ಈ ರಾಶಿಯವರು ಪದೋನ್ನತಿಯ ಅವಕಾಶ ಬಂದರೂ ಕೂಡಲೇ ಒಪ್ಪಿಕೊಳ್ಳದಿರುವುದು ಲೇಸು

Nithya Bhavishya vvani
Published on

ಮೇಷ: ಒಂದು ಸಾಲ ತೀರಿಸಲೆಂದು ಇನ್ನೊಂದು

ಸಾಲ ಮಾಡಲು ಹೊರಟಿದ್ದೀರಿ. ಇದನ್ನು

ನಿಯಂತ್ರಿಸಿದಲ್ಲಿ ಒಳಿತಿದೆ. ಶುಭಸಂಖ್ಯೆ: 7

ವೃಷಭ: ಕಚೇರಿಯ ನಿಮ್ಮ ಕೆಲಸದ ಬಗ್ಗೆ ಅಪಸ್ವರಗಳು

ಕೇಳಿಬರಬಹುದು. ಆದರೆ ನಿಮ್ಮನ್ನು ನೀವು

ತಿದ್ದಿಕೊಳ್ಳುವ ಅವಕಾಶವಿದು. ಶುಭಸಂಖ್ಯೆ: 8

ಮಿಥುನ: ಚಿಂತೆಯಿಂದಲೇ ಆಯಾಸಗೊಂಡಿದ್ದೀರಿ.

ನಿಮ್ಮ ಇಷ್ಟಾರ್ಥಗಳ ಸಾಕಾರಕ್ಕೆ ಕುಲದೇವರನ್ನು

ಶ್ರದ್ಧಾಭಕ್ತಿಗಳಿಂದ ಪೂಜಿಸಿ. ಶುಭಸಂಖ್ಯೆ: 9

ಕಟಕ: ಅನಂತಬ್ರಹ್ಮನ ಆರಾಧನೆಯಿಂದ ಅನೇಕ

ತೊಡಕುಗಳನ್ನು ಸುಲಭವಾಗಿ ನಿವಾರಣೆ

ಮಾಡಿಕೊಳ್ಳಲು ಸಾಧ್ಯವಿದೆ. ಶುಭಸಂಖ್ಯೆ: 4

ಸಿಂಹ: ಮಕ್ಕಳೊಡನೆ ಭಿನ್ನಾಭಿಪ್ರಾಯ ಬಂದರೂ

ನಿಮ್ಮ ಹಿರಿಯತನವನ್ನು ಮರೆಯಬೇಡಿ.

ಇದರಿಂದ ಕೆಲಸ ಕೆಡದು. ಶುಭಸಂಖ್ಯೆ: 5

ಕನ್ಯಾ: ಸಿನಿಮಾ ಸಂಬಂಧಿತ ಯೋಜನೆಗಳನ್ನು

ಹಾಕಿಕೊಂಡವರು ಮುನ್ನೆಚ್ಚರಿಕೆಯಿಂದ

ಮುಂದುವರಿದರೆ ಉತ್ತಮ. ಶುಭಸಂಖ್ಯೆ: 6

ತುಲಾ: ಯಾರದೋ ಸಮಾಧಾನಕ್ಕೆ ನಿಮ್ಮ ಅಮೂಲ್ಯ

ಸಮಯವನ್ನು ವ್ಯಯಿಸದಿರಿ. ಕೈಗೊಂಡ

ಕಾರ್ಯ ನಿಧಾನವಾದೀತು. ಶುಭಸಂಖ್ಯೆ: 3

ವೃಶ್ಚಿಕ: ಸಂಘಟನಾ ಕಾರ್ಯದಲ್ಲಿ ವಿಶೇಷ ಯಶಸ್ಸು

ಪಡೆದ ನೀವು ಅದರಿಂದ ಕೀರ್ತಿಶಾಲಿಯಾಗುವ

ಯೋಗ ಕೂಡ ಒದಗಿಬರಲಿದೆ. ಶುಭಸಂಖ್ಯೆ: 2

ಧನುಸ್ಸು: ಹಲವು ವಿಷಯಗಳ ಕುರಿತಾಗಿ ಪ್ರಯತ್ನ

ಮಾಡುತ್ತಿದ್ದೀರಿ. ಒಂದನ್ನೇ ಕುರಿತು ದೀರ್ಘ

ಪ್ರಯತ್ನ ಮಾಡಿದರೆ ಯಶಸ್ಸಿದೆ. ಶುಭಸಂಖ್ಯೆ: 1

ಮಕರ: ಬೇರೆಯವರ ಮಾತುಗಳನ್ನು ಕೇಳಿ ಪದೇಪದೆ

ನಿಮ್ಮ ನಿರ್ಧಾರಗಳನ್ನು ಬದಲಾಯಿಸಬೇಡಿ.

ತೊಂದರೆಗಳಿಗೆ ಸಿಲುಕುವಿರಿ. ಶುಭಸಂಖ್ಯೆ: 8

ಕುಂಭ: ನಿಮಗೆ ಪದೋನ್ನತಿಯ ಅವಕಾಶ ಬಂದರೂ

ಕೂಡಲೇ ಒಪ್ಪಿಕೊಳ್ಳದಿರಿ. ಮುಂದೆ ಇನ್ನೂ

ಹೆಚ್ಚು ಒಳ್ಳೆಯದೇ ಆಗಲಿದೆ. ಶುಭಸಂಖ್ಯೆ: 2

ಮೀನ: ಮಹತ್ವದ ಕಾಗದಪತ್ರಗಳನ್ನು ಅಪರಿಚಿತ

ಜನರ ಮುಂದೆ ತೋರಿಸಬೇಡಿ. ಇದರಿಂದ

ಅಪಾಯ ಒದಗಲಾರದು. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net