ಈ ರಾಶಿಯವರಿಗಿಂದು ಪ್ರೀತಿ-ಪ್ರೇಮದ ಆಲೋಚನೆ ಕಾಡುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಶುಭ ಯೋಗ ಪ್ರಾಪ್ತಿ. ಸ್ವಂತ ಕೆಲಸಗಳಲ್ಲಿ ನಿಧಾನ. ಉದ್ಯೋಗದಲ್ಲಿ ವಿಘ್ನ. ಮಾನಸಿಕ ನೆಮ್ಮದಿ ಉಂಟಾಗಿ ಸಂತಸದ ಕ್ಷಣ. ಶುಭಸಂಖ್ಯೆ: 8

ವೃಷಭ: ಉದ್ಯೋಗದಲ್ಲಿ ಒತ್ತಡ. ನಿದ್ರಾಭಂಗವಾದೀತು. ಬಂಧು ಬಾಂಧವರಿಂದ ತೊಂದರೆ. ಬ್ಯಾಂಕುಗಳಿಂದ ಪತ್ರ ವ್ಯವಹಾರ. ಶುಭಸಂಖ್ಯೆ:1

ಮಿಥುನ: ಕೌಟುಂಬಿಕ-ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ. ಪ್ರೇಮದ ವಿಚಾರದಲ್ಲಿ ಜಯ. ಆಹಾರ ವ್ಯತ್ಯಾಸದಿಂದ ನಿದ್ದೆಗೆಡಬೇಕಾದೀತು. ಶುಭಸಂಖ್ಯೆ: 3

ಕಟಕ: ಉತ್ತಮ ಲಾಭ ಬರಲಿದೆ. ಉದ್ಯೋಗ ದೊರಕುವ ಮುನ್ಸೂಚನೆ ಸಿಕ್ಕು ಮಾನಸಿಕ ಸಮಾಧಾನ. ಸಾಲದ ಸಹಾಯ ಸಿಗುವುದು. ಶುಭಸಂಖ್ಯೆ: 9

ಸಿಂಹ: ಅಧಿಕ ಖರ್ಚು. ದೂರ ಪ್ರದೇಶದಲ್ಲಿ ಉದ್ಯೋಗ ಲಾಭವಾಗಲಿದೆ. ಉದ್ಯೋಗ ಸ್ಥಳದಲ್ಲಿ ಮಾನಸಿಕ ಕಿರಿಕಿರಿ ಉಂಟಾಗಬಹುದು. ಶುಭಸಂಖ್ಯೆ: 5

ಕನ್ಯಾ: ಆಕಸ್ಮಿಕ ಧನಲಾಭ. ದಾಯಾದಿ ಕಲಹ. ಸಹನೆಯಿಂದ ವ್ಯವಹರಿಸುವುದು ಉತ್ತಮ. ಆಕಸ್ಮಿಕ ಪ್ರಯಾಣ ಮಾಡಬೇಕಾಗುವುದು. ಶುಭಸಂಖ್ಯೆ: 7

ತುಲಾ: ಶುಭಕಾರ್ಯಗಳಿಗಾಗಿ ಪ್ರಯಾಣ ಮಾಡುವಿರಿ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಸ್ವಂತ ವ್ಯಾಪಾರಕ್ಕೆ ತೊಂದರೆ. ಶುಭಸಂಖ್ಯೆ: 2

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ಹೆಚ್ಚಬಹುದು. ಮೋಜು ಮಸ್ತಿಗಾಗಿ ಖರ್ಚು ಕಡಿಮೆ ಮಾಡಿ. ಶುಭಸಂಖ್ಯೆ: 6

ಧನುಸ್ಸು: ಅನಿರೀಕ್ಷಿತ ಮಾನ ಸನ್ಮಾನಗಳು. ಭೂ ವ್ಯವಹಾರಗಳಲ್ಲಿ ಜಯ ನಿಮ್ಮ ಕಡೆಗಿದೆ. ಸ್ನೇಹಿತರು ಮತ್ತು ಮಕ್ಕಳಿಂದ ಹೆಸರು, ಗೌರವ. ಶುಭಸಂಖ್ಯೆ: 9

ಮಕರ: ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುವುದು. ಪ್ರೀತಿ-ಪ್ರೇಮದ ಆಲೋಚನೆ ಕಾಡುವುದು. ಕಂಕಣ ಭಾಗ್ಯಕ್ಕೆ ಶುಭ ಕಾಲ. ಶುಭಸಂಖ್ಯೆ: 4

ಕುಂಭ: ಸಾಲದ ಸಹಾಯ ಬೇಡಬೇಕಾದ ಸಂದರ್ಭ. ಆಸ್ತಿ ವಿಚಾರವಾಗಿ ಗೊಂದಲ. ಸ್ವಯಂಕೃತ ಅಪರಾಧಗಳಿಂದ ತೊಂದರೆ. ಶುಭಸಂಖ್ಯೆ: 8

ಮೀನ: ಬಾಡಿಗೆದಾರರೊಂದಿಗೆ ವಾಗ್ವಾದ. ಸ್ತ್ರೀಯರಿಂದ ಅನುಕೂಲ. ಉದ್ಯೋಗದ ಭರವಸೆ ದೊರೆಯಲಿದೆ. ತಂದೆಯಿಂದ ಧನ ನಷ್ಟ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net