
ಕಟಕ: ದಾಂಪತ್ಯದಲ್ಲಿ ಕಲಹ. ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಆಸ್ತಿ ನಷ್ಟವಾಗಬಹುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಶುಭಸಂಖ್ಯೆ: 6
ಸಿಂಹ: ಸಾಲಬಾಧೆ. ಉದ್ಯೋಗದಲ್ಲಿ ಕಿರಿ-ಕಿರಿ ಆಗಬಹುದು. ಸ್ಥಳ ಬದಲಾವಣೆ ಮಾಡಬೇಕಾಗಬಹುದು. ವೈರತ್ವ ಹೆಚ್ಚಾಗುವ ಸಾಧ್ಯತೆ. ಶುಭಸಂಖ್ಯೆ: 2
ಕನ್ಯಾ: ಪಿತ್ರಾರ್ಜಿತ ಆಸ್ತಿಯಿಂದ ಧನಲಾಭವಿದೆ. ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಚಿನ್ನಾಭರಣ ಪ್ರಾಪ್ತಿಯಾಗಿ ಮಾನಸಿಕ ಶಾಂತಿ. ಶುಭಸಂಖ್ಯೆ: 6
ತುಲಾ: ಕೆಲ ವಿಚಾರಗಳಲ್ಲಿ ಕೆಲವರ ಜತೆ ವೈಮನಸ್ಸು ಉಂಟಾಗುವ ಸಂಭವ. ಆಹಾರದಲ್ಲಿ ವ್ಯತ್ಯಾಸವಾಗ ಲಿದೆ. ಮಾತಾ ಪಿತೃರಲ್ಲಿ ಜಗಳ. ಶುಭಸಂಖ್ಯೆ:4
ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ವಿಳಂಬವಾಗುವ ಸಂಭವ. ಶಸ್ತ್ರಚಿಕಿತ್ಸೆ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಮಕ್ಕಳಿಂದ ಸಹಾಯ. ಶುಭಸಂಖ್ಯೆ: 8
ಧನುಸ್ಸು: ಧನ ನಷ್ಟ. ಆಸ್ತಿ ಪಾಸ್ತಿ ಕಳೆದುಕೊಳ್ಳಬೇಕಾಗಬಹುದು. ಸಂಬಂಧಗಳಿಂದ ದೂರವಾಗಲು ಯತ್ನಿಸುವಿರಿ. ಸಮಸ್ಯೆ ಹೆಚ್ಚಾಗುತ್ತದೆ. ಶುಭಸಂಖ್ಯೆ: 2
ಮಕರ: ಧನಹಾನಿ ಉಂಟಾದೀತು. ಸಹೋದರರ ಜೊತೆ ಕಲಹ ವಿಪರೀತಕ್ಕೆ ಹೋಗದಿರಲಿ. ನೆಮ್ಮದಿ ಇಲ್ಲದ ಜೀವನ. ದೇವರನ್ನು ಭಜಿಸಿ. ಶುಭಸಂಖ್ಯೆ: 5
ಕುಂಭ: ವ್ಯವಹಾರಗಳಲ್ಲಿ ಧನಲಾಭ. ಆರೋಗ್ಯ ಭಾಗ್ಯ. ಶತ್ರು ನಾಶ. ಸುಖ ಭೋಜನ. ಕೆಲಸ ಕಾರ್ಯಗಳಲ್ಲಿ ಉನ್ನತ ಸ್ಥಾನ ಪ್ರಾಪ್ತಿ. ಶುಭಸಂಖ್ಯೆ: 3
ಮೀನ: ಮಾನಹಾನಿ ಆಗಬಹಹುದು. ಅನರ್ಥಗಳು ನಡೆಯುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಮೋಸ ಹೋಗುವಿರಿ, ಎಚ್ಚರ. ಶುಭಸಂಖ್ಯೆ: 9