ಈ ರಾಶಿಯವರಿಗಿಂದು ಮನಸ್ಸಿನಲ್ಲಿ ಅಸಮಾಧಾನ ಹೆಪ್ಪುಗಟ್ಟೀತು....

Nithya Bhavishya vvani
Published on

ಮೇಷ: ಅಗತ್ಯವಿರುವ ಸಂದರ್ಭದಲ್ಲೇ ಆಪ್ತರು

ಕೈಕೊಟ್ಟಾರು. ಆದರೆ ಕೆಲಸದ ಸ್ಥಳದಲ್ಲಿ

ಧನಾತ್ಮಕ ಬದಲಾವಣೆ ಇದೆ. ಶುಭಸಂಖ್ಯೆ: 4

ವೃಷಭ: ಕೆಲಸದ ಹುಡುಕಾಟದಲ್ಲಿ ಯಶಸ್ಸನ್ನು

ಕಾಣಲಿದ್ದೀರಿ. ಹೊಸ ವಾತಾವರಣದಲ್ಲಿ

ವ್ಯವಹಾರಿಕ ಜಾಣತನ ಇರಲಿ. ಶುಭಸಂಖ್ಯೆ: 8

ಮಿಥುನ: ಹೊಟ್ಟೆಯ ತೊಂದರೆ ಉಂಟಾದೀತು.

ದುಡುಕಿನ ನಿರ್ಧಾರ ಕೈಗೊಳ್ಳಬೇಡಿ.

ಉದ್ಯಮಿಗಳಿಗೆ ಯಶಸ್ಸು ನಿಶ್ಚಿತ. ಶುಭಸಂಖ್ಯೆ: 2

ಕಟಕ: ಕೋರ್ಟ್ ಸಂಬಂಧಿತ ಪ್ರಕರಣಗಳಲ್ಲಿ

ಗೆಲುವನ್ನು ಪಡೆಯಲಿದ್ದೀರಿ. ಶತ್ರುಗಳೂ

ಶರಣಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 5

ಸಿಂಹ: ಆರೋಗ್ಯದಲ್ಲಿ ತುಸು ಏರುಪೇರು

ಸಂಭವಿಸಬಹುದು. ಹಣಕಾಸಿನ ವಿಚಾರದಲ್ಲಿ

ಶುಭ ಸಮಾಚಾರ ಕೇಳುವಿರಿ. ಶುಭಸಂಖ್ಯೆ: 7

ಕನ್ಯಾ: ದಿಢೀರ್ ಪ್ರವಾಸ ನಿಶ್ಚಯವಾಗಬಹುದು.

ತಂದೆ ತಾಯಿಗಳಿಂದ ಸಲಹೆ ಸೂಚನೆಗಳನ್ನು

ಕೂಡ ಪಡೆದುಕೊಳ್ಳಿ. ಶುಭಸಂಖ್ಯೆ: 1

ತುಲಾ: ಮನಸ್ಸಿನಲ್ಲಿ ಅಸಮಾಧಾನ ಹೆಪ್ಪುಗಟ್ಟೀತು.

ಕೈಗೊಂಡ ಕಾರ್ಯದಲ್ಲಿ ಧೈರ್ಯ ಇರಲಿ.

ಹರ್ಷದಾಯಕವಾದ ಸಿದ್ಧಿ ಇದೆ. ಶುಭಸಂಖ್ಯೆ: 3

ವೃಶ್ಚಿಕ: ವೈದ್ಯರಿಗೆ ಜನಮನ್ನಣೆಯ ದಿನ.

ನಿಮ್ಮದೇ ಆದ ವಿಧಾನಗಳ ಮೂಲಕ ಕೀರ್ತಿ,

ಲಾಭಗಳನ್ನು ಪಡೆಯುವಿರಿ. ಶುಭಸಂಖ್ಯೆ: 9

ಧನುಸ್ಸು: ಫಲಪುಷ್ಪ ವ್ಯಾಪಾರಿಗಳು, ಹೈನೋದ್ಯಮಿಗಳು,

ಚಿತ್ರ ನಿರ್ಮಾಪಕರಿಗೆ ಮಿಶ್ರಫಲ.

ವಜ್ರ ವ್ಯಾಪಾರಿಗಳಿಗೆ ಸಂಕಷ್ಟ. ಶುಭಸಂಖ್ಯೆ: 6

ಮಕರ: ಮಕ್ಕಳಿಂದ ನೆರವು ಸಿಕ್ಕಿದರೂ ಕೆಲವು

ಬಗೆಯ ಚಿಂತೆಗಳು ಕಾಡಬಹುದು. ಅಂದುಕೊಂಡ

ಕೆಲಸ ಸಾಗಲಾರದು. ಶುಭಸಂಖ್ಯೆ: 2

ಕುಂಭ: ಆತ್ಮೀಯರ ಭೇಟಿಯಾಗುವಿರಿ. ಕೆಲಸದ

ಸ್ಥಳದಲ್ಲಿ ಮನ್ನಣೆ ಹಾಗೂ ಮೇಲಧಿಕಾರಿಗಳ

ಮೆಚ್ಚುಗೆ ದೊರೆಯಲಿದೆ. ಶುಭಸಂಖ್ಯೆ: 4

ಮೀನ: ಧನಲಾಭದ ಕುರಿತು ಯೋಚಿಸಿದರೆ

ತಪ್ಪೇನಿಲ್ಲ. ಆದರೆ ಮೋಸಗಾರರ ಜಾಲಗಳ

ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net