

ಮೇಷ: ಅನ್ಯರ ಅವಲಂಬನೆಯಿಂದ ನಷ್ಟ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ. ಮಹಿಳೆಯರಿಗೆ ಲಾಭ. ಶುಭ ಸಂಖ್ಯೆ 9
ವೃಷಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪರರಿಗೆ ಸಹಾನುಭೂತಿ ತೋರುವಿರಿ, ಆದಾಯಕ್ಕಿಂತ ಖರ್ಚು ಜಾಸ್ತಿ. ಉದ್ಯೋಗ ಕ್ಷೇತ್ರದಲ್ಲಿ ಒತ್ತಡ. ಶುಭ ಸಂಖ್ಯೆ 2
ಮಿಥುನ: ಹಳೆಯ ಮಿತ್ರರ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಿತಶತ್ರುಬಾಧೆ, ಪರಸ್ತ್ರೀಯಿಂದ ತೊಂದರೆ, ಅಪವಾದ. ಶುಭ ಸಂಖ್ಯೆ 8
ಕಟಕ: ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಒತ್ತಡ, ಶ್ರಮಕ್ಕೆ ತಕ್ಕ ಫಲ, ದೂರ ಪ್ರಯಾಣ, ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು. ಶುಭ ಸಂಖ್ಯೆ 5
ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಧಾರ್ವಿುಕ ವಿಚಾರದಲ್ಲಿ ಆಸಕ್ತಿ, ಕೃಷಿಕರಿಗೆ ಲಾಭ, ಸುಖ ಭೋಜನ, ಮಾತಾಪಿತರಲ್ಲಿ ವಾತ್ಸಲ್ಯ. ಶುಭ ಸಂಖ್ಯೆ 7
ಕನ್ಯಾ: ಅತಿಯಾದ ಆತ್ಮವಿಶ್ವಾಸದಿಂದ ಅಧಿಕ ಧನ ನಷ್ಟ, ದುಡುಕು ಸ್ವಭಾವ, ಆಕಸ್ಮಿಕ ಅಪಘಾತ, ಮನಃಶಾಂತಿ ಇಲ್ಲ. ಶುಭ ಸಂಖ್ಯೆ 5
ತುಲಾ: ಉದ್ಯೋಗದಲ್ಲಿ ತೊಂದರೆ, ತಾಳ್ಮೆ ಇರಲಿ, ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ. ಮಹಿಳಾ ಉದ್ಯೋಗಿಗಳಿಗೆ ಸಮಸ್ಯೆ. ಶುಭ ಸಂಖ್ಯೆ 1
ವೃಶ್ಚಿಕ: ಸಹೋದ್ಯೋಗಿಗಳೊಡನೆ ವೈಮನಸ್ಸು, ವಿಪರೀತ ಖರ್ಚು, ಅಪರಿಚಿತರಿಂದ ಸಹಾಯ. ಸ್ನೇಹಿತನಿಂದ ನಂಬಿಕೆ ದ್ರೋಹ. ಶುಭ ಸಂಖ್ಯೆ 4
ಧನುಸ್ಸು: ಸಂಕಲ್ಪಿಸಿದ ಕಾರ್ಯ ಅನುಕೂಲ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು, ಕಚೇರಿಯಲ್ಲಿ ಪೇಚಿಗೆ ಸಿಲುಕುವ ಸಂದರ್ಭ. ಶುಭ ಸಂಖ್ಯೆ 5
ಮಕರ: ಅನಿರೀಕ್ಷಿತ ದ್ರವ್ಯಲಾಭ, ಋಣವಿಮೋಚನೆ, ವಾಹನ ಯೋಗ, ಅಕಾಲ ಭೋಜನ, ವೃಥಾ ತಿರುಗಾಟ, ಮಿತ್ರರ ಭೇಟಿ. ಶುಭ ಸಂಖ್ಯೆ 6
ಕುಂಭ: ಮಾತಿನಲ್ಲಿ ಹಿಡಿತವಿರಲಿ, ಪರರ ಮಾತಿಗೆ ಕಿವಿ ಕೊಡಬೇಡಿ, ಕೆಲಸದಲ್ಲಿ ಏಕಾಗ್ರತೆ. ಹಿರಿಯ ಅಧಿಕಾರಿಗಳಿಂದ ಹೊಸ ಜವಾಬ್ದಾರಿ. ಶುಭ ಸಂಖ್ಯೆ 9
ಮೀನ: ಸಹೋದ್ಯೋಗಿಗಳಿಂದ ತೊಂದರೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಅನಾವಶ್ಯಕ ವಿಚಾರಗಳಲ್ಲಿ ಆಸಕ್ತಿ, ರಕ್ತ ಸಂಬಂಧಿ ಕಾಯಿಲೆ. ಶುಭ ಸಂಖ್ಯೆ 1