ಈ ರಾಶಿಯವರು ಸೋಮಾರಿತನ ನಿಮ್ಮ ಶತ್ರು ಎಂಬುದನ್ನು ಮರೆಯದಿರಿ: ನಿತ್ಯ ಭವಿಷ್ಯ

Nithya Bhavishya
Published on

ಮೇಷ: ಮನೆಯಲ್ಲಿ ಹಣಕಾಸಿನ ವಿಚಾರದಲ್ಲಿ ಒತ್ತಡ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಉದ್ಯೋಗ ಅರಸುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 3

ವೃಷಭ: ಮಕ್ಕಳ ಸಾಧನೆಯ ಬಗ್ಗೆ ಮನೆಮಂದಿಯೆಲ್ಲ ಸಂಭ್ರಮಿಸುವಿರಿ. ನಟರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 3

ಮಿಥುನ: ಅನಾರೋಗ್ಯದಿಂದಾಗಿ ಅಸಮಾಧಾನ. ನಿರೀಕ್ಷಿಸಿದಂತೆ ಯಶಸ್ಸು ಸಿಗದಿರುವುದಕ್ಕೆ ಬೇಸರ. ಆತ್ಮೀಯರ ಸಲಹೆ. ಶುಭಸಂಖ್ಯೆ: 8

ಕಟಕ: ಗೃಹ ನಿರ್ಮಾಣದ ಕನಸಿನ ಸಾಕಾರ. ಪತ್ನಿಯ ಸಲಹೆಯನ್ನು ತಿರಸ್ಕರಿಸಬೇಡಿ. ಕಚೇರಿಯಲ್ಲಿ ಸಮಾಧಾನದಿಂದ ವರ್ತಿಸಿ. ಶುಭಸಂಖ್ಯೆ: 9

ಸಿಂಹ: ಸಾರ್ವಜನಿಕ ಜೀವನದಲ್ಲಿ ಮನ್ನಣೆ. ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 9

ಕನ್ಯಾ: ಭೂಮಿಯಿಂದ ಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ತೀರ್ಪ. ಅನಾರೋಗ್ಯ ಕಾಡೀತು. ಶುಭಸಂಖ್ಯೆ: 6

ತುಲಾ: ಮಾತೃಮೂಲವಾದಂತಹ ಧನಪ್ರಾಪ್ತಿ. ಮನೆ ಕಟ್ಟುವುದಕ್ಕೆ ಚಾಲನೆ. ಸರ್ಕಾರಿ ಕೆಲಸಗಳಲ್ಲಿ ವಿಘ್ನ ಉಂಟಾಗಿ ಬೇಸರ. ಶುಭಸಂಖ್ಯೆ: 5

ವೃಶ್ಚಿಕ: ಸಹೋದರರ ಸಲಹೆಯನ್ನು ತಿರಸ್ಕರಿಸಬೇಡಿ. ಅನಿರೀಕ್ಷಿತವಾಗಿ ಆರೋಗ್ಯ ಕೈ ಕೊಡಬಹುದು, ಜಾಗ್ರತೆ. ಸುಖ ಭೋಜನ. ಶುಭಸಂಖ್ಯೆ: 2

ಧನು: ಆರ್ಥಿಕ ಅಡಚಣೆ. ಮಾತಿನ ಬಗ್ಗೆ ನಿಗಾ ಇರಲಿ. ಕುಟುಂಬದಲ್ಲಿ ಅಸಮಾಧಾನ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 9

ಮಕರ: ದೃಢ ನಿರ್ಧಾರ ತೆಗೆದುಕೊಳ್ಳಲು ಗೊಂದಲ. ಸಂಬಂಧಿಕರಿಂದ ಸಲಹೆ. ಹಣದ ಅಪವ್ಯಯ. ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 6

ಕುಂಭ: ನಿಮ್ಮ ಕನಸಿನ ಸಾಕಾರ. ಸೋಮಾರಿತನ ನಿಮ್ಮ ಶತ್ರು ಎಂಬುದನ್ನು ಮರೆಯದಿರಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 4

ಮೀನ: ಆರೋಗ್ಯ ಪರಿಕರ ವ್ಯಾಪಾರಸ್ಥರಿಗೆ ವಿಶೇಷ ಧನಲಾಭ. ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ಸಹೋದರಿಯ ಮನೆಗೆ ಭೇಟಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net