ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಆರೋಗ್ಯ ಹದಗೆಡಬಹುದು, ಹುಷಾರು..

nity
Published on

ಮೇಷ: ಆರೋಗ್ಯ ಕೈ ಕೊಡಬಹುದು, ಹುಷಾರಾಗಿರಿ. ಅನವಶ್ಯಕ ತಿರುಗಾಟ ಸಾಧ್ಯತೆ. ಸಹೋದರರಿಂದ ಸಲಹೆ. ಶುಭಸಂಖ್ಯೆ: 8

ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ದೃಢನಿರ್ಧಾರ ತೆಗೆದುಕೊಳ್ಳಿ. ಕಚೇರಿಯಲ್ಲಿ ಅಸಮಾಧಾನ. ಕಲಾವಿದರಿಗೆ ಲಾಭ. ಶುಭಸಂಖ್ಯೆ: 7

ಮಿಥುನ: ಗುರುಹಿರಿಯರ ಅನಾರೋಗ್ಯದ ವಾರ್ತೆ. ಸಹೋದ್ಯೋಗಿಗಳಿಂದ ವಿರೋಧ. ಕೆಲಸದಲ್ಲಿ ಅಪಜಯ. ಸಂಜೆ ಶುಭವಾರ್ತೆ. ಶುಭಸಂಖ್ಯೆ: 3

ಕಟಕ: ಆತ್ಮೀಯರ ಸಮಾಗಮ. ಹಿತೈಷಿಗಳಿಂದ ಮುಖ್ಯವಾದ ವಿಚಾರದಲ್ಲಿ ಸಲಹೆ. ಅನಾರೋಗ್ಯ ಬಾಧಿಸಬಹುದು. ಶುಭಸಂಖ್ಯೆ: 4

ಸಿಂಹ: ಎಷ್ಟೋ ಕಾಲದಿಂದ ತೊಂದರೆ ಕೊಡುತ್ತಿದ್ದ ಶತ್ರುವಿನ ದಮನ. ಕೋರ್ಟು ವ್ಯವಹಾರಗಳಲ್ಲಿ ಜಯ. ನಂಬಿದವರಿಂದ ಮೋಸ .ಶುಭಸಂಖ್ಯೆ: 5

ಕನ್ಯಾ: ಮಾನಸಿಕ ಚಾಂಚಲ್ಯ. ಲೇಖಕರಿಗೆ ಒಳ್ಳೆಯ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ಫಲ ಸಿಗುವ ಸಮಯದಲ್ಲಿ ವಿಘ್ನ. ಶುಭಸಂಖ್ಯೆ: 6

ತುಲಾ: ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಇರಿ. ಉದ್ಯೋಗದ ವಿಚಾರದಲ್ಲಿ ಸ್ಥಾನಮಾನದ ನಿರೀಕ್ಷೆ. ಉತ್ತಮ ಭೋಜನ. ಶುಭಸಂಖ್ಯೆ: 3

ವೃಶ್ಚಿಕ: ಹಿತ ಶತ್ರುಗಳ ಕಾಟ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ, ಎಚ್ಚರ. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 8

ಧನಸ್ಸು: ಕುಟುಂಬದಲ್ಲಿ ಗೊಂದಲ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಯಾಗಬಹುದು ಜೋಕೆ. ಸಾಲಗಾರರ ಕಾಟ. ಶುಭಸಂಖ್ಯೆ: 9

ಮಕರ: ಸ್ಥಾನಮಾನದ ನಷ್ಟ. ಆತ್ಮೀಯ ಸ್ನೇಹಿತನ ಭೆೇಟಿ. ಯೋಚಿಸಿ ಮಾತನಾಡಿ. ದೃಢವಾದ ಆರೋಗ್ಯ ಸ್ಥಿತಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 1

ಕುಂಭ: ಗೃಹ ನಿರ್ವಣದ ವಿಚಾರದಲ್ಲಿ ಶುಭ ಸುದ್ದಿ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಹೆಂಡತಿ ಮಕ್ಕಳಿಂದ ಬೆಂಬಲ. ಶುಭಸಂಖ್ಯೆ: 9

ಮೀನ : ಮೇಲಧಿಕಾರಿಗಳಿಂದ ಪ್ರಶಂಸೆ. ಅನಪೇಕ್ಷಿತ ಧನಲಾಭವಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net