ಈ ರಾಶಿಯವರಿಗೆ ಮನೆಯ ಹಿರಿಯರಿಂದಲೇ ಸಂತೋಷದ ವಿಚಾರ ತಿಳಿಯಲಿದೆ...

Nitya-Bhavishya-vvani-1-2-1
Published on

ಮೇಷ: ವ್ಯಾಪಾರದ ವಿಚಾರದಲ್ಲಿ ಅಪರಿಚಿತರ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಮುನ್ನ ರ್ತಾಕವಾಗಿ ಚಿಂತಿಸಿ. ಶುಭಸಂಖ್ಯೆ: 7

ವೃಷಭ: ಇದ್ದುದನ್ನು ಬಿಟ್ಟು ಇಲ್ಲದ್ದಕ್ಕಾಗಿ ಕೊರಗುತ್ತಿದ್ದೀರಿ. ಅದರಿಂದ ನಿಮಗೆ ತೀವ್ರತರವಾದ ನಿರಾಸೆಯೇ ಉಂಟಾದೀತು. ಎಚ್ಚರವಿರಲಿ. ಶುಭಸಂಖ್ಯೆ: 9

ಮಿಥುನ: ಆಧ್ಯಾತ್ಮಿಕ ಉನ್ನತಿಯನ್ನು ಇಚ್ಛಿಸಿ ಹೆಜ್ಜೆಗಳನ್ನು ಇಡುತ್ತಿರುವುದು ಒಳ್ಳೆಯದು. ಆದರೆ ಮನೆಯ ಜವಾಬ್ದಾರಿಯನ್ನು ಬಿಡದಿರಿ. ಶುಭಸಂಖ್ಯೆ: 8

ಕಟಕ: ಮಹಾಲಕ್ಷ್ಮಿಯನ್ನು ಶ್ರದ್ಧಾಪೂರ್ವಕವಾಗಿ ಆರಾಧಿಸುವುದರಿಂದ ವಿಶೇಷ ಧನಲಾಭಕ್ಕೆ ದಾರಿಯೊಂದು ಒದಗಲಿದೆ. ಶುಭಸಂಖ್ಯೆ: 2

ಸಿಂಹ: ಸ್ವಂತ ಉದ್ಯಮದಲ್ಲಿ ನಾವೀನ್ಯವನ್ನು ಜಾರಿಗೊಳಿಸುವ ಯೋಜನೆಯು ಒಂದು ಹಂತಕ್ಕೆ ಸಾಕಾರವಾಗಲಿದೆ. ಶುಭಸಂಖ್ಯೆ: 4

ಕನ್ಯಾ: ವಿದೇಶದ ಬಂಧುಗಳೊಬ್ಬರ ಆಗಮನದಿಂದ ನಿಮ್ಮ ಮನೆಯಲ್ಲಿ ಸಂಭ್ರಮ, ಸಂತಸದ ವಾತಾವರಣ ಸೃಷ್ಟಿಯಾಗಲಿದೆ. ಶುಭಸಂಖ್ಯೆ: 3

ತುಲಾ: ದಿನದಿನ್ಯದ ಕೆಲಸ, ಕಷ್ಟಕೋಟಲೆಗಳೆಲ್ಲವೂ ಇದ್ದೇ ಇರುತ್ತವೆ. ಅದರ ಆಚೆಯ ಕಡೆಗೂ ಹಬ್ಬಿದ ಬದುಕನ್ನು ಗಮನಿಸಿ. ಶುಭಸಂಖ್ಯೆ: 6

ವೃಶ್ಚಿಕ: ಅಪರೂಪದ ಕಾರ್ಯಗಳನ್ನು ಸಾಕಾರಗೊಳಿಸಲು ಹೊರಟಿದ್ದೀರಿ. ಕಾರ್ಯಸಿದ್ಧಿಗಾಗಿ ವರಪ್ರದನಾದ ಕಾರ್ತಿಕೇಯನನ್ನು ಸ್ತುತಿಸಿ. ಶುಭಸಂಖ್ಯೆ: 1

ಧನಸ್ಸು: ಗೊಂದಲದಲ್ಲಿರುವ ನೀವು ಎರಡು ದಾರಿಗಳಲ್ಲಿ ಒಂದನ್ನು ಮಾತ್ರ ಆಯ್ದುಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನಿಸಲಿದೆ. ಶುಭಸಂಖ್ಯೆ: 5

ಮಕರ: ಇಂದಿನ ತನಕದ ನಿಮ್ಮ ಸೋಲು ಗೆಲುವುಗಳು ಅಷ್ಟೇನೂ ಮುಖ್ಯವಲ್ಲ. ಹೊಸ ಉತ್ಸಾಹದಿಂದ ಗೆಲುವನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 7

ಕುಂಭ: ಮಾತುಗಾರರಿಗೆ, ಲೇಖಕರಿಗೆಲ್ಲ ಮನ್ನಣೆ ಪಡೆಯಲು ಅಪಾರ ಅವಕಾಶಗಳು ಸಿಗಲಿವೆ. ಆದರೆ ಆತುರಪಡಬೇಡಿ. ಶುಭಸಂಖ್ಯೆ: 9

ಮೀನ: ಮನೆಯ ಹಿರಿಯರಿಂದ ಪ್ರಮುಖವಾದ ಹೊಸ ವಿಚಾರವೊಂದನ್ನು ತಿಳಿದುಕೊಂಡು ಬಹಳ ಸಂತೋಷಪಡಲಿದ್ದೀರಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net